Bengaluru 29°C
Ad

ಆಫ್ರಿಕಾದಲ್ಲಿ ಟೆಲಿಕಾಂ ಮಾರುಕಟ್ಟೆಗೆ ಅಂಬಾನಿ ಎಂಟ್ರಿ

Mukesh

ನವದೆಹಲಿ: ಜಿಯೋ ತರುವ ಮೂಲಕ ಟೆಲಿಕಾಂ ವಲಯದಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದ ಮುಕೇಶ್ ಅಂಬಾನಿ ಈಗ ಆಫ್ರಿಕನ್ ನಾಡಿನಲ್ಲೂ ಮೊಬೈಲ್ ಬ್ರಾಡ್​ಬ್ಯಾಂಡ್ ಸರ್ವಿಸ್ ಬಿಸಿನೆಸ್​ಗೆ ಕೈ ಹಾಕುತ್ತಿದ್ದಾರೆ.

ರಿಲಾಯನ್ಸ್ ಇಂಡಸ್ಟ್ರೀಸ್​ಗೆ ಸೇರಿದ ರಾಡಿಸಿಸ್ ಕಾರ್ಪ್ ಸಂಸ್ಥೆ ಘಾನಾ ದೇಶದ ಹೊಸ ಸ್ಟಾರ್ಟಪ್ ಆದ ನೆಕ್ಸ್ಟ್ ಜೆನ್ ಇನ್​ಫ್ರಾಕೋ (NGIC- Next Gen Infra Co) ಎಂಬ ಕಂಪನಿ ಜೊತೆ ಸಹಭಾಗಿತ್ವ ಮಾಡಿಕೊಳ್ಳುತ್ತಿದ್ದು, ಎರಡು ಸಂಸ್ಥೆಗಳು ಜಂಟಿಯಾಗಿ ಘಾನದಲ್ಲಿ 5ಜಿ ಬ್ರಾಡ್​ಬ್ಯಾಂಡ್ ಸೇವೆ ಒದಗಿಸಲಿವೆ ಎಂಬುದು ಗೊತ್ತಾಗಲಿದೆ.

ಎನ್​ಜಿಐಸಿ ಸಂಸ್ಥೆ 15 ವರ್ಷಗಳಿಗೆ 5ಜಿ ಬ್ರಾಡ್​ಬ್ಯಾಂಡ್ ಸರ್ವಿಸ್ ಒದಗಿಸಲು ಲೈಸೆನ್ಸ್ ಹೊಂದಿದೆ. ಈ ವರ್ಷಾಂತ್ಯದೊಳಗೆ ಅದು ಕಾರ್ಯಾಚರಣೆ ಆರಂಭಿಸಬಹುದು ಎನ್ನಲಾಗಿದೆ. ಮೈಕ್ರೋಸಾಫ್ಟ್, ಟೆಕ್ ಮಹೀಂದ್ರ, ನೋಕಿಯಾ ಓಯ್ಜ್ ಸಂಸ್ಥೆಗಳೂ ಕೂಡ ಎನ್​ಜಿಐಸಿಗೆ ನೆರವು ನೀಡಿವೆ. ಮೂರು ವರ್ಷಗಳಿಗೆ 145 ಮಿಲಿಯನ್ ಡಾಲರ್​ನಷ್ಟು ಬಂಡವಾಳ ವೆಚ್ಚ ಮಾಡಲಿದೆ. ಎನ್​ಜಿಐಸಿ ಮೂಲಕ ಅಂಬಾನಿ ಅವರು ಘಾನದಲ್ಲಿ 5ಜಿ ಕ್ರಾಂತಿ ಮಾಡಬಲ್ಲುರಾ ಎಂಬುದು ಕುತೂಹಲದ ವಿಚಾರ.

ತಂತ್ರಜ್ಞಾನದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿರುವ ಚೀನಾ ಇಡೀ ಆಫ್ರಿಕಾ ಖಂಡದಲ್ಲಿ ತನ್ನ ಪ್ರಭಾವ ಮತ್ತು ಬಿಸಿನೆಸ್ ಹಿಡಿತ ಸಾಧಿಸಲು ಯತ್ನಿಸುತ್ತಿದೆ. ಇದನ್ನು ನಿಯಂತ್ರಿಸಲು ಭಾರತದಿಂದಲೂ ಪ್ರಯತ್ನಗಳಾಗುತ್ತಿವೆ. ಈ ಪ್ರಯತ್ನಗಳ ಒಂದು ಫಲವೇ ಎನ್​ಜಿಐಸಿ ಮತ್ತು ರಿಲಾಯನ್ಸ್ ಸಹಭಾಗಿತ್ವ ಎನ್ನನಲಾಗುತ್ತಿದೆ.

 

Ad
Ad
Nk Channel Final 21 09 2023
Ad