Bengaluru 22°C
Ad

ಧ್ರುವ ಸರ್ಜಾ ಜಿಮ್ ಟ್ರೈನರ್ ಮೇಲೆ ಹಲ್ಲೆ; ಧ್ರುವ ಸರ್ಜಾ ಏನಂದ್ರು?

Dhruva

ಬೆಂಗಳೂರು: ಧ್ರುವ ಸರ್ಜಾ ಜಿಮ್ ಟ್ರೈನರ್ ಪ್ರಶಾಂತ್ ಮೇಲೆ ಹಲ್ಲೆ ನಡೆದ ಪ್ರಸಂಗ ಬೆಳಕಿಗೆ ಬಂದಿದೆ. ಬನಶಂಕರಿಯ ಕೆ.ಆರ್.ರಸ್ತೆಯಲ್ಲಿ ಅಪರಿಚಿತರಿಂದ ಹಲ್ಲೆ ನಡೆದಿದೆ.

ತಡ ರಾತ್ರಿ ಜಿಮ್ ಟ್ರೈನರ್ ಪ್ರಶಾಂತ್ ಮೇಲೆ ಅಟ್ಯಾಕ್ ಮಾಡಿದ್ದಾರೆ. ಧ್ರುವ ಸರ್ಜಾ ಮನೆ ಹತ್ತಿರದ ಅಕ್ಷಯ್ ಆಸ್ಪತ್ರೆಯಲ್ಲಿ ಪ್ರಶಾಂತ್ ದಾಖಲಾಗಿದ್ದಾರೆ. ಸದ್ಯ ಅವರಿಗೆ ಟ್ರೀಟ್​ಮೆಂಟ್ ನೀಡಲಾಗುತ್ತಿದೆ.

ಇನ್ನು ಧ್ರುವ ಸರ್ಜಾ ಜಿಮ್ ಟ್ರೈನರ್ ಪ್ರಶಾಂತ್ ಮೇಲೆ ಹಲ್ಲೆ ಪ್ರಕರಣ ಸಂಬಂಧಿಸಿದಂತೆ ಯಾವುದೇ ಸಂಬಂಧವಿಲ್ಲ ಎಂದು ಮ್ಯಾನೇಜರ್ ಹೇಳಿದ್ದಾರೆ. ಘಟನೆ ಬಗ್ಗೆ ಧ್ರುವಾ ಸರ್ಜಾಗೆ ಯಾವ ಮಾಹಿತಿನೂ ಇಲ್ಲ. ಖಾಸಗಿ ವಿಚಾರಕ್ಕೆ ಸಂಬಂಧಪಟ್ಟಂತೆ ಹಲ್ಲೆ ಆಗಿರುವ ಬಗ್ಗೆ ಮಾಹಿತಿ ಇದೆ. ಇದಕ್ಕೂ ಮುಂಚೆಯೂ ಎರಡು ಸಲ ಪ್ರಶಾಂತ್ ಮೇಲೆ ಹಲ್ಲೆ ಯತ್ನ ಆಗಿದೆ. ಆದರೆ ಆಗ ಪ್ರಶಾಂತ್ ತಪ್ಪಿಸಿಕೊಂಡಿದ್ದರು. ನಿನ್ನೆ ರಾತ್ರಿ ಬನಶಂಕರಿಯಲ್ಲಿ ಮತ್ತೆ ಗುಂಪು ದಾಳಿ ಮಾಡಿದೆ.

ಈ ಕುರಿತು  ಮಾತನಾಡಿರುವ ಧ್ರುವ ಸರ್ಜಾ ಅವರು ‘ವೈಯಕ್ತಿಕ ವಿಚಾರಕ್ಕೆ ಪ್ರಶಾಂತ್ ಮೇಲೆ ಹಲ್ಲೆಯಾಗಿದೆ. ಪ್ರಶಾಂತ್ ನಮ್ ಹುಡುಗ, ಅವನ ಜೊತೆಗಿರುತ್ತೇನೆ. ಪ್ರಶಾಂತ್​ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ. ಸದ್ಯ ಪ್ರಶಾಂತ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ’ ಎಂದು  ಹೇಳಿದ್ದಾರೆ.

ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಬಿ.ಜಗಲಾಸರ್, ‘ಬನಶಂಕರಿ ಠಾಣಾ ವ್ಯಾಪ್ತಿಯ 32 ವರ್ಷದ ಯುವಕನ ಮೇಲೆ ಹಲ್ಲೆಯಾಗಿದೆ. 10;30ರ ಸುಮಾರಿಗೆ ಮನೆಗೆ ಹೋಗುವಾಗ ಕೆ.ಆರ್ ರಸ್ತೆಯಲ್ಲಿ ಘಟನೆ ನಡೆದಿದೆ. ಬೈಕ್ ನಲ್ಲಿ ಬಂದಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಹಲ್ಲೆ ಮಾಡಿದ್ದಾರೆ. ಸದ್ಯ ಯಾರು ಅನ್ನೋದರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಯಾಕಾಗಿ ಹಲ್ಲೆ ನಡೆದಿದೆ ಎನ್ನುವ ಬಗ್ಗೆಯೂ ಸ್ಪಷ್ಟವಾದ ಮಾಹಿತಿಯಿಲ್ಲ. ಜಿಮ್ ಟ್ರೈನರ್ ಹಾಗೆ ಇನ್ನೊಂದು ಕಡೆ ಇವರು ಕೆಲಸ ಮಾಡ್ತಿದ್ರು. ಅವರು ಬಂದು ಬನಶಂಕರಿ ಠಾಣೆಗೆ ದೂರು ಕೊಟ್ಟಿದ್ದಾರೆ. ತನಿಖೆ ನಡೆಯುತ್ತಿದೆ’ ಎಂದು ಹೇಳಿದ್ದಾರೆ.

 

Ad
Ad
Nk Channel Final 21 09 2023
Ad