Bengaluru 27°C
Ad

ಅಮೆರಿಕದ ಖ್ಯಾತ ಗಾಯಕಿ ನಿಕ್ಕಿ ಮಿನಾಜ್ ಬಂಧನ : ಕೋಟ್ಯಂತರ ಹಣ ನಷ್ಟ

ಅಮೇರಿಕಾದ ಖ್ಯಾತ ಗಾಯಕಿ, ರ್ಯಾಪರ್‌, ಮತ್ತು ಮಾಡೆಲ್ (Model) ಆಗಿರುವ ನಿಕ್ಕಿ ಮಿನಾಜ್ ಅನ್ನು ನೆದರ್​ಲ್ಯಾಂಡ್ ಪೊಲೀಸರು ಬಂಧಿಸಿದ್ದಾರೆ

ಅಮೇರಿಕಾದ ಖ್ಯಾತ ಗಾಯಕಿ, ರ್ಯಾಪರ್‌, ಮತ್ತು ಮಾಡೆಲ್ ಆಗಿರುವ ನಿಕ್ಕಿ ಮಿನಾಜ್ ಅನ್ನು ನೆದರ್​ಲ್ಯಾಂಡ್ ಪೊಲೀಸರು ಬಂಧಿಸಿದ್ದಾರೆ. ನಿಕಿ ಮಿನಾಜ್ ನಿಷೇಧಿತ ಮಾದಕ ವಸ್ತುವನ್ನು ತಮ್ಮ ಬಳಿ ಹೊಂದಿದ್ದಾರೆಂಬ ಆರೋಪದಲ್ಲಿ ಅವರನ್ನು ಬಂಧಿಸಲಾಗಿದೆ.ಆಮ್​ಸ್ಟರ್​ಡ್ಯಾಮ್ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ನಿಕ್ಕಿ ಮಿನಾಜ್ ಅನ್ನು ಪೊಲೀಸರು ಇನ್ನೂ ವಿಚಾರಣೆಯಲ್ಲಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಇಂಗ್ಲೆಂಡ್​ನ ಮ್ಯಾಂಚೆಸ್ಟರ್​ಗೆ ವಿಮಾನ ಹತ್ತಲು ಏರ್​ಪೋರ್ಟ್​ಗೆ ಬಂದ ನಿಕ್ಕಿ ಮಿನಾಜ್​ರನ್ನು ತಪಾಸಣೆಗೆ ಒಳಪಡಿಸಿದಾಗ ಅವರ ಬ್ಯಾಗ್​ನಲ್ಲಿ ಕೆಲವು ‘ಸಾಫ್ಟ್ ಡ್ರಗ್ಸ್’ ಪತ್ತೆಯಾಗಿವೆ. ಆ ವಸ್ತುಗಳು ನೆದರ್​ಲ್ಯಾಂಡ್ಸ್​ನಲ್ಲಿ ನಿಷೇಧಿತವಾಗಿವೆ. ಪೊಲೀಸರು ನಿಕ್ಕಿ ಮಿನಾಜ್​ರನ್ನು ತಪಾಸಣೆ ಒಳಪಡಿಸಿದಾಗಲೇ ಅವರು ಮೊಬೈಲ್ ಮೂಲಕ ಲೈವ್ ವಿಡಿಯೋ ಘಟನೆಯನ್ನು ಚಿತ್ರೀಕರಣ ಮಾಡಿದ್ದಾರೆ.

Ad
Ad
Nk Channel Final 21 09 2023
Ad