Bengaluru 28°C
Ad

ಬಾಂಗ್ಲಾದೇಶ್ ವಿರುದ್ಧ ಟಿ20 ಸರಣಿಯಲ್ಲಿ ಯುಎಸ್‌ಎಗೆ ಜಯಭೇರಿ

ಬಾಂಗ್ಲಾದೇಶ್ ವಿರುದ್ಧದ ಟಿ20 ಸರಣಿಯನ್ನು 1-2 ಅಂತರದಿಂದ ಯುಎಸ್​ಎ (USA) ತಂಡ ಗೆದ್ದುಕೊಂಡಿದೆ.

ಬಾಂಗ್ಲಾದೇಶ್ ವಿರುದ್ಧದ ಟಿ20 ಸರಣಿಯನ್ನು 1-2 ಅಂತರದಿಂದ ಯುಎಸ್​ಎ (USA) ತಂಡ ಗೆದ್ದುಕೊಂಡಿದೆ. ಹೌಸ್ಟನ್​ನ ಪ್ರೈರೀ ವ್ಯೂ ಕ್ರಿಕೆಟ್ ಕಾಂಪ್ಲೆಕ್ಸ್ ಸ್ಡೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಅಂತಿಮ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡ ಗೆದ್ದರೂ, ಮೊದಲೆರಡು ಮ್ಯಾಚ್​ಗಳಲ್ಲಿ ಯುಎಸ್​ಎ ತಂಡ ಜಯ ಸಾಧಿಸಿತ್ತು. ಈ ಮೂಲಕ ಬಾಂಗ್ಲಾ ವಿರುದ್ಧ ಚೊಚ್ಚಲ ಬಾರಿ ಸರಣಿ ಗೆಲ್ಲುವಲ್ಲಿ ಯುಎಸ್​ಎ ಯಶಸ್ವಿಯಾಗಿದೆ.

3 ಪಂದ್ಯಗಳ ಸರಣಿಯ ಮೊದಲೆರಡು ಮ್ಯಾಚ್​ಗಳಲ್ಲಿ ಗೆಲುವು ದಾಖಲಿಸಿದ ಯುಎಸ್​ಎ ತಂಡ ಟ್ರೋಫಿ ಮುಡಿಗೇರಿಸಿಕೊಂಡಿದೆ. ವಿಶೇಷ ಎಂದರೆ ಯುಎಸ್​ಎ ತಂಡ ಇದೇ ಮೊದಲ ಬಾರಿಗೆ ಟಿ20 ಸರಣಿಯಲ್ಲಿ ಬಾಂಗ್ಲಾದೇಶ್ ತಂಡವನ್ನು ಎದುರಿಸಿದೆ. ಚೊಚ್ಚಲ ಸರಣಿಯಲ್ಲೇ ಬಾಂಗ್ಲಾ ತಂಡವನ್ನು ಬಗ್ಗು ಬಡಿದು ಸರಣಿ ಗೆದ್ದಿರುವುದು ವಿಶೇಷ.

Ad
Ad
Nk Channel Final 21 09 2023
Ad