Bengaluru 22°C
Ad

ಮಹಿಳೆಯರ ಚಿತ್ರಗಳನ್ನು ಮಾರ್ಫಿಂಗ್ ಮಾಡಿ ಲೈಂಗಿಕ ಕಿರುಕುಳ : ಇಬ್ಬರ ಬಂಧನ

ಯುವತಿಯರ ಫೋಟೋಗಳನ್ನು ನಗ್ನವಾಗಿ ಎಡಿಟ್‌ ಮಾಡಿ ಅವರ ಮೇಲೆ ಲೈಂಗಿಕ ಅತ್ಯಾಚಾರವೆಸಗುತ್ತಿದ್ದ ಗ್ಯಾಂಗ್‌ನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಅದರಲ್ಲೂ ಈ ಸಂಬಂಧ ಮಗನಿಗೆ ಸಾಥ್‌ ನೀಡುತ್ತಿದ್ದ ತಾಯಿ ಪರಾರಿಯಾಗಿದ್ದಾಳೆ.

ಕಾರವಾರ: ಯುವತಿಯರ ಫೋಟೋಗಳನ್ನು ನಗ್ನವಾಗಿ ಎಡಿಟ್‌ ಮಾಡಿ ಅವರ ಮೇಲೆ ಲೈಂಗಿಕ ಅತ್ಯಾಚಾರವೆಸಗುತ್ತಿದ್ದ ಗ್ಯಾಂಗ್‌ನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಅದರಲ್ಲೂ ಈ ಸಂಬಂಧ ಮಗನಿಗೆ ಸಾಥ್‌ ನೀಡುತ್ತಿದ್ದ ತಾಯಿ ಪರಾರಿಯಾಗಿದ್ದಾಳೆ. ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಅರ್ಜುನ್ ಅಲಿಯಾಸ್ ಅರುಣ ಗೌಡ ಮಳಲಿ ಹಾಗೂ ಈತನ ಸಂಬಂಧಿ ಬಾಲಚಂದ್ರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಕಾಮುಕರ ಗೊಂಪು ಯುವತಿಯರನ್ನು ಕಂಡರೆ ಬಲೆಗೆ ಬೀಳಿಸಿ ಪ್ರೀತಿಯ ನಾಟಕವಾಡಿ ಅವರ ಜೊತೆ ಫೋಟೋಗಳನ್ನು ಪಡೆದು ನಂತರ ಅದನ್ನು ಮಾರ್ಫಿಂಗ್‌ ಮಾಡಿ ನಗ್ನ ಫೋಟೋ ತೋರಿಸಿ ಯುವತಿಯರನ್ನು ಬ್ಲಾಕ್‌ಮೇಲ್‌ ಮಾಡಿ ಅವರ ಮೇಲೆ ಅತ್ಯಾಚಾರ ವೆಸಗುತ್ತಿದ್ದರು. ಹೀಗೆ ಹಲವು ಯುವತಿಯರ ಬಾಳು ಹಾಳು ಮಾಡಿರುವ ಈ ದುಷ್ಟರನ್ನು ಖಾಕಿ ಬಂಧಿಸಿದೆ.

ಬಾಲಚಂದ್ರ ಬಂಧನದ ಭೀತಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿ ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಮೂವರು ಪೊಲೀಸರ ಮೇಲೆ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಆರೋಪಿ ಅರ್ಜುನ್‌ ವಿರುದ್ಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Ad
Ad
Nk Channel Final 21 09 2023
Ad