Bengaluru 22°C
Ad

ಹೆಲ್ಮೆಟ್‌ ಧರಿಸದ್ದಕ್ಕೆ ಟಿಪ್ಪರ್‌ಗೆ ಚಾಲಕನಿಗೆ 500 ದಂಡ ಹಾಕಿದ ಪೊಲೀಸರು..!

ಸಾಮನ್ಯವಾಗಿ ದ್ವಿಚಕ್ರ ವಾಹನದವರಿಗೆ ಹೆಲ್ಮಟ್‌ ಧರಿಸುವಂತೆ ಹೇಳಲಾಗುತ್ತದೆ ಆದರೆ ಇಲ್ಲಿ ಪಟ್ಟಣದಲ್ಲಿ ಟಿಪ್ಪರ್‌ ಚಾಲಕ ಹೆಲ್ಮೆಟ್‌ ಧರಿಸಿಲ್ಲವೆಂದು ಇಲ್ಲಿನ ಪೊಲೀಸರು ರೂ. 500 ದಂಡ ವಿಧಿಸಿದ್ದಾರೆ. ಪೊಲೀಸರು ದಂಡ ವಿಧಿಸಿರುವ ರಶೀದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೊನ್ನಾವರ: ಸಾಮನ್ಯವಾಗಿ ದ್ವಿಚಕ್ರ ವಾಹನದವರಿಗೆ ಹೆಲ್ಮಟ್‌ ಧರಿಸುವಂತೆ ಹೇಳಲಾಗುತ್ತದೆ ಆದರೆ ಇಲ್ಲಿ ಪಟ್ಟಣದಲ್ಲಿ ಟಿಪ್ಪರ್‌ ಚಾಲಕ ಹೆಲ್ಮೆಟ್‌ ಧರಿಸಿಲ್ಲವೆಂದು ಇಲ್ಲಿನ ಪೊಲೀಸರು ರೂ. 500 ದಂಡ ವಿಧಿಸಿದ್ದಾರೆ. ಪೊಲೀಸರು ದಂಡ ವಿಧಿಸಿರುವ ರಶೀದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೆಲ್ಮೆಟ್ ಧರಿಸಿಲ್ಲ ಎಂದು ಟಿಪ್ಪರ್ ಚಾಲಕ ಚಂದ್ರಕಾಂತ ಎಂಬವರಿಗೆ ₹500 ದಂಡ ಹಾಕಿರುವ ಸಂಗತಿ ಬೆಳಕಿಗೆ ಬಂದಿದೆ. ಹೊನ್ನಾವರದಲ್ಲಿ ಟಿಪ್ಪ‌ರ್ ಮಾಲೀಕ ತನ್ನ ವಾಹನವನ್ನು ಮರಳು ಸಾಗಾಟಕ್ಕೆ ಕಳುಹಿಸಿದ್ದ. ಈ ವೇಳೆ ಟಿಪ್ಪರ್‌ ತಡೆದ ಹೊನ್ನಾವರ ಪೊಲೀಸರು ಚಾಲಕ ಚಂದ್ರಕಾಂತ ಎಂಬವರಿಂದ ₹500 ದಂಡ ವಸೂಲಿ ಮಾಡಿದ್ದಾರೆ. ರಶೀದಿ ನೋಡಿದ ಚಾಲಕನಿಗೆ ಶಾಕ್ ಆಗಿದೆ. ಪೊಲೀಸರೆ ನೀಡಿರುವ ರಶೀದಿ ಪ್ರಕಾರ ಇನ್ನು ಮುಂದೆ ಹೊನ್ನಾವರಲ್ಲಿ ಟಿಪ್ಪರ್ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸದೆ ಇದ್ದರೆ ದಂಡ ಬೀಳುವುದಂತೂ ಗ್ಯಾರಂಟಿ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪಿಎಸ್‌ಐ ಸಂತೋಷಕುಮಾರ್, ಟಿಪ್ಪರ್‌ ಚಾಲಕ ಸಮವಸ್ತ್ರ ಧರಿಸಿರಲಿಲ್ಲ. ಅದಕ್ಕೆ ₹500 ದಂಡ ವಿಧಿಸಲಾಗಿದೆ. ಆದರೆ ಕಣ್ತಪ್ಪಿನಿಂದ ಹೆಲ್ಮೆಟ್‌ ಧರಿಸದ್ದರಿಂದ ದಂಡ ಎಂದು ರಶೀದಿ ನೀಡಲಾಗಿದೆ ಎಂದಿದ್ದಾರೆ.

Ad
Ad
Nk Channel Final 21 09 2023
Ad