Bengaluru 30°C
Ad

ಪಪುವಾ ನ್ಯೂಗಿನಿಯಾದಲ್ಲಿ ಭಯಾನಕ ಭೂಕುಸಿತ :670ಕ್ಕೂ ಹೆಚ್ಚು ಜನ ಮೃತ್ಯು

ಪಪುವಾ ನ್ಯೂಗಿನಿಯಾ ದೇಶದಲ್ಲಿ ಭಯಾನಕ ಭೂಕುಸಿತ ಸಂಭವಿಸಿದೆ. ಭೀಕರ ದುರಂತದಲ್ಲಿ 670ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಶನ್ ಮಾಹಿತಿ ನೀಡಿದೆ.

ಪೋರ್ಟ್ ಮೊರೆಸ್ಬಿ: ಪಪುವಾ ನ್ಯೂಗಿನಿಯಾ ದೇಶದಲ್ಲಿ ಭಯಾನಕ ಭೂಕುಸಿತ ಸಂಭವಿಸಿದೆ. ಭೀಕರ ದುರಂತದಲ್ಲಿ 670ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಶನ್ ಮಾಹಿತಿ ನೀಡಿದೆ.

ಈ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ಇನ್ನೂ ಹೆಚ್ಚುತ್ತಲೇ ಇದೆ ಎಂದು ಹೇಳಲಾಗುತ್ತಿದೆ. ಯಾಂಬಲಿ ಗ್ರಾಮ ಹಾಗೂ ಎಂಗಾ ಪ್ರಾಂತ್ಯದ ಅಧಿಕಾರಿಗಳು ನಡೆಸಿದ ಲೆಕ್ಕಾಚಾರದಲ್ಲಿ ಶುಕ್ರವಾರ ಸಂಭವಿಸಿದ ಭೂಕುಸಿತದಲ್ಲಿ 150 ಕ್ಕೂ ಹೆಚ್ಚು ಮನೆಗಳು ಸಮಾಧಿಯಾಗಿದೆ.

670ಕ್ಕೂ ಅಧಿಕ ಮಂದಿ ಮಣ್ಣಿನ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಇನ್ನೂ ಹೆಚ್ಚಾಗಲಿದೆ ಅಂತ ಅಂತಾರಾಷ್ಟ್ರೀಯ ವಲಸಿಗರ ಸಂಸ್ಥೆಯ ಮುಖ್ಯಸ್ಥ ಸೆರ್ಹಾನ್ ಅಕ್ಟೊಪ್ರಾಕ್ ಮಾಹಿತಿ ನೀಡಿದ್ದಾರೆ. ಆದರೆ ಇದುವರೆಗೆ ಕೇವಲ ಐದು ಮಂದಿಯ ದೇಹಗಳು ಪತ್ತೆಯಾಗಿವೆ.

ಮಣ್ಣಿನ ಅಡಿ ಸಿಲುಕಿಕೊಂಡವರನ್ನು ಹೊರ ತೆರೆಯಲು ರಕ್ಷಣಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಈ ಭೂಕುಸಿತದಲ್ಲಿ ಪಾರಾದ ಜನರನ್ನು ರಕ್ಷಣ ಸಿಬ್ಬಂದಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದ್ದಾರೆ. ಸುಮಾರು 6ರಿಂದ 8 ಮೀಟರ್‌ನಷ್ಟು ಮಣ್ಣು ಹಾಗೂ ಅವಶೇಷಗಳ ಅಡಿಯಲ್ಲಿ ಜನರು ಸಿಲುಕಿರುವುದರಿಂದ ಬದುಕುಳಿದವರನ್ನು ಹುಡುಕುವ ಆಸೆಯನ್ನು ರಕ್ಷಣಾ ಸಿಬ್ಬಂದಿ ಕೈಬಿಟ್ಟಿದ್ದಾರೆ ಎಂದು ಅಕ್ಟೋಪ್ರಾಕ್ ಹೇಳಿದ್ದಾರೆ.

Ad
Ad
Nk Channel Final 21 09 2023
Ad