Bengaluru 30°C
Ad

3ನೇ ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದ ಕೋಲ್ಕೊತಾ ನೈಟ್​ ರೈಡರ್ಸ್ ತಂಡ

ಟೂರ್ನಿಯುದ್ದಕ್ಕೂ ಸಮರ್ಥ ಪ್ರದರ್ಶನ ನೀಡುವ ಮೂಲಕ ಮಿಂಚಿದ್ದ ಗೌತಮ್ ಗಂಭೀರ್​ ಕೋಚಿಂಗ್​ನೊಂದಿಗೆ ಪಳಗಿದ ಕೋಲ್ಕೊತಾ ನೈಟ್​ ರೈಡರ್ಸ್ ತಂಡ ಐಪಿಎಲ್​ 2024ರ ಆವೃತ್ತಿಯ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಚೆನ್ನೈ: ಟೂರ್ನಿಯುದ್ದಕ್ಕೂ ಸಮರ್ಥ ಪ್ರದರ್ಶನ ನೀಡುವ ಮೂಲಕ ಮಿಂಚಿದ್ದ ಗೌತಮ್ ಗಂಭೀರ್​ ಕೋಚಿಂಗ್​ನೊಂದಿಗೆ ಪಳಗಿದ ಕೋಲ್ಕೊತಾ ನೈಟ್​ ರೈಡರ್ಸ್ ತಂಡ ಐಪಿಎಲ್​ 2024ರ ಆವೃತ್ತಿಯ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಫೈನಲ್​ ಪಂದ್ಯದಲ್ಲಿ ಎದುರಾಳಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ 8 ವಿಕೆಟ್​ಗಳ ಗೆಲುವು ಸಾಧಿಸಿ ಟ್ರೋಫಿ ತನ್ನದಾಗಿಸಿಕೊಂಡಿತು. ಇದು ಕೋಲ್ಕೊತಾ ಮೂಲದ ತಂಡಕ್ಕೆ 3ನೇ ಟ್ರೋಫಿಯಾಗಿದೆ.

ಈ ಹಿಂದೆ 2012 ಹಾಗೂ 2104ರಲ್ಲಿ ಗೌತಮ್ ಗಂಭೀರ್ ಅವರ ನಾಯಕತ್ವದಲ್ಲಿ ಈ ತಂಡ ಚಾಂಪಿಯನ್ ಆಗಿತ್ತು. ಇದೀಗ ಅವರದ್ದೇ ಕೋಚಿಂಗ್​ನಲ್ಲಿ ತಂಡ ಟ್ರೋಫಿ ಗೆದ್ದಿರುವುದು ವಿಶೇಷ ಎನಿಸಿದೆ. ಇದೇ ವೇಳೆ 2009ರಲ್ಲಿ (ಡೆಕ್ಕನ್ ಚಾರ್ಜರ್ಸ್ ತಂಡ) ಮತ್ತು 2016ರಲ್ಲಿ ಟ್ರೋಫಿ ಗೆದ್ದಿದ್ದ ಹೈದರಾಬಾದ್​ ಮೂಲದ ತಂಡಕ್ಕೆ ನಿರಾಸೆ ಎದುರಾಯಿತು. ಕೆಕೆಆರ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್​ ತಂಡಗಳ ಬಳಿಕ (ಐದು ಬಾರಿ ಚಾಂಪಿಯನ್ ಪಟ್ಟ) ಐಪಿಎಲ್​ನ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದೆ ಕೆಕೆಆರ್​​.

ಪಂದ್ಯದ ಆರಂಭದಿಂದಲೂ ಕೊಂಚವೂ ಪ್ರತಿರೋಧ ತೋರದ ಪ್ಯಾಟ್​ ಕಮಿನ್ಸ್​ ಬಳಗ ಟೂರ್ನಿಯಲ್ಲೇ ಅತ್ಯಂತ ಕಳಪೆ ಪ್ರದರ್ಶನ ನೀಡಿತು. ಆರ್​ಸಿಬಿ ವಿರುದ್ಧದ ಲೀಗ್​ ಪಂದ್ಯದಲ್ಲಿ 287 ರನ್ ಬಾರಿಸಿದ್ದ ಎಸ್​ಆರ್​ಎಚ್​ ತಂಡ ಈ ಫೈನಲ್​ ಎಂಬ ಹೆಸರಿಗೆ ಕಿಮ್ಮತ್ತು ನೀಡದೇ 113 ರನ್​ಗಳಿಗೆ ಆಲ್​ಔಟ್​ ಆಯಿತು.

ಇದು ಕೂಡ ಐಪಿಎಲ್​ ಫೈನಲ್​ ಇತಿಹಾಸದಲ್ಲಿ ತಂಡವೊಂದು ಬಾರಿಸಿದ ಕನಿಷ್ಠ ಮೊತ್ತದ ಕಳಪೆ ದಾಖಲೆಯಾಗಿದೆ. ಇದೇ ವೇಳೆ ಕೆಕೆಆರ್​ ತಂಡ ಮುಲಾಜಿಲ್ಲದೆ ಅದ್ಭುತ ಪ್ರದರ್ಶನ ನೀಡಿದು. ಬೌಲಿಂಗ್​ ವೇಳೆ ಬೌಲರ್​ಗಳು ಮಾರಕ ದಾಳಿ ಸಂಘಟಿಸಿದರೆ ಬ್ಯಾಟಿಂಗ್​ನಲ್ಲಿ ಸಣ್ಣ ಮೊತ್ತವನ್ನು ಕ್ಯಾರೇ ಎನ್ನಗೆ ಗೆಲುವು ಸಾಧಿಸಿತು.

ಟಾಸ್​ ಗೆದ್ದು ಮೊದಲು ಬ್ಯಾಟ್ ಮಾಡಿದ ಎಸ್​ಆರ್​ಎಚ್ ತಂಡ 18.3 ಓವರ್​ಗಳಲ್ಲಿ 114 ರನ್​ಗಳಿಗೆ ಆಲ್​ಔಟ್ ಆಯಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಕೆಕೆಆರ್ ತಂಡ 10.3 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ. 114 ರನ್ ಬಾರಿಸಿ ಸುಲಭ ಗೆಲವು ತನ್ನದಾಗಿಸಿಕೊಂಡಿತು.

ಕೆಕೆಆರ್ ಪರ ವೆಂಕಟೇಶ್ ಅಯ್ಯರ್​ (52) ರನ್​ ಬಾರಿಸಿ ಗೆಲುವಿಗೆ ಕೊಡುಗೆ ಕೊಟ್ಟರು.ಆರಂಭಿಕ ಬ್ಯಾಟರ್​ ರಹ್ಮನುಲ್ಲಾ ಗುರ್ಬಜ್​ 39 ರನ್ ಬಾರಿಸಿದರು. ಎಸ್​ಆರ್​ಎಚ್ ತಂಡ ನೀಡಿದ್ದ ಸಾಧಾರಣ ಮೊತ್ತ ಕೆಕೆಆರ್​ ತಂಡಕ್ಕೆ ಸವಾಲಾಗಲೇ ಇಲ್ಲ. ಅಲ್ಲದೆ ಎಸ್​ಆರ್​ಎಚ್ ತಂಡದ ಪ್ರದರ್ಶನ ಫೈನಲ್​ ಪಂದ್ಯಕ್ಕೂ ಸರಿ ಕಿಮ್ಮತ್ತು ಕೊಡಲಿಲ್ಲ.

 

Ad
Ad
Nk Channel Final 21 09 2023
Ad