Categories: ರಾಯಚೂರು

ರಾಯಚೂರು: ಸಿಲಿಂಡರ್ ಸರಬರಾಜು ಮಾಡುವ ಹುಡುಗರಿಗೆ, ಪ್ರತ್ಯೇಕ ಶುಲ್ಕ ನೀಡುವಂತಿಲ್ಲ

ರಾಯಚೂರು : ಅಡುಗೆ ಅನಿಲದ ಸಿಲಿಂಡರ್ ಅನ್ನು ಮನೆಗೆ ಸರಬರಾಜು ಮಾಡುವ ಹುಡುಗರಿಗೆ ಗ್ರಾಹಕರು ಪ್ರತ್ಯೇಕ ಶುಲ್ಕ ನೀಡುವಂತಿಲ್ಲ. ಬಿಲ್ ನನಲ್ಲಿ ನಮೂದಿಸಿರುವ ಮೊತ್ತವನ್ನು ಮಾತ್ರ ನೀಡುವಂತೆ ಕೋರಲಾಗಿದೆ.

ಗ್ಯಾಸ್ ಏಜೆನ್ಸಿಗಳು ಗೃಹ ಬಳಿಕೆಯ ಅನಿಲ ಸಿಲಿಂಡರನ್ನು ನೇರವಾಗಿ ಗೋದಾಮಿನಿಂದ ಗ್ರಾಹಕರಿಗೆ ಸರಬರಾಜು ಮಾಡುವುದು ಗ್ಯಾಸ್ ಏಜೆನ್ಸಿಗಳ ಜವಬ್ದಾರಿ. ಆದ್ದರಿಂದ ಯಾವುದೇ ಕಾರಣಕ್ಕೂ ಅನಿಲ ಸಿಲಿಂಡರನ್ನು ರಸ್ತೆ ಬದಿಯಲ್ಲಿ, ಸಾರ್ವಜನಿಕರ ಸ್ಥಳಗಳಲ್ಲಿ, ಮೈದಾನಗಳಲ್ಲಿ ಇಟ್ಟು ಮಾರಾಟ ಮಾಡುವಂತಿಲ್ಲ,

ಸಿಲಿಂಡರನ್ನು ಮನೆಗೆ ತಲುಪಿಸುವ ಸಂದರ್ಭದಲ್ಲಿ ಯಾವುದೇ ಡೆಲಿವರಿ ಹುಡುಗ ಸಾರ್ವಜನಿಕರಲ್ಲಿ ಬಿಲ್ ನಲ್ಲಿ ನಮೂದಿಸಿದ ಮೊತ್ತಕ್ಕಿಂತ ಹೆಚ್ಚಿನ ಹಣ ಕೇಳಿದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಕಚೇರಿಗೆ ಹಾಗೂ ದೂರವಾಣಿ ಸಂಖ್ಯೆ 08532-231678 ಮತ್ತು ತಹಶೀಲ್ದಾರ್ ಕಚೇರಿಯ ಆಹಾರ ಶಾಖೆಗೆ ದೂರು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Gayathri SG

Recent Posts

ಎಮ್.ಎಲ್.ಸಿ ಟಿಕೆಟ್ ಹಂಚಿಕೆ ಬಿಜೆಪಿಯಲ್ಲಿ ಬಂಡಾಯದ ಬಿಸಿ

ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಬಿಜೆಪಿ‌ ಟಿಕೆಟ್ ಆಕಾಂಕ್ಷಿಯಾಗಿದ್ದ ಜಿ.ಪಂ‌ ಮಾಜಿ ಉಪಾಧ್ಯಕ್ಷ, ಬಿಜೆಪಿ ಮುಖಂಡ ಸುರೇಶ ಸಜ್ಜನ್ ಟಿಕೆದ…

2 mins ago

ಎನ್‌ಸಿಪಿ ರದ್ದತಿಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಎಬಿವಿಪಿ ಪ್ರತಿಭಟನೆ

ರಾಜ್ಯ ಸರ್ಕಾರವು ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಯಾವುದೇ ಕಾರಣಕ್ಕೂ ರದ್ದು ಮಾಡಬಾರದು ಎಂದು ಒತ್ತಾಯಿಸಿ ಅಖಿಲ ಭಾರತೀಯ…

5 mins ago

ವರುಣನ ಆರ್ಭಟ : ಮಲೆ ಮಹದೇಶ್ವರ ಬೆಟ್ಟದ ಮಜ್ಜನ ಬಾವಿಯೇ ಮುಳುಗಡೆ, ನೀರು ಕಲುಷಿತ..!

ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರತಿವರ್ಷದಂತೆ ಈ ವರ್ಷವೂ, ಮಳೆಗಾಲದಲ್ಲಿ ಜೋರು ಮಳೆ ಬಂದರೆ ಪ್ರತಿ ಬಾರಿಯೂ…

14 mins ago

ಲಖನೌ ವಿರುದ್ಧದ ಪಂದ್ಯದ ಬಳಿಕ​ ಶಾಕಿಂಗ್​ ಹೇಳಿಕೆ ಕೊಟ್ಟ ರಿಷಭ್​

ಅರುಣ್​ ಜೇಟ್ಲಿ ಕ್ರೀಡಾಂಗನದಲ್ಲಿ ನಡೆದ 17ನೇ ಆವೃತ್ತಿಯ 64ನೇ ಐಪಿಎಲ್​ ಪಂದ್ಯದಲ್ಲಿ ಆಲ್ರೌಂಡ್​ ಪ್ರದರ್ಶನದ ಫಲವಾಗಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವು…

18 mins ago

ಎಂಜಿನಿಯರಿಂಗ್‌ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ರಾಜಧಾನಿಯ ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಪ್ರತಿಷ್ಠಿತ ಪಿಇಎಸ್ ಯೂನಿವರ್ಸಿಟಿಯಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

30 mins ago

ಭಾರತೀಯ ಮೂಲದ ಮಹಿಳೆಗೆ ಬಸ್‌ ನಿಲ್ದಾಣದಲ್ಲಿ ಚೂರಿ ಇರಿದು ಹತ್ಯೆ

ಭಾರತೀಯ ಮೂಲದ 66ವರ್ಷದ ಮಹಿಳೆಯನ್ನು ಚೂರಿಯಿಂದ ಇರಿದು ಹತ್ಯೆಗೈದಿರುವ ಘಟನೆ ವಾಯುವ್ಯ ಲಂಡನ್‌ ನ ಬಸ್‌ ನಿಲ್ದಾಣದಲ್ಲಿ ನಡೆದಿರುವುದಾಗಿ ವರದಿ…

30 mins ago