News Karnataka Kannada
Saturday, April 20 2024
Cricket
ಚಿಕಮಗಳೂರು

ಚಿಕ್ಕಮಗಳೂರು: ನೋಡುಗರ ಮನ ಗೆದ್ದ ಪಾದುಕಾ ಪ್ರಧಾನ ಯಕ್ಷಗಾನ

Chikkamagaluru: Paduka Pradhana Yakshagana wins the hearts of the viewers
Photo Credit : News Kannada

ಚಿಕ್ಕಮಗಳೂರು: ನಗರದ ಜಯನಗರ ಬಡಾವಣೆಯ ಶ್ರೀಸಂಕಷ್ಟಹರ ಗಣಪತಿ ದೇವಾಲಯದಲ್ಲಿ ಯಕ್ಷ ಸಿರಿನಾಟ್ಯ ವೃಂದದಿಂದ ಇತ್ತೀಚೆಗೆ ನಡೆದ ಪಾದುಕಾ ಪ್ರಧಾನ ಯಕ್ಷಗಾನ ತಾಳಮದ್ದಲೆ ನೋಡುಗರ ಮನ ಗೆದ್ದಿತು. ತಂದೆಯ ಅಣತಿಯಂತೆ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ವನವಾಸಕ್ಕೆ ತೆರಳುವ ವೇಳೆ ಆತನ ಅನುಜ ಭರತ ಶ್ರೀರಾಮನನ್ನು ತಡೆದು ಅಯೋಧ್ಯೆಗೆ ಹಿಂತಿರುಗಿ ಸಿಂಹಾಸನವನ್ನು ಅಲಂಕರಿಸುವಂತೆ ಮನವೊಲಿಸುತ್ತಾನೆ.

ಶ್ರೀರಾಮ ಯಾವುದೇ ಒತ್ತಾಯಕ್ಕೂ ಮಣಿಯದ ಹಿನ್ನಲೆಯಲ್ಲಿ ಅಂತಿಮವಾಗಿ ತನ್ನ ಅಣ್ಣನ ಪಾದುಕೆಗಳನ್ನು ತಂದು ಅವುಗಳನ್ನು ಸಿಂಹಾಸನದ ಮೇಲಿರಿಸಿ ಅವುಗಳ ಹೆಸರಿನಲ್ಲಿ ರಾಜ್ಯಭಾರ ಮಾಡುವ ಕಥಾ ಹಂದರವನ್ನು ಹೊಂದಿರುವ ತಾಳ ಮದ್ದಲೆಯಲ್ಲಿ ಕಲಾವಿದರ ಚುರುಕು ಸಂಭಾಷಣೆ, ನವಿರು ಹಾಸ್ಯ ನೋಡುಗರನ್ನು ಮೂರು ಗಂಟೆಗೂ ಅಧಿಕ ಕಾಲ ಹಿಡಿದಿಡುವಲ್ಲಿ ಯಶಸ್ವಿಯಾಯಿತು.

ಮಾತಿನ ಮೇಲಾಟದಲ್ಲಿ ಶ್ರೀರಾಮನಾಗಿ ಪರಮೇಶ್ವರ, ಭರತನಾಗಿ ಅನಿರುದ್ಧ ಎಂ.ಕಾಕತ್ಕರ್, ತಮ್ಮ ಚುರುಕು ಸಂಭಾಷಣೆಯಿಂದ ರಾಮಾಯಣದ ವಿವಿಧ ಮಜಲುಗಳನ್ನು ಸಭಿಕರೆದುರು ಸಮರ್ಥವಾಗಿ ತೆರೆದಿಟ್ಟರು. ದಶರಥನಾಗಿ ನಾಗರಾಜರಾವ್ ಕಲ್ಕಟ್ಟೆ, ಸೀತೆಯಾಗಿ ಶೋಭಾ ಪರಮೇಶ್ವರ, ಲಕ್ಷ್ಮಣನಾಗಿ ಪ್ರತಿಭಾ ನಂದಕುಮಾರ್, ಮಂತ್ರಿ ಸುಮಂತ್ರನಾಗಿ ಸುರೇಶ್‌ಭಟ್, ವಶಿಷ್ಠ ಮಹರ್ಷಿಯಾಗಿ ರೇಖಾನಾಗರಾಜರಾವ್, ಗುಹನಾಗಿ ಮಹಾಲಕ್ಷ್ಮಿ ಹೆಗಡೆ, ಕೌಸಲ್ಯೆಯಾಗಿ ಕೆ.ಎಚ್.ಗೀತಾ, ಕೈಕೇಯಿಯಾಗಿ ಅಪೂರ್ವ ವೆಂಕಟೇಶ್, ಸುಮಿತ್ರಳಾಗಿ ಪೂರ್ಣಿಮಾ, ಓಲೆಕಾರರಾಗಿ ಹಿಮಗಿರಿ ಮತ್ತುದಕ್ಷಗಮನ ಸೆಳೆದರು.

ಹಿಮ್ಮೇಳದಲ್ಲಿ ಭಾಗವತರಾಗಿ ಮಹೇಶ್‌ ಕಾಕತ್ಕರ್, ಮದ್ದಳೆಯಲ್ಲಿ ವೆಂಕಟೇಶದೇವಸ್ಯ, ಚಂಡೆಯಲ್ಲಿ ಅನಿರುದ್ಧ ಎಂ.ಕಾಕತ್ಕರ್ ಭಾಗವಹಿಸಿದ್ದರು. ಅರ್ಚಕ ಗೋವಿಂದಸ್ವಾಮಿ, ಯಕ್ಷಗಾನ ಅಭಿಮಾನಿ ಬಳಗದ ಸಂಚಾಲಕ ಕೆ.ಎನ್. ಮಂಜುನಾಥ ಭಟ್, ಯಕ್ಷಸಿರಿಯ ವೈಷ್ಣವಿ ಎನ್.ರಾವ್, ಕಲಾವಿದ ಕೆ.ಎನ್.ನಾಗಭೂಷಣ್, ಸಾಂಸ್ಕೃತಿಕ ಸಂಘದಕೆ.ಎನ್. ಗೋಪಾಲಕೃಷ್ಣ, ವಿನೀತ್‌ಕುಮಾರ್, ಪುಷ್ಪಾರಾಜೇಂದ್ರ, ವಾಸಂತಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು