News Karnataka Kannada
Friday, April 19 2024
Cricket
ಉಡುಪಿ

ಕಂಬಳ ಗದ್ದೆಯಂತಾದ ಮಣಿಪಾಲ ಕೈಗಾರಿಕಾ ವಲಯ ರಸ್ತೆ

Road leading to Manipal Industrial Area becomes muddy, causing inconvenience to daily commuters
Photo Credit : News Kannada

ಉಡುಪಿ: ಮಣಿಪಾಲದ ಕೈಗಾರಿಕಾ ವಲಯಕ್ಕೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಕೆಸರುಮಯಗೊಂಡಿದ್ದು, ದ್ವಿಚಕ್ರ ವಾಹನ ಸವಾರರು, ಸಾರ್ವಜನಿಕರು ಸಂಚರಿಸಲು ಪರದಾಟ ನಡೆಸುವ ದುಸ್ಥಿತಿ ನಿರ್ಮಾಣ ಆಗಿದೆ.

ಪ್ರತಿದಿನ ಕೈಗಾರಿಕೆಗೆ ಸಂಬಂಧಪಟ್ಟಂತಹ ಘನ ವಾಹನಗಳು ಸಂಚರಿಸುತ್ತಿದ್ದು, ಒಂದು ಬದಿಯ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ರಸ್ತೆ ಅವ್ಯವಸ್ಥೆ ಜನಾಕ್ರೋಶಕ್ಕೆ ಕಾರಣವಾಗಿದೆ‌.

ಇಲ್ಲಿ ಒಂದು ಬದಿಯಲ್ಲಿ ಕಾಂಕ್ರೆಟ್ ಹಾಕಿದ್ದರೂ ಸಹ ಇನ್ನೊಂದು ಬದಿಯಲ್ಲಿ ರಸ್ತೆಯ ಪೂರ್ಣ ಕಾಮಗಾರಿ ನಡೆಸದೇ ಇರುವುದರಿಂದ ರಸ್ತೆಯಲ್ಲಿ ಹೊಂಡ ನಿರ್ಮಾಣವಾಗಿ ಕಂಬಳ ಗದ್ದೆಯಂತಾಗಿದೆ.

ಉಡುಪಿ ನಗರಸಭಾ ವ್ಯಾಪ್ತಿಯ ಹೆಚ್ಚಿನ ಕಾಂಕ್ರೀಟ್ ಕಾಮಗಾರಿಗಳು ಮೇ ಹಾಗೂ ಜೂನ್ ನಲ್ಲಿ ಆರಂಭಿಸಲಾಗಿದ್ದು, ಇದರ ಪರಿಣಾಮವನ್ನು ಈಗ ಜನತೆ ಅನುಭವಿಸುವಂತಾಗಿದೆ. ಇನ್ನು ಮಳೆ ನಿರಂತರವಾಗಿ ಸುರಿದರೆ ರಸ್ತೆಯಲ್ಲಿ ಸಾಗುವುದೇ ಹರಸಾಹಸವಾಗಲಿದೆ.

ಈಗಾಗಲೇ ಘನವಾಹನಗಳು, ರಿಕ್ಷಾ , ದ್ವಿಚಕ್ರವಾಹನಗಳ ಸಾವಾರರು ಜೀವ ಕೈಯಲ್ಲಿಟ್ಟುಕೊಂಡು ಸಾಗುವ ಪರಿಸ್ಥಿತಿ ಎದುರಾಗಿದೆ. ಮಳೆಯ ಮುಂಚೆಯೇ ಕಾಮಗಾರಿ ಪೂರ್ಣಗೊಳಿಸಿದ್ದರೆ ಇಂತಹ ಸಮಸ್ಯೆ ಎದುರಾಗಿತ್ತಿರಲಿಲ್ಲ . ಅಧಿಕಾರಿಗಳ ನಿರ್ಲಕ್ಷ ತನದಿಂದ ನಿತ್ಯ ಸಾಗುವ ಮಕ್ಕಳ ಬಸ್ ಗಳು ಸೇರಿದಂತೆ ನಾಗರೀಕರಿಗೆ ಸಮಸ್ಯೆ ಉಂಟಾಗಿದೆ. ಆದಷ್ಟು ಬೇಗ ಈ ರಸ್ತೆ ಸಮಸ್ಯೆ ಸರಿಪಡಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು