Bengaluru 22°C
Ad

ಅಧ್ಯಕ್ಷ ಸ್ಥಾನ ಸಿಕ್ಕರೆ ಮಂತ್ರಿ ಸ್ಥಾನ ಬಿಡಲು ನಾನು ಸಿದ್ದ: ಸಚಿವ ಕೆಎನ್​ ರಾಜಣ್ಣ

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸನ್ನಿವೇಶ ಎದುರಾದರೆ ನಾನು ಅಧ್ಯಕ್ಷನಾಗಲು ಸಿದ್ಧನಿದ್ದೇನೆ. ಅಧ್ಯಕ್ಷ ಸ್ಥಾನ ಸಿಕ್ಕರೆ ಮಂತ್ರಿ ಸ್ಥಾನ ಬಿಡಲು ನಾನು ತಯಾರಿದ್ದೇನೆ ಎಂದು ಸಚಿವ ಕೆಎನ್​ ರಾಜಣ್ಣ ಹೇಳಿದರು.

ಬೆಂಗಳೂರು:  ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸನ್ನಿವೇಶ ಎದುರಾದರೆ ನಾನು ಅಧ್ಯಕ್ಷನಾಗಲು ಸಿದ್ಧನಿದ್ದೇನೆ. ಅಧ್ಯಕ್ಷ ಸ್ಥಾನ ಸಿಕ್ಕರೆ ಮಂತ್ರಿ ಸ್ಥಾನ ಬಿಡಲು ನಾನು ತಯಾರಿದ್ದೇನೆ ಎಂದು ಸಚಿವ ಕೆಎನ್​ ರಾಜಣ್ಣ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಮುಂದೆ ಯಾವುದೆ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ. ಅಧ್ಯಕ್ಷ ಸ್ಥಾನ ಸಿಕ್ಕರೆ ಪಕ್ಷಕ್ಕಾಗಿ ತನು,ಮನ ಅರ್ಪಿಸುತ್ತೇನೆ ಎಂದರು.

ಸರ್ಕಾರಕ್ಕೆ ಒಂದು ವರ್ಷ ಪೂರ್ಣವಾಗಿದೆ. ಐದು ವರ್ಷ ಪೂರ್ಣ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ, ಡಿಕೆ ಶಿವಕುಮಾರ್​ ಉಪಮುಖ್ಯಮಂತ್ರಿಯಾಗಿ ಇರುತ್ತಾರೆ ಅಂತ ವೇಣುಗೋಪಾಲ್ ಹೇಳಿದ್ದರು. ಆದರೆ ಚುನಾವಣೆ ಫಲಿತಾಂಶ ಬರಲಿ ಆಮೇಲೆ ಧ್ರುವೀಕರಣ ಆಗಬಹುದು. ಇಲ್ಲಿ ಮಾತ್ರವಲ್ಲ ಎಲ್ಲ ಕಡೆಯೂ ಆಗಬಹುದು ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ‌ ಡ್ರಗ್ಸ್ ಮಾಫಿಯಾ ಹೆಚ್ಚುತ್ತಲೇ ಇದೆ. ಮಾದಕ ವಸ್ತು ನಿಗ್ರಹ ದಳ ಹೆಚ್ಚು ಕಾರ್ಯೋನ್ಮುಕವಾಗಬೇಕು. 2647 ಪೆನ್​ಡ್ರೈವ್ ಇದೆ ಅಂತಾರೆ. ಹೀಗಾಗಿ ಸಂತ್ರಸ್ಥರಿಂದ ಹೆಲ್ಫ್​ಲೈನ್​ಗೆ ದೂರು ಬಂದಿರಬಹುದು ಎಂದರು.

ಪ್ರಜ್ವಲ್ ಮಾಡಿರುವುದು ಅಪರಾಧ, ರಿಲೀಸ್ ಆಗಿದ್ದು ಅಪರಾಧವೇ. ರಮೇಶ್ ಜಾರಕಿಹೊಳಿಗೂ ಇದೇ ಟ್ರ್ಯಾಪ್ ತಾನೇ ಆಗಿದ್ದು. ಶಾಸಕ ರಮೇಶ್ ಜಾರಕಿಹೊಳಿ ಪ್ರಕರಣದಲ್ಲೂ ಕ್ರಮ ಆಗಲಿಲ್ಲ. ಹೆಚ್​ಡಿ ರೇವಣ್ಣ ಮತ್ತು ನಮ್ಮ ಕುಟುಂಬ ಬೇರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಯಾವ ಕುಟುಂಬಕ್ಕೆ ಅಗೌರವ ಆಗುತ್ತಿದೆ ಹೇಳಬೇಕಲ್ವಾ ಎಂದರು.

Ad
Ad
Nk Channel Final 21 09 2023
Ad