Bengaluru 28°C
Ad

ರೈತರಿಂದ ಹೆಚ್ಚಿನ ಹಣ ಸುಲಿಗೆ ಮಾಡುತ್ತಿರುವ ಆಗ್ರೋ: ಕ್ರಮ ಕೈಗೊಳ್ಳಲು ಮಹಾಂತೇಶ ಜಮಾದಾರ ಆಗ್ರಹ

ಅಫಜಲಪುರ ತಾಲೂಕಿನಾಧ್ಯಂತ ಆಗ್ರೋಗಳಲ್ಲಿ ನಿಗದಿತ ಬೆಲೆಗೆ ಅನುಗುಣವಾಗಿ ರಸಗೊಬ್ಬರ, ಕೀಟನಾಶಕಗಳ ಮೇಲೆ ದುಬಾರಿ ಬೆಲೆ ಹೆರಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಜಮಾದಾರ ಹಾಗೂ ನೂರಾರು ರೈತರು ಸಹಾಯಕ ಕೃಷಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕಲಬುರಗಿ: ಅಫಜಲಪುರ ತಾಲೂಕಿನಾಧ್ಯಂತ ಆಗ್ರೋಗಳಲ್ಲಿ ನಿಗದಿತ ಬೆಲೆಗೆ ಅನುಗುಣವಾಗಿ ರಸಗೊಬ್ಬರ, ಕೀಟನಾಶಕಗಳ ಮೇಲೆ ದುಬಾರಿ ಬೆಲೆ ಹೆರಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಜಮಾದಾರ ಹಾಗೂ ನೂರಾರು ರೈತರು ಸಹಾಯಕ ಕೃಷಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಹಾಂತೇಶ ಜಮಾದಾರ ದೇಶದ ಪ್ರತಿಯೊಂದು ಜೀವಿಯೂ ಬದುಕುತ್ತಿರುವುದು ರೈತರಿಂದ.ಕಷ್ಟಪಟ್ಟು ದುಡಿಯುವ ರೈತರ ಮೇಲೆ ಪಟ್ಟಣದಲ್ಲಿ ಆಗ್ರೋಗಳು ನಿರಂತರವಾಗಿ ಮೋಸ ಮಾಡುತ್ತ ಬರುತ್ತಿವೆ.ಆದರೆ ಅಧಿಕಾರಿಗಳು ಹಿಂತಹ ಆಗ್ರೋಗಳ ಮೇಲೆ ಕ್ರಮ ಕೈಗೊಳ್ಳದೆ ನಿರಾಸಕ್ತಿ ತೊರುತ್ತಿವೆ‌.

ಬೀಜಗಳು, ರಸಗೊಬ್ಬರಗಳ ನಿಗಧಿತ ಬೆಲೆಗೆ ಮೀರಿ ಹೆಚ್ಚು ಬೆಲೆಗಳಿಗೆ ರೈತುಪಯೋಗಿ ವಸ್ತುಗಳು ಮಾರಾಟ ಮಾಡುವ ಆಗ್ರೊಗಳ ಪರವಾನಿಗೆ ರದ್ದು ಮಾಡಬೇಕು.ಅದಲ್ಲದೇ ನಿಗದಿತ ಬೆಲೆಗಳ ನಾಮ ಫಲಕಗಳನ್ನು ಆಗ್ರೋಗಳ ಮುಂದೆ ಹಾಕಬೇಕು.ರೈತರು ಮತ್ತು ಆಗ್ರೋ ಮಾಲೀಕರನ್ನು ಹಾಗೂ ರೈತಪರ ಸಂಘಟನೆಗಳ ಮುಖಂಡರನ್ನು ಒಳಗೊಂಡ ಸಭೆ ಮಾಡಿ ಸೂಕ್ತ ಬೆಲೆಗಳ ಬಗ್ಗೆ ಸೂಕ್ತ ನಿರ್ಧಾರ ತಗೆದುಕೊಳ್ಳಬೇಕು ಇಲ್ಲವಾದರೆ ರೈತಪರ ಎಲ್ಲಾ ಸಂಘಟನೆಗಳು ಒಟ್ಟಿಗೆ ಸೇರಿ ಜೂನ್ 10 ರಂದು ಕೃಷಿ ಇಲಾಖೆಯ ಮುಂದೆ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಂತರ ಮಾತನಾಡಿದ ತಾಲೂಕು ಅಧ್ಯಕ್ಷ ಮಂಜುನಾಥ ನಾಯ್ಕೊಡಿ ತಾಲೂಕಿನಲ್ಲಿರುವ ಅಕ್ರಮವಾಗಿರುವ ಆಗ್ರೋಗಳನ್ನು ಕೂಡಲೆ ಮುಚ್ಚಬೇಕು.ರೈತರಿಂದ ಹೆಚ್ಚಿನ ಹಣ ಸುಲಿಗೆ ಮಾಡುತ್ತಿರುವ ಪರವಾನಿಗೆ ಇಲ್ಲದ ಆಗ್ರೊಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು.ಎರಡು ವರ್ಷ ಮಳೆಗಾಲ ಕಡಿಮೆಯಾಗಿದ್ದರಿಂದ ಕಂಗೆಟ್ಟಿರುವ ರೈತರ ಬದುಕಿಗೆ ಮತ್ತೆ ಆಗ್ರೊಗಳು ಗಾಯದ ಮೇಲೆ ಬರೆ ಎಳೆದಂತೆ ಮಾಡುತ್ತಿವೆ. ಇದೆ ರೀತಿಯ ಪ್ರಕ್ರೀಯೆ ಮುಂದುವರೆದಿದ್ದೆ ಆದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಆಗ್ರೋ ಮಾಲಿಕರೊಂದಿಗೆ ಶಾಮಿಲು ಆಗಿದ್ದಾರೆ ಎಂದು ಜಿಲ್ಲಾ ಕೃಷಿ ಕಚೇರಿಯ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು .

ಇದೆ ಸಂದರ್ಭದಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಗೋಳೆ,ಪ್ರಶಾಂತ ರಾಚಗೋಳ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.

Ad
Ad
Nk Channel Final 21 09 2023
Ad