News Karnataka Kannada
Monday, April 22 2024
Cricket
ಹುಬ್ಬಳ್ಳಿ-ಧಾರವಾಡ

ಜೂ. 27ರಿಂದ ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲು ಸಂಚಾರ ಆರಂಭ

June. Vande Bharat train service between Bengaluru and Dharwad to start from May 27
Photo Credit : Freepik

ಹುಬ್ಬಳ್ಳಿ: ವಂದೇ ಭಾರತ್ ರೈಲು ಜೂನ್ 27ರಿಂದ ಕೆಎಸ್‌ಆರ್ ಬೆಂಗಳೂರು-ಧಾರವಾಡ ಮಧ್ಯೆ ಸಂಚಾರ ಪ್ರಾರಂಭಿಸಲಿದೆ. ಧಾರವಾಡ ರೈಲು ನಿಲ್ದಾಣದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಅಂದು ವರ್ಚುಯಲ್ ಆಗಿ ಈ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ.

ಪ್ರತಿ ಮಂಗಳವಾರ ಹೊರತುಪಡಿಸಿ, ವಾರದ ಆರು ದಿನ ಈ ರೈಲು ಸಂಚರಿಸಲಿದೆ. ಬೆಳಗ್ಗೆ 5.45ಕ್ಕೆ ಕೆಎಸ್ಎಆರ್ ಬೆಂಗಳೂರು ನಿಲ್ದಾಣದಿಂದ ಹೊರಡುವ ಈ ರೈಲು, 5.55ಕ್ಕೆ ಯಶವಂತಪುರ, 915 ಕ್ಕೆ ದಾವಣಗೆರೆ, 11.30ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ, ಮಧ್ಯಾಹ್ನ 12.10ಕ್ಕೆ ಧಾರವಾಡ ತಲುಪುವುದು.

ಮರಳಿ ಧಾರವಾಡ ನಿಲ್ದಾಣದಿಂದ ಮಧ್ಯಾಹ್ನ 1.15 ಕ್ಕೆ ಹೊರಟು, 1.35ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ, 3.38ಕ್ಕೆ ದಾವಣಗೆರೆ, ರಾತ್ರಿ 7.13ಕ್ಕೆ ಯಶವಂತಪುರ ಹಾಗೂ 7.45ಕ್ಕೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣ ತಲುಪಲಿದೆ. ಕೆಎಸ್ಎಆರ್ ಬೆಂಗಳೂರು ಮತ್ತು ಧಾರವಾಡ ಮಧ್ಯೆ ಸಂಚರಿಸುವ ಈ ವಂದೇ ಭಾರತ್ ರೈಲು ಸದ್ಯ 8 ಬೋಗಿಗಳೊಂದಿಗೆ ಸಂಚರಿಸಲಿದೆ. ಪ್ರಯಾಣಿಕರ ಸ್ಪಂದನೆ ಗಮನಿಸಿ, ಬೋಗಿಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದು ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು