Bengaluru 25°C
Ad

10 ವರ್ಷದಲ್ಲಿ ನ್ಯೂಯಾರ್ಕ್​ನಿಂದ ಭಾರತಕ್ಕೆ ಮರಳಿವೆ 2020 ಪ್ರಾಚೀನ ವಸ್ತು

Stolen

ನವದೆಹಲಿ: ಭಾರತದ ದೇವಸ್ಥಾನಲ್ಲಿನ ವಿಗ್ರಹ ಹಾಗೂ ಇನ್ನೇನಾದರೂ ಪುರಾತನ ವಸ್ತುಗಳ ಕಳ್ಳತನ ಆಗುತ್ತಲೇ ಇರುತ್ತವೆ. ಇವುಗಳನ್ನು ವಿದೇಶಗಳಿಗೆ ಸ್ಮಗ್ಲಿಂಗ್ ಮಾಡಲಾಗುತ್ತದೆ.

ಅಮೆರಿಕದಲ್ಲಿ ಈ ರೀತಿ ಸ್ಮಗಲ್ ಆದ ವಸ್ತುಗಳನ್ನು ಆಯಾಯ ದೇಶಗಳಿಗೆ ಮರಳಿಸುವ ಪ್ರಯತ್ನಗಳಾಗುತ್ತಿರುತ್ತವೆ. ಕಳೆದ ವಾರ ನ್ಯೂಯಾರ್ಕ್​ನ ಮನ್​ಹಟನ್ ಜಿಲ್ಲೆಯ ಅಟಾರ್ನಿ ಕಚೇರಿಯಿಂದ ಪಾಕಿಸ್ತಾನ ಸೇರಿದಂತೆ ಹಲವು ದೇಶಗಳಿಗೆ ಕಳ್ಳತನಗೊಂಡ ಪ್ರಾಚೀನ ವಸ್ತುಗಳನ್ನು ಮರಳಿಸಲಾಯಿತು.

ಪಾಕಿಸ್ತಾನ ದೇಶವೊಂದಕ್ಕೇ 133 ವಸ್ತುಗಳನ್ನು ಮರಳಿಸಲಾಗಿದೆ. ಇದೇ ಅಟಾರ್ನಿ ಕಚೇರಿಯಿಂದ ಕಳೆದ 10 ವರ್ಷದಲ್ಲಿ ಭಾರತಕ್ಕೆ 2,020 ಪ್ರಾಚೀನ ವಸ್ತುಗಳನ್ನು ಮರಳಿಸಲಾಗಿದೆ. ಬೇರೆಲ್ಲಾ ದೇಶಗಳಿಗೆ ಸಿಕ್ಕಿರುವುದಕ್ಕಿಂತ ಇದು ಹೆಚ್ಚು.

ಭಾರತ ಸರ್ಕಾರ ಹಾಗೂ ಕೆಲ ಭಾರತೀಯರು ತಮ್ಮ ದೇಶದಿಂದ ಕದ್ದು ಹೋದ ಪ್ರಾಚೀನ ವಸ್ತುಗಳನ್ನು ಮರಳಿ ತರಲು ನಿರಂತರ ಪ್ರಯತ್ನ ಮಾಡಿದ ಫಲ ಇದು. ನ್ಯೂಯಾರ್ಕ್​ನ ಮನ್​ಹಟನ್ ಡಿಸ್ಟ್ರಿಕ್ ಅಟಾರ್ನಿ ಕಚೇರಿಯಿಂದ ಕಳೆದ 10 ವರ್ಷದಲ್ಲಿ ಯಾವುದೇ ದೇಶಕ್ಕೆ ಮರಳಿಸಲಾದ ಅತಿಹೆಚ್ಚು ಪ್ರಾಚೀನ ವಸ್ತುಗಳು. ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಇಟಲಿ ದೇಶಕ್ಕೆ 621 ವಸ್ತುಗಳು ಮರಳಿವೆ. ಆದರೆ, ಇಟಲಿಯ ಪ್ರಾಚೀನ ವಸ್ತುಗಳು ಅತಿ ಹೆಚ್ಚು ಮೌಲ್ಯದವಾಗಿವೆ. 80 ಮಿಲಿಯನ್ ಡಾಲರ್​ಗೂ ಹೆಚ್ಚು ಮೌಲ್ಯದ 621 ಪ್ರಾಚೀನ ವಸ್ತುಗಳನ್ನು ಇಟಲಿ ಪಡೆದಿದೆ.

ಆರ್ಥಿಕ ತಜ್ಞ ಹಾಗು ಬರಹಗಾರ ಸಂಜೀವ್ ಸಾನ್ಯಾಲ್ ಈ ವಿಚಾರವನ್ನು ಎಕ್ಸ್ ಪ್ಲಾಟ್​ಫಾರ್ಮ್​ನಲ್ಲಿ ಹಂಚಿಕೊಂಡಿದ್ದಾರೆ. ಭಾರತ 2,020 ಪ್ರಾಚೀನ ವಸ್ತುಗಳನ್ನು ಮರಳಿ ಪಡೆದಿದೆಯಾದರೂ ಅದರ ಒಟ್ಟು ಮೌಲ್ಯ ಸುಮಾರು 30 ಮಿಲಿಯನ್ ಡಾಲರ್ ಎನ್ನಲಾಗಿದೆ. ಲೆಬನಾನ್ ದೇಶ 16 ಪ್ರಾಚೀನ ವಸ್ತುಗಳನ್ನು ಮಾತ್ರವೇ ಪಡೆದಿದೆಯಾದರೂ ಅದರ ಮೌಲ್ಯ ಬರೋಬ್ಬರಿ 30 ಮಿಲಿಯನ್ ಡಾಲರ್ ಎನ್ನಲಾಗಿದೆ.

 

Ad
Ad
Nk Channel Final 21 09 2023
Ad