News Karnataka Kannada
Sunday, April 21 2024
Cricket
ಮೈಸೂರು

ಮೈಸೂರು: ಕೆಲಸದ ಆಮಿಷವೊಡ್ಡಿದ ವಂಚಕರ ಬಂಧನ

Fraudsters arrested for offering jobs
Photo Credit :

ಮೈಸೂರು: ಉದ್ಯೋಗದ ಹುಡುಕಾಟದಲ್ಲಿದ್ದ ವ್ಯಕ್ತಿಯೊಬ್ಬರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ, ಅವರಿಂದ ಲಕ್ಷಾಂತರ ರೂ ಹಣ ಪಡೆದು ಮೋಸ ಮಾಡಿದ್ದ ಮೂವರು ಆರೋಪಿಗಳನ್ನು  ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರಿಂದ ೨೪ ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಮಾಹಿತಿ ನೀಡಿ ಮೈಸೂರಿನ ಸಾತಗಳ್ಳಿಯ ಡಿಪ್ಲೊಮೊ ಪದವೀಧರರೊಬ್ಬರು ಕೊರೊನಾ ಸಂದರ್ಭದಲ್ಲಿ ಕೆಲಸ ಕಳೆದುಕೊಂಡು ಉದ್ಯೋಗದ ಹುಡುಕಾಟದಲ್ಲಿದ್ದರು. ಗೂಗಲ್‌ನಲ್ಲಿ ಹುಡುಕಾಟ ಮಾಡುವಾಗ  ಎಮಿನೆಂಟ್ ಮೈಂಡ್ ಎಂಬ ಕಂಪನಿಯ ಮಾಹಿತಿ ತಿಳಿದು ಅರ್ಜಿ ಸಲ್ಲಿಸಿದ್ದಾರೆ. ಕಂಪನಿಯವರು ಸಂದರ್ಶನ ಮಾಡಿ ನಿಮ್ಮ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲು ಹಣ ನೀಡಬೇಕು ಎಂದು ಕೇಳಿದ್ದಾರೆ.

ಆರಂಭದಲ್ಲಿ ಒಂದು ಸಾವಿರ ಪಡೆದುಕೊಂಡ ಕಂಪನಿ  2020ರ ನವೆಂಬರ್‌ನಿಂದ 2022ರ ಏಪ್ರಿಲ್‌ವರೆಗೆ 48,80,300 ರೂ.ಗಳನ್ನು ಹಲವು ಖಾತೆಗಳಿಗೆ ಸಂದಾಯ ಮಾಡಿಸಿಕೊಂಡಿದೆ. ಹಣ ನೀಡಿ ವರ್ಷಗಳೇ ಆದರೂ ಕೆಲಸ ಕೊಡಿಸದಿದ್ದಾಗ ಇದೊಂದು ಆನ್‌ಲೈನ್ ದೋಖಾ ಎಂಬುದು ಗೊತ್ತಾಗಿದೆ. ಬಳಿಕ ಅವರು ಸೆನ್ ಅಪರಾಧ ಠಾಣೆಗೆ ದೂರು ನೀಡಿದ್ದಾರೆ ಎಂದರು.

ಪ್ರಕರಣ ದಾಖಲಿಸಿಕೊಂಡು ಸೆನ್ ಠಾಣೆ ಪಿಐ ಶಬ್ಬೀರ್ ನೇತೃತ್ವದಲ್ಲಿ ತನಿಖೆ ಕೈಗೊಂಡ ಪೊಲೀಸರು ವೈಜ್ಞಾನಿಕವಾಗಿ ಸಾಕ್ಷಿ ಸಂಗ್ರಹಿಸಿ ನಾಲ್ವರು ಆರೋಪಿಗಳಲ್ಲಿ ಬೆಂಗಳೂರು ಮೂಲದ  ಮೂವರನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ 7 ಸ್ಯಾಮ್ ಸಂಗ್ ಕೀ ಪೇಡ್ ಮೊಬೈಲ್, 4 ಸ್ಮಾರ್ಟ್ ಫೋನ್, 11 ಸಿಮ್ ಕಾರ್ಡ್, 2 ಲ್ಯಾಪ್ ಟಾಪ್, 3 ಕಚೇರಿ ಸೀಲುಗಳು, 24 ಲಕ್ಷ ರೂ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಪೊಲೀಸರ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದರು.

ಈ ವಂಚನೆ ಈ ಜಾಲದಲ್ಲಿ ಇನ್ನೂ ಹಲವರು ಇದ್ದು, ಶೀಘ್ರವೇ ಅವರನ್ನೂ ಬಂಧಿಸಲಾಗುವುದು. ಬಂಧಿತ ಆರೋಪಿಗಳೆಲ್ಲ ಬೆಂಗಳೂರಿನವರಾಗಿದ್ದು, ಒಬ್ಬ ಎಸ್ಸೆಸ್ಸೆಲ್ಸಿ, ಮತ್ತಿಬ್ಬರು ಡಿಪ್ಲೊಮಾ ಶಿಕ್ಷಣ ಪಡೆದವರಾಗಿದ್ದಾರೆ. ಇವರೆಲ್ಲ ಸೇರಿ ನಕಲಿ ಕಂಪನಿಗಳ ಹೆಸರಿನಲ್ಲಿ ಏಳೆಂಟು ಮಂದಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದಾರೆ. ಶೀಘ್ರವೇ ವಂಚನೆಗೆ ಒಳಗಾದ  ವ್ಯಕ್ತಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದರು.

ಪತ್ತೆ ಕಾರ್ಯದಲ್ಲಿ ಸೆನ್ ಪೊಲೀಸ್ ಠಾಣೆ (ಸೈಬರ್ ಎಕಾನಮಿಕ್ ಮತ್ತು ನಾರ್ಕೋಟಿಕ್ಸ್ ಅಪರಾಧ ಪೋಲೀಸ್ ಠಾಣೆ) ಇನ್ಸ್‌ಪೆಕ್ಟರ್ ಶಬ್ಬೀರ್ ಹುಸೇನ್, ಸಿಬ್ಬಂದಿ ಎಸ್. ಮಂಜುನಾಥ್, ರಂಗಸ್ವಾಮಿ, ಬಿ.ವಿ. ಮಂಜುನಾಥ್, ಮಹೇಶ್ ಭಾಗಿಯಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಈ ಸಂದರ್ಭ ಸೆನ್ ಪೊಲೀಸ್ ಠಾಣೆ ಶಬ್ಬೀರ್ ಹುಸೇನ್ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು