Bengaluru 22°C
Ad

ಫ್ರಾನ್ಸ್ ಮೂಲದ ಕಾರು ಕಂಪನಿಯ ಬ್ರಾಂಡ್​ ಅಂಬಾಸಿಡರ್ ಆಗಿ ಧೋನಿ ನೇಮಕ

ಫ್ರೆಂಚ್ ಮೂಲದ ಭಾರತೀಯ ಕಾರು ತಯಾರಕ ಕಂಪನಿ ಸಿಟ್ರೊಯೆನ್ ಭಾರತದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರನ್ನು ಭಾರತದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿದೆ.

ಬೆಂಗಳೂರು: ಫ್ರೆಂಚ್ ಮೂಲದ ಭಾರತೀಯ ಕಾರು ತಯಾರಕ ಕಂಪನಿ ಸಿಟ್ರೊಯೆನ್ ಭಾರತದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರನ್ನು ಭಾರತದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿದೆ.

ಎಂಎಸ್ ಧೋನಿ ಭಾರತದಲ್ಲಿ ಕಂಪನಿಯ ಕಾರುಗಳ ರಾಯಭಾರಿಯಾಗಿರುವ ಕಾರಣ ಮುಂಬರುವ ಪ್ರಚಾರಗಳಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಈ ಕಂಪನಿಯು ಭಾರತದಲ್ಲಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು ಧೋನಿ ಅವರನ್ನು ನೇಮಕ ಮಾಡಿಕೊಳ್ಳುವ ಮೂಲಕ ಮಾರುಕಟ್ಟೆಯಲ್ಲಿ ಇನ್ನಷ್ಟು ಚೈತನ್ಯ ಪಡೆದುಕೊಳ್ಳಲಿದೆ.

ಹೊಸ ಪ್ರಕಟಣೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಮಹೇಂದ್ರ ಸಿಂಗ್ ಧೋನಿ, ಆಟೋಮೊಬೈಲ್ ಉತ್ಸಾಹಿಯಾಗಿರುವ ನಾನು ಹೊಸತನ ಮತ್ತು ಎಂಜಿನಿಯರಿಂಗ್ ಅದ್ಭುತಗಳಿಗೆ ಖ್ಯಾತಿ ಪಡೆದಿರುವ ಫ್ರೆಂಚ್ ಬ್ರಾಂಡ್ ಸಿಟ್ರೊಯೆನ್ ಜತೆ ಕೈಜೋಡಿಸಲು ನಾನು ಸಂತೋಷಪಡುತ್ತೇನೆ ಎಂದು ಹೇಳಿದ್ದಾರೆ.

ಸಿಟ್ರೋಯೆನ್ ಇಂಡಿಯಾದ ಬ್ರಾಂಡ್ ಡೈರೆಕ್ಟರ್ ಶಿಶಿರ್ ಮಿಶ್ರಾ ಈ ಕುರಿತು ಮಾಹಿತಿ ನೀಡಿ, ಭಾರತದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾದ ಧೋನಿ ಅವರೊಂದಿಗಿನ ಸಹಭಾಗಿತ್ವವು ಭಾರತೀಯ ಮಾರುಕಟ್ಟೆಯಲ್ಲಿ ನಮ್ಮನ್ನು ಬಲಪಡಿಸಲಿದೆ, ಸಮರ್ಪಣೆ ನಮ್ಮ ಬ್ರಾಂಡ್​​ನ ಸಿದ್ಧಾಂತವಾಗಿದ್ದು ಧೋನಿ ಸಂಪೂರ್ಣವಾಗಿ ಹೊಂದಿಕೆಯಾಗುತ್ತಾರೆ ಎಂದು ನುಡಿದರು.

 

Ad
Ad
Nk Channel Final 21 09 2023
Ad