Bengaluru 23°C
Ad

ಅರ್ಧಂಬರ್ಧ ಬೇಯಿಸಿ ಕರಡಿ ಮಾಂಸ ಸೇವನೆ: ಮೆದುಳಿನಲ್ಲಿ ಹುಳುಗಳು ಪತ್ತೆ

ಅರ್ಧಂಬರ್ಧ ಬೇಯಿಸಿ ಕರಡಿ ಮಾಂಸ ತಿಂದ 12 ವರ್ಷದ ಬಾಲಕಿ ಸೇರಿ 5 ಕುಟುಂಬ ಸದಸ್ಯರಿಗೆ ಮೆದುಳಿನಲ್ಲಿ ಹುಳುಗಳು ಪತ್ತೆಯಾಗಿರುವುದು ಭಾರೀ ಆಘಾತ ಉಂಟುಮಾಡಿದ ಘಟನೆ ಅಮೆರಿಕದ ದಕ್ಷಿಣ ಡಕೋಟಾದಲ್ಲಿ ನಡೆದಿದೆ. 

ಅಮೆರಿಕ: ಅರ್ಧಂಬರ್ಧ ಬೇಯಿಸಿ ಕರಡಿ ಮಾಂಸ ತಿಂದ 12 ವರ್ಷದ ಬಾಲಕಿ ಸೇರಿ 5 ಕುಟುಂಬ ಸದಸ್ಯರಿಗೆ ಮೆದುಳಿನಲ್ಲಿ ಹುಳುಗಳು ಪತ್ತೆಯಾಗಿರುವುದು ಭಾರೀ ಆಘಾತ ಉಂಟುಮಾಡಿದ ಘಟನೆ ಅಮೆರಿಕದ ದಕ್ಷಿಣ ಡಕೋಟಾದಲ್ಲಿ ನಡೆದಿದೆ.

ಈ ಬಗ್ಗೆ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ವರದಿ ನೀಡಿದೆ.  ದಕ್ಷಿಣ ಡಕೋಟಾದ 29 ವರ್ಷದ ವ್ಯಕ್ತಿಯೊಬ್ಬರು ಫ್ಯಾಮಿಲಿ ಪಾರ್ಟಿಯಲ್ಲಿ ಭಾಗಿಯಾಗಿದ್ದರು.

ಈ ಪಾರ್ಟಿಯಲ್ಲಿ ಒಟ್ಟು 9 ಕುಟುಂಬಗಳ ಸದಸ್ಯರು ಭಾಗಿಯಾಗಿದ್ದರು. ಈ ವೇಳೆ ಪಾರ್ಟಿಯಲ್ಲಿ ಕರಡಿ ಮಾಂಸದಿಂದ ಮಾಡಿದ ಕಬಾಬ್​ಗಳನ್ನು ಎಲ್ಲರಿಗೂ ನೀಡಲಾಗಿತ್ತು.

ಇದನ್ನು ತಿಂದ ವ್ಯಕ್ತಿ ನಂತರ ದಿನಗಳಲ್ಲಿ ಜ್ವರ, ತೀವ್ರವಾದ ಸ್ನಾಯು ನೋವು, ಕಣ್ಣುಗಳ ಸುತ್ತ ಊತ ಮತ್ತು ಇತರೆ ಸಮಸ್ಯೆಗಳಿಂದ ಬಳಲುತ್ತಿದ್ದನು. ಹೀಗಾಗಿ ಪದೇ ಪದೇ ಆಸ್ಪತ್ರೆಗೆ ಹೋಗಿದ್ದಕ್ಕೆ ಮಿನ್ನೇಸೋಟ ಎನ್ನುವ ಆರೋಗ್ಯ ಇಲಾಖೆ ಈ ಬಗ್ಗೆ ತಿಳಿದುಕೊಂಡಿದೆ.

ಇದನ್ನು ತನಿಖೆ ನಡೆಸಿದ ಇಲಾಖೆ ವ್ಯಕ್ತಿ ಫ್ಯಾಮಿಲಿ ಪಾರ್ಟಿಯಲ್ಲಿ ಭಾಗಿಯಾಗಿರುವುದನ್ನ ಖಚಿತ ಪಡಿಸಿಕೊಂಡಿದೆ ಎಂದು ಹೇಳಲಾಗಿದೆ. ಪಾರ್ಟಿ ನಡೆಯುವುದಕ್ಕೂ ಒಂದೂವರೆ ತಿಂಗಳು ಮೊದಲು ಕರಡಿ ಮಾಂಸವನ್ನು ಫ್ರೀಜ್​ನಲ್ಲಿ ಇಡುತ್ತಾರೆ.

ಏಕೆಂದರೆ ಒಂದು ರೀತಿಯ ಗಾಢ ಬಣ್ಣದಿಂದ ಆಕರ್ಷಣೆಯಾಗಿ ಮಾಂಸ ಕಾಣುತ್ತದೆ. ಇದನ್ನೇ ಪಾರ್ಟಿ ನಡೆದ ದಿನ ಬೇಯಿಸಿ ಎಲ್ಲರಿಗೂ ಕೊಟ್ಟಿದ್ದಾರೆ. ಹೀಗಾಗಿಯೇ ಅವರಲ್ಲಿ ವಾಕರಿಕೆ, ವಾಂತಿ, ತಲೆನೋವು ಮತ್ತು ಇತರೆ ಸಮಸ್ಯೆಗಳು ಕಾಣಿಸಿವೆ.

12 ವರ್ಷದ ಬಾಲಕಿ ಸೇರಿ 5 ಕುಟುಂಬ ಸದಸ್ಯರಿಗೆ ಮೆದುಳಿನಲ್ಲಿ ಹುಳುಗಳು ಪತ್ತೆಯಾಗಿವೆ. ಅವರಿಗೆ ಅಲ್ಬೆಂಡಜೋಲ್ ಎಂಬ ಔಷಧ ನೀಡಲಾಗುತ್ತದೆ. ಅಲ್ಬೆಂಡಜೋಲ್ ಹುಳುಗಳನ್ನ ಕೊಲ್ಲುತ್ತದೆ ಎಂದು ಸಿಡಿಸಿ ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ.

Ad
Ad
Nk Channel Final 21 09 2023
Ad