News Karnataka Kannada
Wednesday, May 15 2024
ದೆಹಲಿ

ಯಮುನಾ ನದಿಯಲ್ಲಿ ಅಮೋನಿಯಾ ಹೆಚ್ಚಳ: ದೆಹಲಿಯ ಹಲವೆಡೆ ನೀರಿನ ಬವಣೆ

Yamuna
Photo Credit :

ಯಮುನಾ ನದಿಯಲ್ಲಿ ಅಮೋನಿಯಾ ಮಟ್ಟ ಹೆಚ್ಚಾಗುತ್ತಿದ್ದು, ರಾಷ್ಟ್ರರಾಜಧಾನಿ ದೆಹಲಿ ಜನರಿಗೆ ನೀರಿನ ಅಭಾವ ಎದುರಾಗುವ ಸಾಧ್ಯತೆಗಳಿವೆ ಎಂದು ವರದಿ ತಿಳಿಸಿದೆ.

ಯಮುನಾ ನದಿಯಲ್ಲಿ ಅಮೋನಿಯಾದ ಸ್ವೀಕಾರಾರ್ಹ ಮಿತಿ 0.5 ಪಿಪಿಎಂ (Parts Per million) ಗಿಂತಲೂ ಹೆಚ್ಚಾಗಿದೆ. ಅಧಿಕವಾದ ಅಮೋನಿಯಾ ಅಂಶವು ಜಲಚರಗಳ ರಕ್ತದಲ್ಲಿ ವಿಷಕಾರಿ ಅಂಶ ಹೆಚ್ಚಾಗಲು ಕಾರಣವಾಗುತ್ತದೆ. ಪಿಪಿಎಂ ಎಂದರೆ ಪ್ರತಿ ಯೂನಿಟ್ ನೀರಿನಲ್ಲಿ ಇರಬಹುದಾದಂತಹ ರಾಸಾಯನಿಕ ದ್ರವ್ಯವನ್ನು ಅಂದಾಜಿಸಲು ಈ ಮಾಪನ ಬಳಸಲಾಗುತ್ತದೆ.

ಯಮುನಾ ನದಿಯಲ್ಲಿನ ಈ ಪರಿಸ್ಥಿತಿಯಿಂದ ಸೋನಿಯಾ ವಿಹಾರ್, ವಜೀರಾಬಾದ್, ಚಂದ್ರವಾಲ್ ಹಾಗೂ ಓಖ್ಲಾ ನೀರು ಸಂಸ್ಕರಣಾ ಘಟಕಗಳಿಗೆ ಸಮಸ್ಯೆ ಎದುರಾಗಿದೆ. ಇದರಿಂದ ದೆಹಲಿಯ ಹಲವು ಭಾಗಗಳಿಗೆ ಇಂದು ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲ ಮಂಡಳಿ ತಿಳಿಸಿದೆ. ಶನಿವಾರ ಯಮುನಾ ನದಿಯಲ್ಲಿನ ಮಾಲೀನ್ಯದ ಸೂಚ್ಯಾಂಕ 2.2 ಪಿಪಿಎಂ ನಷ್ಟಾಗಿದ್ದು, ದೆಹಲಿಯಲ್ಲಿ ನೀರಿನ ಬಿಕ್ಕಟ್ಟು ಹೆಚ್ಚಾಗುವ ಸಾಧ್ಯತೆ ಇದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು