Bengaluru 24°C
Ad

ಮಾವಿನ ಹಣ್ಣಿನಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು ಗೊತ್ತಾ?

ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಮಾವಿನ ಕಾಯಿ. ವರ್ಷಕ್ಕೊಮ್ಮೆ ಬರುವ ಈ ಮಾವಿನ ಹಣ್ಣುಗಳು ನಮ್ಮ ಆರೋಗ್ಯಕ್ಕೂ ಸಹಕಾರಿಯಾಗಿವೆ. ಮಾವಿನ ಕಾಯಿ ಹಾಗೂ ಮಾವಿನ ಹಣ್ಣು ಈ ಎರಡನ್ನು ತಿನ್ನುವುದರಿಂದಲೂ ನಮಗೆ ತುಂಬಾ ಪ್ರಯೋಜನೆಗಳಿವೆ.

ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಮಾವಿನ ಕಾಯಿ. ವರ್ಷಕ್ಕೊಮ್ಮೆ ಬರುವ ಈ ಮಾವಿನ ಹಣ್ಣುಗಳು ನಮ್ಮ ಆರೋಗ್ಯಕ್ಕೂ ಸಹಕಾರಿಯಾಗಿವೆ. ಮಾವಿನ ಕಾಯಿ ಹಾಗೂ ಮಾವಿನ ಹಣ್ಣು ಈ ಎರಡನ್ನು ತಿನ್ನುವುದರಿಂದಲೂ ನಮಗೆ ತುಂಬಾ ಪ್ರಯೋಜನೆಗಳಿವೆ.

ವಿಟಮಿನ್‌-ಸಿ, ನಾರಿನಾಂಶ ಹಾಗೂ ಪೆಕ್ವಿನ್‌ ಅಂಶವನ್ನು ಮಾವಿನಹಣ್ಣಿನಲ್ಲಿ ಹೆಚ್ಚಾಗಿ ಇದೆ. ಇದು ದೇಹದಲ್ಲಿ ಕೊಲೆಸ್ಟ್ರಾಲ್‌ ಮಟ್ಟ ನಿಯಂತ್ರಿಸಲು ಸಹಕರಿಸುತ್ತದೆ. ಇದರ ಅತ್ಯದ್ಭುತ ಗುಣ ಎಂದ್ರೆ ನಮ್ಮ ದೇಹದ ಚರ್ಮವನ್ನು ಒಳಗಿನಿಂದ ಶುದ್ಧೀಕರಿಸುತ್ತದೆ.

ಚರ್ಮದಲ್ಲಿನ ರಂಧ್ರಗಳ ಆರೋಗ್ಯಕ್ಕೆ ನೆರವಾಗುವ ಜೊತೆಗೆ ಹೊಳಪನ್ನು ಇವು ಹೆಚ್ಚಿಸುತ್ತವೆ. ಹಾಗೇ ಮಾವಿನ ಕಾಯಿಗಳಲ್ಲಿ ಆಹಾರದ ಫೈಬರ್, ಕ್ಯಾರೊಟಿನಾಯ್ಡ್‌, ಜೀವಸತ್ವಗಳು ಮತ್ತು ಖನಿಜಗಳು ಕಂಡುಬರುತ್ತವೆ.

ಮಾವಿನ ಕಾಯಿಗಳು ಅಸಿಡಿಟಿ, ಅಜೀರ್ಣ, ಮಲಬದ್ಧತೆ ಸೇರಿದಂತೆ ಜೀರ್ಣಕ್ರಿಯೆ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ನಿರ್ಜಲೀಕರಣದ ಲಕ್ಷಣಗಳನ್ನು ಸುಧಾರಿಸಿ, ಜೀರ್ಣ ಮಾಡಲು ಸಹಕರಿಸುವ ವಿವಿಧ ಜೀರ್ಣಕಾರಿ ಕಿಣ್ವಗಳನ್ನು ಸ್ರವಿಸಲು ಜಠರ ಕರುಳನ್ನು ಮಾವಿನ ಕಾಯಿ ಉತ್ತೇಜಿಸುತ್ತದೆ.

ಜಸ್ಟ್​ ಒಂದು ಮಾವಿನ ಹಣ್ಣು ತಿನ್ನುವುದರಿಂದ 1 ಗ್ರಾಂ ಪ್ರೋಟೀನ್, 20+ ಗ್ರಾಂ ಕಾರ್ಬೋಹೈಡ್ರೇಟ್ಸ್​, 2.5 ಗ್ರಾಂ ಫೈಬರ್, 20 ಗ್ರಾಂ ಸಕ್ಕರೆ, ವಿಟಮಿನ್ Cಯ ಶೇ.65 ರಷ್ಟು, ಶೇ.15 ರಷ್ಟು ಫೋಲೇಟ್ ನಮ್ಮ ದೇಹಕ್ಕೆ ದೊರೆಯುತ್ತದೆ.

ಮಾವಿನ ಹಣ್ಣುಗಳು ಹಲವಾರು ಗುಣಗಳನ್ನು ಹೊಂದಿದ್ದು ಹಾಗೇ ಜೀರ್ಣಕಾರಿ ಕಿಣ್ವ ಅಮೈಲೇಸ್ ಅನ್ನು ಕೂಡ ಹೊಂದಿದೆ. ಜೀರ್ಣಕಾರಿ ಕಿಣ್ವಗಳು ದೇಹವನ್ನು ಪ್ರವೇಶಿಸುವ ಆಹಾರವನ್ನು ಸಣ್ಣ ಅಣುಗಳಾಗಿ ವಿಭಜಿಸಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಮಾವಿನ ಹಣ್ಣಿನಲ್ಲಿನ ಪಾಲಿಫಿನಾಲ್ಸ್​ ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿವೆ. ಹೀಗಾಗಿಯೇ ಆಕ್ಸಿಡೇಟಿವ್ ಸ್ಟ್ರೆಸ್ ಎಂಬ ಹಾನಿಕಾರಕ ಪ್ರಕ್ರಿಯೆಯಿಂದ ದೇಹವನ್ನು ರಕ್ಷಿಸುತ್ತವೆ. ಆಕ್ಸಿಡೇಟಿವ್ ಸ್ಟ್ರೆಸ್ ವಿವಿಧ ರೀತಿಯ ಕ್ಯಾನ್ಸರ್ ಹೆಚ್ಚಿಸುತ್ತದೆ.

ಮಾವಿನಕಾಯಿಯಲ್ಲಿ ಮೆಗ್ನೀಷಿಯಂ, ಪೊಟ್ಯಾಸಿಯಮ್ ಇದ್ದು ಹೃದಯದ ಆರೋಗ್ಯಕರ ಕಾರ್ಯನಿರ್ವಹಣೆ ಹೆಚ್ಚಿಸುತ್ತದೆ. ಹಸಿರು ಮಾವಿನ ಹಣ್ಣುಗಳು ಕಾಲಜನ್ ಸಂಶ್ಲೇಷಣೆ ಉತ್ತೇಜಿಸುವ ಮತ್ತು ಚರ್ಮದ ಆರೋಗ್ಯ ಸುಧಾರಿಸಿಸುವ ಪೋಷಕಾಂಶ ಹೆಚ್ಚಾಗಿ ಇವೆ. ಇದು ಕೂದಲಿನ ಬೆಳವಣಿಗೆ ಸಹಕಾರಿಯಾಗಿದೆ.

Ad
Ad
Nk Channel Final 21 09 2023
Ad