Bengaluru 22°C
Ad

ಗೇಮಿಂಗ್‌ ಝೋನ್​ನಲ್ಲಿ ಅಗ್ನಿ ಅವಘಡ ಕೇಸ್‌ : ಮಕ್ಕಳು ಸೇರಿದಂತೆ ಸಾವಿನ ಸಂಖ್ಯೆ 32ಕ್ಕೆ ಏರಿಕೆ

ರಾಜ್‌ಕೋಟ್‌ನ ಗೇಮಿಂಗ್‌ ಝೋನ್​ನಲ್ಲಿ ಭಾರೀ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ ಮತ್ತೆ ಏರಿಕೆಯಾಗಿದೆ. 9 ಮಕ್ಕಳು ಸೇರಿ ಒಟ್ಟು 32 ಜನರು ಸಾವನ್ನಪ್ಪಿರುವ ಮಾಹಿತಿ ಇದೀಗ ತಿಳಿದು ಬಂದಿದೆ.

ಗುಜರಾತ್‌: ರಾಜ್‌ಕೋಟ್‌ನ ಗೇಮಿಂಗ್‌ ಝೋನ್​ನಲ್ಲಿ ಭಾರೀ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ ಮತ್ತೆ ಏರಿಕೆಯಾಗಿದೆ. 9 ಮಕ್ಕಳು ಸೇರಿ ಒಟ್ಟು 32 ಜನರು ಸಾವನ್ನಪ್ಪಿರುವ ಮಾಹಿತಿ ಇದೀಗ ತಿಳಿದು ಬಂದಿದೆ.

ಘಟನೆಯಲ್ಲಿ ಬೆಂಕಿಯಿಂದ ಸುಟ್ಟು ಹೋದವರ ಮೃತದೇಹಗಳನ್ನು ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಬೆಡ್​ಶೀಟ್​ ಹಾಗೂ ಮೂಟೆಯಲ್ಲಿ ಕಟ್ಟಿಕೊಂಡು ಹೊರಕ್ಕೆ ತಂದಿದ್ದರು. ದೇಹ ಸಂಪೂರ್ಣ ಸುಟ್ಟು ಕರಕಲಾಗಿದೆ ಹಾಗಾಗಿ ಗುರುತು ಸರಿಯಾಗಿ ಗೊತ್ತಾಗುತ್ತಿಲ್ಲ.

ಎಲ್ಲ ಮೃತದೇಹಗಳ ಡಿಎನ್​ಎ ಪರೀಕ್ಷೆ ಮಾಡಿ ಅವರವರ ಕುಟುಂಬಗಳಿಗೆ ಅಸ್ತಾಂತರ ಮಾಡಲಾಗುವುದು. ಇನ್ನು ಘಟನೆಯಲ್ಲಿ ಗಾಯಗೊಂಡವರ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ನಿನ್ನೆಯಿಂದಲೂ ರಕ್ಷಣಾ ಕಾರ್ಯ ಇದುವರೆಗೂ ನಡೆಯುತ್ತಿದೆ ಎಂದು ಎಸಿಪಿ ವಿನಾಯಕ ಪಟೇಲ್ ಹೇಳಿದ್ದಾರೆ.

Ad
Ad
Nk Channel Final 21 09 2023
Ad