Bengaluru 22°C
Ad

ʻಸತ್ಯದ ಹಾದಿಯಲ್ಲಿದ್ದರೆ ಶ್ರೀಕೃಷ್ಣ ಮುನ್ನಡೆಸುತ್ತಾನೆʼ : ಗೆಲುವಿನ ಬಳಿಕ  ಹರಿಯನು ನೆನೆದ  ಗೌತಮ್ 

ಐಪಿಎಲ್​ನ 17ನೇ ಆವೃತ್ತಿಯಲ್ಲಿ ಗೌತಮ್ ಗಂಭೀರ್ ಅವರ ಮಾರ್ಗದರ್ಶನದಲ್ಲಿ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಯಶಸ್ವಿಯಾಗಿದೆ.ಈ ಯಶಸ್ಸಿನ ಖುಷಿಯಲ್ಲಿ ಗಂಭೀರ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ.

ಯಾರ ಆಲೋಚನೆಗಳು ಮತ್ತು ಹಾದಿಯು ಸತ್ಯವನ್ನು ಆಧರಿಸಿವೆಯೋ ಅವರ ರಥವನ್ನು ಶ್ರೀ ಕೃಷ್ಣ ಮುನ್ನಡೆಸುತ್ತಾನೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಕೆಕೆಆರ್ ಗೆಲುವಿನ ಖುಷಿಯ ನಡುವೆ ಭಗವಂತನ ಕೃಪೆಯನ್ನು ಗೌತಮ್ ಗಂಭೀರ್ ನೆನೆದಿದ್ದಾರೆ.

ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಜರುಗಿದ ಅಂತಿಮ ಹಣಾಹಣಿಯಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ ಕೆಕೆಆರ್ ತಂಡ ಮೂರನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿತು. ವಿಶೇಷ ಎಂದರೆ ಕೆಕೆಆರ್ ತಂಡವು ಬರೋಬ್ಬರಿ ಒಂದು ದಶಕದ ಬಳಿಕ ಮತ್ತೊಮ್ಮೆ ಪ್ರಶಸ್ತಿ ಜಯಿಸಿದೆ.

Ad
Ad
Nk Channel Final 21 09 2023
Ad