Bengaluru 22°C
Ad

ಭೀಮಾನದಿ ಸ್ವಚ್ಚತಾ ಕಾರ್ಯದಲ್ಲಿ ಅಫಜಲಪುರ ಯುವ ಬ್ರಿಗೇಡ್

ತಾಲೂಕಿನಲ್ಲಿ ವಿಭಿನ್ನ ರೀತಿಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುವ ಯುವ ಬ್ರಿಗೇಡ್ ಕಾರ್ಯಕರ್ತರು ದೇವತೆ ಗ್ರಾಮ ಘತ್ತರಗಿ ಭಾಗ್ಯವಂತಿದೇವಿ ಗ್ರಾಮದಲ್ಲಿನ ಭೀಮಾನದಿಯ ದಡದಲ್ಲಿ ನದಿ ಸ್ವಚ್ಚತೆ ಮಾಡಿದರು.

ಅಫಜಲಪುರ: ತಾಲೂಕಿನಲ್ಲಿ ವಿಭಿನ್ನ ರೀತಿಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುವ ಯುವ ಬ್ರಿಗೇಡ್ ಕಾರ್ಯಕರ್ತರು ದೇವತೆ ಗ್ರಾಮ ಘತ್ತರಗಿ ಭಾಗ್ಯವಂತಿದೇವಿ ಗ್ರಾಮದಲ್ಲಿನ ಭೀಮಾನದಿಯ ದಡದಲ್ಲಿ ನದಿ ಸ್ವಚ್ಚತೆ ಮಾಡಿದರು.

ಪ್ರತಿವರ್ಷವೂ ನದಿಯ ಸ್ವಚ್ಚತೆಗಾಗಿ ಯುವ ಬ್ರಿಗೇಡ್ ಕಾರ್ಯಕರ್ತರು ನದಿಯಲ್ಲಿ ಎಸೆದಿರುವ ಪ್ಲಾಸ್ಟಿಕ್ ವಸ್ತುಗಳು, ಬಟ್ಟೆಗಳು, ಸೇರಿದಂತೆ ಕಲ್ಮಶ ವಸ್ತುಗಳನ್ನು ತೆಗೆದು ಬೆರಡೆಗೆ ಸಾಗಿಸುತ್ತಾರೆ.

C (8)

ನದಿಯ ನೀರು ಶುದ್ದವಾಗಿಟ್ಟುಕೊಂಡರೆ ಜಲಚರಗಳು ಮತ್ತು ಜೀವಿಗಳು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ.ಅದಕ್ಕಾಗಿ ನಮ್ಮ ನದಿಯನ್ನು ನಾವು ಸ್ವಚ್ಚವಾಗಿಟ್ಟುಕೊಳ್ಳುವುದು ನಮ್ಮ ಜವಾಬ್ದಾರಿ. ಅದಕ್ಕಾಗಿ ಯಾರು ಕೂಡಾ ನದಿಯಲ್ಲಿ ಬಟ್ಟೆ ಪ್ಲಾಸ್ಟಿಕ್ ವಸ್ತುಗಳನ್ನು ಎಸೆಯಬಾರದು ಎಂಬುದು ಯುವ ಬ್ರಿಗೇಡ್ ತಾಲೂಕು ಸಂಚಾಲಕ ರಾಹುಲ್ ಸುತಾರ ಅವರ ಮನವಿಯಾಗಿದೆ

Ad
Ad
Nk Channel Final 21 09 2023
Ad