Bengaluru 28°C
Ad

10ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮುಂದೆ ಶಿಕ್ಷಣ ಪಡೆಯಲು ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿ ಎದುರಿಸುತ್ತಿದ್ದಾರೆ ಅಂತಹ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮುಂದೆ ಶಿಕ್ಷಣ ಪಡೆಯಲು ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿ ಎದುರಿಸುತ್ತಿದ್ದಾರೆ ಅಂತಹ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ.

ಹೌದು  ಸರೋಜಿನಿ ದಾಮೋದರನ್ ಎಂಬ ಸಂಸ್ಥೆ ಪ್ರತಿ ವರ್ಷ 10ನೇ ತರಗತಿಯಲ್ಲಿ ಅತ್ಯುತ್ತಮ ಪ್ರತಿಭೆ ತೋರಿದ ವಿದ್ಯಾರ್ಥಿಗಳಿಗೆ “ವಿದ್ಯಾದಾನ” ಹೆಸರಿನಲ್ಲಿ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿದೆ. ಉನ್ನತ ವ್ಯಾಸಂಗಕ್ಕೆ ಹೋಗುವ ವಿದ್ಯಾರ್ಥಿಗಳ ಮೆರಿಟ್ ಮತ್ತು ಕೋರ್ಸ್ ಆಧಾರದ ಮೇಲೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ಈ ಫೌಂಡೇಶನ್‌ ಕರ್ನಾಟಕ ರಾಜ್ಯದ ಜೊತೆಗೆ ತೆಲುಗು ರಾಜ್ಯಗಳು, ಕೇರಳ, ತಮಿಳುನಾಡು, ಒಡಿಶಾ, ಗುಜರಾತ್, ಗೋವಾ, ಮಹಾರಾಷ್ಟ್ರ, ಲಡಾಖ್, ಪುದುಚೇರಿ, ದೆಹಲಿ, ಬಿಹಾರ, ಪಂಜಾಬ್, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಇತ್ಯಾದಿ ರಾಜ್ಯಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಒದಗಿಸುತ್ತದೆ.

10ನೇ ತರಗತಿಯಲ್ಲಿ ಶೇ.90 ಅಂಕ ಅಥವಾ 9 ಜಿಪಿಎ ಗ್ರೇಡ್​ನಲ್ಲಿ ತೇರ್ಗಡೆಯಾದವರು ಇವುಗಳನ್ನು ಪಡೆಯಲು ಅರ್ಹರು.
ಅಂಗವಿಕಲರಿಗೆ ಶೇ.75 ರಷ್ಟು ಅಂಕಗಳು ಅಥವಾ 7.5 GPA ಸಾಕು. ಅಭ್ಯರ್ಥಿಗಳ ಕುಟುಂಬದ ಆದಾಯ ರೂ.2 ಲಕ್ಷಕ್ಕಿಂತ ಕಡಿಮೆ ಇರಬೇಕು.

ಆಯ್ಕೆಯಾದ ಅಭ್ಯರ್ಥಿಗಳಿಗೆ ವರ್ಷಕ್ಕೆ ರೂ.10,000/- ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಅಲ್ಲದೇ, ಪ್ರತಿಭೆ ತೋರಿ ಉನ್ನತ ವ್ಯಾಸಂಗಕ್ಕೆ ಹೋಗುವ ಅಭ್ಯರ್ಥಿಗಳಿಗೆ ವರ್ಷಕ್ಕೆ ರೂ.10,000 ದಿಂದ ರೂ.75,000 ವರೆಗೂ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಮಾತ್ರ ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳಿಗೆ ಇ-ಮೇಲ್/SMS ಮೂಲಕ ಪರೀಕ್ಷಾ ಕೇಂದ್ರಗಳ ಬಗ್ಗೆ ತಿಳಿಸಲಾಗುತ್ತದೆ.

ಕರ್ನಾಟಕದ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನಾಂಕ. ತೆಲಂಗಾಣ ರಾಜ್ಯಕ್ಕೆ ಜೂನ್ 15 ಹಾಗೂ ಆಂಧ್ರಪ್ರದೇಶ ರಾಜ್ಯದ ವಿದ್ಯಾರ್ಥಿಗಳಿಗೆ ಜೂನ್ 7 ಕೊನೆಯ ದಿನವಾಗಿದೆ.

ಅಪ್ಲಿಕೇಶನ್ ಸಲ್ಲಿಸುವ ವಿಧಾನ:

  • ವಿದ್ಯಾರ್ಥಿವೇತನಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ. ಅಲ್ಲದೆ ಅಭ್ಯರ್ಥಿಗಳು ವೈಯಕ್ತಿಕ ಇಮೇಲ್ ಐಡಿ ಹೊಂದಿರಬೇಕು.
  • ಮೊದಲಿಗೆ, ಪ್ರತಿಷ್ಠಾನದ ವೆಬ್‌ಸೈಟ್ www.vidyadhan.org ತೆರೆಯಬೇಕು.
  • ಹೋಮ್ ಪೇಜ್​ನಲ್ಲಿ Apply for Scholarships ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಹೊಸ ಪುಟ ತೆರೆದುಕೊಳ್ಳುತ್ತದೆ.
  • ಬಲಭಾಗದ ಕಾಲಂನಲ್ಲಿ ಈಗಾಗಲೇ ನೋಂದಾಯಿಸಲಾಗಿದೆ/ಲಾಗಿನ್ ಆಯ್ಕೆಯನ್ನು ಕ್ಲಿಕ್ ಮಾಡಿ.
  • ನೀವು ಈಗಾಗಲೇ ನೋಂದಾಯಿಸಿಕೊಂಡಿದ್ದರೆ ಆ ವಿವರಗಳೊಂದಿಗೆ ಲಾಗಿನ್ ಮಾಡಿ. ಇಲ್ಲದಿದ್ದರೆ ನೀವು ಹೊಸದಾಗಿ ಅರ್ಜಿ ಸಲ್ಲಿಸುವ ಬದಲು ರಿಜಿಸ್ಟರ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
  • ನಂತರ ರಿಜಿಸ್ಟರ್ ಆಸ್ ಸ್ಟೂಡೆಂಟ್ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ರಿಜಿಸ್ಟರ್ ಆಯ್ಕೆಯನ್ನು ಕ್ಲಿಕ್ ಮಾಡಿ.
  • ನಂತರ ನಿಮ್ಮ ಹೆಸರು, ಇಮೇಲ್, ಪಾಸ್‌ವರ್ಡ್‌ನಂತಹ ವಿವರಗಳನ್ನು ನಮೂದಿಸಿ ಮತ್ತು ರಿಜಿಸ್ಟರ್ ಬಟನ್ ಕ್ಲಿಕ್ ಮಾಡಿ. ನಿಮ್ಮ ನೋಂದಣಿ ಪೂರ್ಣಗೊಂಡಿದೆ ಎಂದು ಸಂದೇಶ ಬರುತ್ತದೆ. ನಂತರ ಆ ವಿವರಗಳೊಂದಿಗೆ ಲಾಗಿನ್ ಮಾಡಿ.
  • ಆ ನಂತರ 10ನೇ ತರಗತಿಯ ಅಂಕಪಟ್ಟಿಯಂತೆ ಆಯಾ ಕಾಲಂಗಳಲ್ಲಿ ಹೆಸರು ಮತ್ತು ವಿಳಾಸ ತುಂಬಿ Apply Now ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದರೆ ಖಾತೆ ಆಕ್ಟಿವೇಟ್ ಆಗುತ್ತದೆ. ಲಿಂಕ್ ಅನ್ನು ನಿಮ್ಮ ವೈಯಕ್ತಿಕ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುತ್ತದೆ.
  • ನಂತರ ಅಲ್ಲಿ ನೀಡಲಾದ ಸೂಚನೆಗಳ ಪ್ರಕಾರ ಅರ್ಜಿಯನ್ನು ಪೂರ್ಣಗೊಳಿಸಿ. ದಾಖಲೆಗಳು ಮತ್ತು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಅಪ್‌ಲೋಡ್ ಮಾಡಿ. ಎಡಿಟ್​ ಆಯ್ಕೆಯೂ ಇದೆ. ಅಂತಿಮವಾಗಿ, ನೀವು Submit ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಅಪ್ಲಿಕೇಶನ್ ಪೂರ್ಣಗೊಂಡಿದೆ ಎಂಬ ಅರ್ಥ.
  • ವಿದ್ಯಾದಾನ ವಿವರಗಳನ್ನು ಇ-ಮೇಲ್‌ಗೆ ಕಳುಹಿಸಲಾಗುವುದು. ಆದ್ದರಿಂದ ಅಭ್ಯರ್ಥಿಗಳು ನಿಯಮಿತವಾಗಿ ಮೇಲ್ ಅನ್ನು ಪರಿಶೀಲಿಸಬೇಕು.
Ad
Ad
Nk Channel Final 21 09 2023
Ad