Bengaluru 22°C
Ad

‘ಮಿಸ್ಟರ್ ಅಂಡ್ ಮಿಸೆಸ್ ಮಹಿ’ ಬಾಲಿವುಡ್​ ಸಿನಿಮಾ ಸಾಂಗ್​ನಲ್ಲಿ ಕಾಣಿಸಿಕೊಂಡ ರೋಹಿತ್ ಶರ್ಮಾ

ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಕ್ರಿಕೆಟ್​ ಸಾಧನೆ ಜತೆಗೆ ಇದೀಗ ಬಾಲಿವುಡ್​ ಕಡೆಗೂ ಎಂಟ್ರಿ ಪಡೆದಿದ್ದಾರೆ ಎಂಬುದಾಗಿ ವರದಿಯಾಗಿದೆ. ಅವರು ಕ್ರೀಡೆಯನ್ನು ಆಧಾರಿಸಿ ಮಾಡಿರು ಸಿನಿಮಾ “ಮಿಸ್ಟರ್ & ಮಿಸೆಸ್ ಮಹಿ” ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಕ್ರಿಕೆಟ್​ ಸಾಧನೆ ಜತೆಗೆ ಇದೀಗ ಬಾಲಿವುಡ್​ ಕಡೆಗೂ ಎಂಟ್ರಿ ಪಡೆದಿದ್ದಾರೆ ಎಂಬುದಾಗಿ ವರದಿಯಾಗಿದೆ. ಅವರು ಕ್ರೀಡೆಯನ್ನು ಆಧಾರಿಸಿ ಮಾಡಿರು ಸಿನಿಮಾ “ಮಿಸ್ಟರ್ & ಮಿಸೆಸ್ ಮಹಿ” ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

‘ಮಿಸ್ಟರ್ ಅಂಡ್ ಮಿಸೆಸ್ ಮಹಿ’ ಎಂಬ ಸಿನಿಮಾ ಬಾಲಿವುಡ್ ಮತ್ತೊಂದು ಕ್ರಿಕೆಟ್ ಆಧಾರಿತ ಡ್ರಾಮಾ ಸಿನಿಮಾಗಿದೆ. ಇದು ಈ ವಾರದ ಕೊನೆಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು ಭಾರಿ ನಿರೀಕ್ಷೆ ಮುಟ್ಟಿಸಿದೆ.

ಪ್ರತಿಭಾವಂತ ನಟ ರಾಜ್ ಕುಮಾರ್ ರಾವ್ ಮತ್ತು ಜಾನ್ವಿ ಕಪೂರ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಕಾಲ್ಪನಿಕ ಚಿತ್ರವು ಕ್ರಿಕೆಟ್ ಬಗ್ಗೆ ಉತ್ಸಾಹ ಹೊಂದಿರುವ ದಂಪತಿ ಜೀವನದ ಕುರಿತಾಗಿದೆ.

ಈ ಚಲನಚಿತ್ರವು ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಹಲವಾರು ಏರಿಳಿತಗಳನ್ನು ಬಿಂಬಿಸುತ್ತದೆ. ಮಹಿಳಾ ಕ್ರೀಡಾಪಟುಗಳು ಎದುರಿಸುತ್ತಿರುವ ಸವಾಲುಗಳು ಮತ್ತು ಖ್ಯಾತಿಯನ್ನು ಇದು ಬೊಟ್ಟು ಮಾಡಿದೆ.

ಕ್ರಿಕೆಟ್ ಕಥಾಹಂದರದ ಅವಿಭಾಜ್ಯ ಅಂಗವಾಗಿರುವುದರಿಂದ, ಚಿತ್ರದ ಆಕರ್ಷಣೆ ಮತ್ತು ವಾಸ್ತವಿಕತೆಯನ್ನು ಹೆಚ್ಚಿಸಲು ರೋಹಿತ್ ಶರ್ಮಾ ಅವರಂತಹ ಕ್ರಿಕೆಟ್ ಸೂಪಸ್ಟಾರ್​ಗಳನ್ನು ಚಿತ್ರ ತಂಡ ಸೇರಿಸಿಕೊಂಡಿದ್ದಾರೆ. ಅವರಲ್ಲಿ ರೋಹಿತ್ ಕೂಡ ಒಬ್ಬರು.

ಚಿತ್ರ ಬಿಡುಗಡೆಗೆ ಕೆಲವು ದಿನಗಳ ಮೊದಲು, ‘ಅಗರ್ ತುಮ್ ಹೋ’ ಎಂಬ ಹಾಡನ್ನು ಯೂಟ್ಯೂಟ್​ನಲ್ಲಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಭಾರತೀಯ ನಾಯಕ ರೋಹಿತ್ ಶರ್ಮಾ ಕೂಡ ಇದ್ದರು.

ರಾಜ್​ಕುಮಾರ್​ ಮತ್ತು ಜಾನ್ವಿ ರೋಹಿತ್ ಅವರ ಶತಕವನ್ನು ಊಟದ ಮೇಜಿನ ಬಳಿ ಸಂಭ್ರಮಿಸುತ್ತಿರುವುದು ಹಾಡಿನಲ್ಲಿ ಕಂಡುಬಂದಿದೆ. ಕ್ರಿಕೆಟ್ ಪ್ರೇಮಿಗಳಾಗಿ ತಮ್ಮ ಉತ್ಸಾಹ ತೋರುವುದು ಕಾಣಿಸುತ್ತಿದೆ.

ಈ ಹಾಡಿನಲ್ಲಿ ಭಾರತೀಯ ನಾಯಕ ರೋಹಿತ್ ಶರ್ಮಾ ಅವರ ಉಪಸ್ಥಿತಿಯು ಕ್ರಿಕೆಟ್ ಅಭಿಮಾನಿಗಳನ್ನು ಚಲನಚಿತ್ರದ ಕಡೆಗೆ ಸೆಳೆಯುವ ಸಾಧ್ಯತೆಯಿದೆ. ಮೇ 31 ರ ಬಿಡುಗಡೆಗೆ ಮುಂಚಿತವಾಗಿ ಅದರ ನಿರೀಕ್ಷೆಯನ್ನು ಹೆಚ್ಚಿಸುತ್ತದೆ.

Ad
Ad
Nk Channel Final 21 09 2023
Ad