News Karnataka Kannada
Saturday, April 20 2024
Cricket
ಅಡುಗೆ ಮನೆ

‘ಅನಾನಸ್ ಜ್ಯಾಮ್’ ಮಾಡುವ ಸರಳ ವಿಧಾನ ಹೀಗಿದೆ

pineapple jam
Photo Credit : Pexels

ಅನಾನಸ್ ನಲ್ಲಿ ವಿಟಮಿನ್ ಎ, ಬಿ, ಸಿ ಸಮೃದ್ಧವಾಗಿದೆ. ಮಾತ್ರವಲ್ಲ ದೇಹಕ್ಕೆ ಅಗತ್ಯವಾದ ಹಲವು ಪೋಷಕಾಂಶಗಳು ಅನಾನಸ್‌ನಲ್ಲಿದೆ. ಪೌಷ್ಟಿಕತಜ್ಞೆರ ಮತ್ತು ಲೇಖಕಿ ಡೀನ್ನೆ ಪಾಂಡೆ ಪ್ರಕಾರ, ಒಂದು ಕಪ್ ಅನಾನಸ್ 79 ಮಿಗ್ರಾಂ ವಿಟಮಿನ್ ಸಿ ಅನ್ನು ಹೊಂದಿರುತ್ತದೆ. ಇದು ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್‌ನ ಉತ್ತಮ ಮೂಲವಾಗಿದೆ. ಅನಾನಸ್‌ನಲ್ಲಿ ವಿಟಮಿನ್ ಸಿ ಇರುವುದರಿಂದ ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಅದರಂತೆ ಇಂದು ಸುಲಭವಾಗಿ ರುಚಿಕರವಾದ ಅನಾನಸ್ ನಿಂದ ಮಾಡುವ ಜ್ಯಾಮ್ ಅನ್ನು ತಯಾರಿಸುವ ವಿಧಾನವನ್ನು ತಿಳಿದುಕೊಳ್ಳಿ. . .

ಬೇಕಾಗುವ ಪದಾರ್ಥಗಳು:

  • ಅನಾನಸ್ -1
  • ಸಕ್ಕರೆ- 2 ಬಟ್ಟಲು
  • ಫೈನಾಪಲ್ ಎಸೆನ್ಸ್- 2-3 ಹನಿ
  • ಫುಡ್ ಕಲರ್- ಸ್ವಲ್ಪ
  • ನಿಂಬೆ ರಸ- 1 ಚಮಚ

ಮಾಡುವ ವಿಧಾನ:

  • ಮೊದಲಿಗೆ ಅನಾನಸ್’ನ್ನು ಸಣ್ಣ ಸಣ್ಣ ತುಂಡುಗಳಾಗಿ ಮಾಡಿಕೊಂಡು ಅರ್ಧ ಬಟ್ಟಲು ನೀರು ಸೇರಿ ಮಿಕ್ಸಿ ಜಾರ್’ಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ
  • ನಂತರ ಸಕ್ಕರೆ, ನಿಂಬೆ ರಸ, ಫೈನಾಪಲ್ ಎಸೆನ್ಸ್ ಹಾಗೂ ಫುಡ್ ಕಲರ್ ಸೇರಿಸಿ ಮಿಶ್ರಣ ಮಾಡಿ. ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು. ಆದಕ್ಕೆ ಈ ಮಿಶ್ರಣವನ್ನು ಹಾಕಿ ಮಿಶ್ರಣ ದಪ್ಪಾಗುವವರೆಗೆ ಕೈಯಾಡಿಸಿ.
    ನಂತರ ಉರಿಯಿಂದ ಕೆಳಗಿಳಿಸಿ ತಣ್ಣಗಾಗಲು ಬಿಡಿ. ಇದೀಗ ರುಚಿಕರವಾರ ಪೈನಾಪಲ್ ಜಾಮ್ ಸವಿಯಲು ಸಿದ್ಧ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು