Bengaluru 22°C
Ad

ಅಬ್ಬಾಬ್ಬ. . . ತಲೆಯಿಲ್ಲದೆ ಒಂದೂವರೆ ವರ್ಷ ಬದುಕಿದ ಕೋಳಿ !

Ckn

ಅಮೆರಿಕಾ: ಯಾವುದೇ ಮನುಷ್ಯ ಅಥವಾ ಪ್ರಾಣಿಯು ತಲೆ ಇಲ್ಲದೆ ಬದುಕುವುದು ಅಸಾಧ್ಯ. ಆದರೆ ಕೋಳಿಯೊಂದು ತಲೆ ಕತ್ತರಿಸಿದ​ ನಂತರ 18 ತಿಂಗಳ ಕಾಲ ಬದುಕಿದೆ. ಈ ಘಟನೆ 79 ವರ್ಷಗಳ ಹಿಂದೆ ಅಮೆರಿಕದ ಕೊಲೊರಾಡೊದಲ್ಲಿ ನಡೆದಿದೆ.

ಹೌದು. . . ಲಾಯ್ಡ್ ಓಸ್ಲೆನ್ ಎಂಬ ರೈತ ಕೋಳಿ ಫಾರಂ ನಡೆಸುತ್ತಿದ್ದ. 1945 ಸೆಪ್ಟೆಂಬರ್ 18ರಂದು ಅವರ ಮನೆಯಲ್ಲಿ ಒಂದು ಪಾರ್ಟಿ ಇತ್ತು. ಔತಣ ನೀಡಲು ಕೋಳಿಯನ್ನು ಕತ್ತರಿಸಿದರು.  ಕತ್ತರಿಸಿದ ನಂತರ ಅದನ್ನು ಅಲ್ಲೆ ಹೊರಗಡೆ ಇಟ್ಟಿದ್ದಾರೆ. ಇದರಿಂದ ಕೋಳಿ ಅಲ್ಲಿಂದ ಓಡಿಹೋಯಿತು. ಕೋಳಿಯ ತಲೆಯ ಮುಂಭಾಗವನ್ನು ರೈತ ಕತ್ತರಿಸಿ ಹಾಕಿದ್ದೇ ಈ ಕೋಳಿ ಬದುಕುಳಿಯಲು ಕಾರಣ.

ಕತ್ತರಿಸಿದ ನಂತರ ಕೋಳಿಯ ತಲೆಯ ಅಗತ್ಯ ನರಗಳು ಮತ್ತು ಒಂದು ಕಿವಿ ಹಾಗೆ ಕೋಳಿಯ ದೇಹದಲ್ಲಿ ಉಳಿದುಕೊಂಡಿತ್ತು. ಮೆದುಳಿನ ಹೆಚ್ಚಿನ ಭಾಗವು ಹಾಗೇ ಉಳಿದುಕೊಂಡಿತು ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ರಚನೆಯಿಂದಾಗಿ ರಕ್ತದ ಹರಿವು ನಿಂತುಹೋಯಿತು. ಇದರಿಂದಾಗಿ ಕೋಳಿ ಬದುಕಿ ಉಳಿಯಿತ್ತು. ಇದರ ನಂತರ, ಲಾಯ್ಡ್ ಕೋಳಿಯ ಮೇಲೆ ಕರುಣೆ ತೋರಿದರು ಮತ್ತು ಅದನ್ನು ನೋಡಿಕೊಳ್ಳಲು ನಿರ್ಧರಿಸಿದರು. ಲಾಯ್ಡ್ ಕೋಳಿಗೆ ಹಾಲು ಮತ್ತು ಜೋಳದ ಧಾನ್ಯಗಳನ್ನು ಹನಿಗಳ ಮೂಲಕ ನೀಡಲು ಪ್ರಾರಂಭಿಸಿದರು.

ತಲೆ ಇಲ್ಲದೆ ಬದುಕಿ ಉಳಿದ ಕೋಳಿ ಜನರ ಆಕರ್ಷಣೆಯ ಕೇಂದ್ರವಾಯಿತು. ಆ ಕೋಳಿಯನ್ನು ನೋಡಲು ದೂರದೂರುಗಳಿಂದ ಜನ ಬರತೊಡಗಿದರು. ಲಾಯ್ಡ್ ಕೋಳಿಯ ಜನಪ್ರಿಯತೆಯನ್ನು ಕಂಡಾಗ, ಅವರು ಪ್ರಾಣಿಗಳ ಪ್ರದರ್ಶನಗಳನ್ನು ಪ್ರದರ್ಶಿನ ನೀಡಿ ಹಣ ಸಂಪಾದನೆ ಮಾಡಲು ಪ್ರಾರಂಭಿಸಿದನು. ಕೋಳಿಯಿಂದಾಗಿ ಲಾಯ್ಡ್‌ನ ಆದಾಯವು ಗಣನೀಯವಾಗಿ ಹೆಚ್ಚಾಯಿತು. ಆ ಕಾಲದ ಹತ್ತಾರು ಪತ್ರಿಕೆಗಳು ಲಾಯ್ಡ್‌ನನ್ನು ಸಂದರ್ಶಿಸಿ ಚಿಕನ್ ಮೈಕ್‌ನ ಫೋಟೋವನ್ನು ಪ್ರಕಟಿಸಿದವು. ಆ ಕಾಲದಲ್ಲೂ ಈ ಕೋಳಿಯ ಬೆಲೆ ಹತ್ತು ಸಾವಿರ ಡಾಲರ್ ಎಂದು ಅಂದಾಜಿಸಲಾಗಿದೆ.

ಆದರೆ ಮಾರ್ಚ್ 1947 ರಲ್ಲಿ ಈ ಕೋಳಿ ಜೋಳದ ಧಾನ್ಯವು ಕೋಳಿಯ ಗಂಟಲಿನಲ್ಲಿ ಸಿಲುಕಿ ಸಾವನ್ನಪ್ಪಿತ್ತು.  ಕೋಳಿಯ ಮರಣದ ನಂತರ ಮರಣೋತ್ತರ ಪರೀಕ್ಷೆ ನಡೆಸಿದಾಗ, ಕೋಳಿ ಮೈಕ್‌ನ ತಲೆಯನ್ನು ಕತ್ತರಿಸಿದ್ದರೂ, ಅದರ ದೇಹವನ್ನು ನಿರ್ವಹಿಸುವ ಮೆದುಳಿನ ಒಂದು ಭಾಗವು ಇನ್ನೂ ಉಳಿದಿದೆ ಎಂದು ಕಂಡುಬಂದಿತ್ತಂತೆ.

https://x.com/VisionaryVoid/status/1794442661937471766

Ad
Ad
Nk Channel Final 21 09 2023
Ad