Bengaluru 22°C
Ad

ಹೀನಾಯವಾಗಿ ಸೋತ ಹೈದ್ರಾಬಾದ್; ಕ್ಯಾಮೆರಾಗೆ ಬೆನ್ನು ತೋರಿಸಿ ಕಣ್ಣೀರು ಹಾಕಿದ ಕಾವ್ಯ ಮಾರನ್

Kavya

ಕೊಲ್ಕತ್ತಾ ನೈಟ್​ ರೈಡರ್ಸ್​​ ತಂಡದ ಬೌಲರ್​​ಗಳು ಪರಾಕ್ರಮದ ಮುಂದೆ ಸನ್​ರೈಸರ್ಸ್ ಹೈದ್ರಾಬಾದ್ ಹೀನಾಯವಾಗಿ ಸೋತು ಹೋಗಿದೆ. ಬಿಗ್​ಸ್ಕೋರ್​ ಕಲೆ ಹಾಕುವಲ್ಲಿ ಎಡವಿದ ಪ್ಯಾಟ್​ ಕಮಿನ್ಸ್​ ಪಡೆ ಐಪಿಎಲ್​ ಟ್ರೋಫಿಯನ್ನು ಬಿಟ್ಟು ಕೊಟ್ಟಿದೆ. ಮೈದಾನದಲ್ಲಿ ಕೆಕೆಆರ್​ ಆಟಗಾರರು ಟ್ರೋಫಿ ಗೆದ್ದು ಸಂಭ್ರಮದಲ್ಲಿ ತೇಲಾಡುತ್ತಿದ್ರೆ, ಇತ್ತ ಸ್ಟೇಡಿಯಂ ಗ್ಯಾಲರಿಯಲ್ಲಿ ಎಸ್​​ಆರ್​ಹೆಚ್​ ಓನರ್​, ಬ್ಯೂಟಿ ಕಾವ್ಯ ಮಾರನ್ ಕ್ಯಾಮೆರಾಗೆ ಬೆನ್ನು ತೋರಿಸಿ ಅತ್ತಿದ್ದಾರೆ.

ಹೈದ್ರಾಬಾದ್ ತಂಡದ ಒಂದೊಂದು ವಿಕೆಟ್​ ಬೀಳುವಾಗಲೂ ಕಾವ್ಯ ಭಾರೀ ಬೇಸರ ವ್ಯಕ್ತಪಡಿಸಿದ್ದಾರೆ. ಆದ್ರೂ ನಿರಂತರವಾಗಿ ಚಪ್ಪಾಳೆ ತಟ್ಟುವ ಮೂಲಕ ತಮ್ಮ ತಂಡಕ್ಕೆ ಪ್ರೋತ್ಸಾಹ ತುಂಬಿದ್ದಾರೆ. ಮುಖದಲ್ಲಿ ಮಾತ್ರ ಕಣ್ಣೀರ ಹನಿಗಳು ಜಿನುಗುತ್ತಲೇ ಇದ್ದವು ಎಂದು ಹೇಳಬಹುದು.

ಇನ್ನು ಕೊನೆಗೆ ಹೈದ್ರಾಬಾದ್​ ವಿರುದ್ಧ ಕೆಕೆಆರ್​ ಐಪಿಎಲ್​ ಟ್ರೋಫಿ ಗೆದ್ದು ಆಟಗಾರರೆಲ್ಲ ಸೇರಿ ಫುಲ್ ಸೆಲೆಬ್ರೆಷನ್​ ಮಾಡುತ್ತಿದ್ದರು. ಆದ್ರೆ ಗ್ಯಾಲರಿಯಲ್ಲಿ ಎಸ್​​ಆರ್​ಹೆಚ್​ ಓನರ್​ ಕಾವ್ಯ ಮಾರನ್ ಕ್ಯಾಮೆರಾಗೆ ಬೆನ್ನು ತೋರಿಸಿ ಗಳ, ಗಳನೇ ಅತ್ತಿದ್ದಾರೆ. ಎರಡು ಕೈಗಳಿಂದ ಕಣ್ಣೀರನ್ನು ಒರೆಸಿಕೊಂಡಿದ್ದಾರೆ. ಇದು ಮೈದಾನದಲ್ಲಿರುವ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಖತ್ ವೈರಲ್ ಆಗುತ್ತಿದೆ.

 

Ad
Ad
Nk Channel Final 21 09 2023
Ad