Bengaluru 24°C
Ad

ಮಿನರಲ್ ವಾಟರ್ ಬಾಟೆಲ್‌ನಲ್ಲಿ ಸತ್ತ ಜಿರಳೆ ಪತ್ತೆ : ಬೆಚ್ಚಿಬಿದ್ದ ಗ್ರಾಹಕ

ಜಿರೆಳೆ ಕಾಟ ನೀರಿಗೂ ತಪ್ಪಿದಲ್ಲ ಅನ್ನೋದಕ್ಕೆ ಈ ಘಟನೆ ಸಾಕ್ಷಿ. ಬಾಯಾರಿಕೆಗೆ ನೀರು ಕುಡಿಯಲು ಮಿನರಲ್ ವಾಟರ್ ಬಾಟಲ್‌ ಖರೀದಿಸಿ ಗ್ರಾಹಕ ಬಾಟಲಿಯಲ್ಲಿ ಜಿರಳೆ ಕಂಡು ಹೌಹಾರಿದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದಲ್ಲಿರುವ ಶಾಂತು ಹೋಟೆಲ್‌ನಲ್ಲಿ ನಡೆದಿದೆ.

ಯಾದಗಿರಿ: ಜಿರೆಳೆ ಕಾಟ ನೀರಿಗೂ ತಪ್ಪಿದಲ್ಲ ಅನ್ನೋದಕ್ಕೆ ಈ ಘಟನೆ ಸಾಕ್ಷಿ. ಬಾಯಾರಿಕೆಗೆ ನೀರು ಕುಡಿಯಲು ಮಿನರಲ್ ವಾಟರ್ ಬಾಟಲ್‌ ಖರೀದಿಸಿ ಗ್ರಾಹಕ ಬಾಟಲಿಯಲ್ಲಿ ಜಿರಳೆ ಕಂಡು ಹೌಹಾರಿದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದಲ್ಲಿರುವ ಶಾಂತು ಹೋಟೆಲ್‌ನಲ್ಲಿ ನಡೆದಿದೆ.

ಶಾಂತು ಹೆಸರಿನ ಹೋಟೆಲ್‌ಗೆ ಹೋಗಿದ್ದ ಗ್ರಾಹಕ. ಬಾಯಾರಿಕೆ ತಣಿಸಲು SPLASH ಕಂಪನಿಯ ವಾಟರ್ 2ಲೀ. ಬಾಟಲಿ ಖರೀದಿಸಿದ್ದಾನೆ. ಇನ್ನೇನು ಬಾಟಲಿ ಎತ್ತಿ ಗಟಗಟ ಕುಡಿಯಬೇಕು ಎನ್ನುವಷ್ಟರಲ್ಲಿ ಬಾಟಲಿಯಲ್ಲಿ ಜಿರಳೆ ಸತ್ತು ಬಿದ್ದಿರುವುದು ಕಂಡಿದ್ದಾನೆ. ಇದೇ ಮೊದಲ ಬಾರಿ ವಾಟರ್ ಬಾಟಲಿಯಲ್ಲಿ ಜಿರಳೆ ಪತ್ತೆಯಾಗಿರುವುದು ಕಂಡು ಹೋಟೆಲ್‌ಗೆ ಬಂದಿದ್ದ ಗ್ರಾಹಕರು ಸಹ ಬೆಚ್ಚಿಬಿದ್ದಿದ್ದಾರೆ.

ಆಹಾರ ಸುರಕ್ಷತಾ ಅಧಿಕಾರಿಗಳ ಗಮನಕ್ಕೆ ತಂದ ಗ್ರಾಹಕ. ಗ್ರಾಹಕರ ದೂರಿನ ಮೇರೆಗೆ ಕೂಡಲೇ ಸ್ಥಳಕ್ಕೆ ಬಂದ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ಹೋಟೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಎರಡು ಲೀ. ಕಂಪನಿಯ ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡರು

Ad
Ad
Nk Channel Final 21 09 2023
Ad