Bengaluru 21°C
Ad

ತಿರುಪತಿಯಲ್ಲಿ ಜೂ.30ರ ವರೆಗೆ ವಿಐಪಿಗಳಗಿಲ್ಲ ದರ್ಶನ ಭಾಗ್ಯ : ಕಾರಣ ಇಲ್ಲಿದೆ

ಇಲ್ಲಿನ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ವಿಐಪಿ ದರ್ಶನವನ್ನು ಜೂ.30ರ ವರೆಗೂ ರದ್ದು ಗೊಳಿಸಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್‌ (ಟಿಟಿಡಿ) ಶನಿವಾರ ತಿಳಿಸಿದೆ.

ತಿರುಪತಿ : ಇಲ್ಲಿನ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ವಿಐಪಿ ದರ್ಶನವನ್ನು ಜೂ.30ರ ವರೆಗೂ ರದ್ದು ಗೊಳಿಸಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್‌ (ಟಿಟಿಡಿ) ಶನಿವಾರ ತಿಳಿಸಿದೆ.

ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಮುಗಿದಿದ್ದು, ಬೇಸಿಗೆ ರಜೆ ಕಳೆಯಲು ಬರುತ್ತಾರೆ ಹಾಗೂ ಚುನಾವಣೆ ಕೂಡ ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ತಿಮ್ಮಪ್ಪನ ದರ್ಶನ ಪಡೆಯಲು ಬರುತ್ತಿರುವ ಭಕ್ತಾದಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಆದ್ದರಿಂದ ಪ್ರತಿ ವಾರ ಶುಕ್ರವಾರ, ಶನಿವಾರ ಹಾಗೂ ಭಾನುವಾರ ವಿಐಪಿ ದರ್ಶನವನ್ನು ರದ್ದು ಗೊಳಿಸಿ, ಉಚಿತ ದರ್ಶನಕ್ಕೆ ಅವಕಾಶ ಮಾಡಿಕೊಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಟಿಟಿಡಿ ತಿಳಿಸಿದೆ. ಈ ಅವಧಿಯಲ್ಲಿ ಭಕ್ತರ ದರ್ಶನ ಶಿಫಾರಸು ಪತ್ರಗಳನ್ನು ಸ್ವೀಕರಿಸದಿರಲು ತೀರ್ಮಾನಿಸಿದೆ.

Ad
Ad
Nk Channel Final 21 09 2023
Ad