News Karnataka Kannada
Friday, April 19 2024
Cricket
ಹಿಮಾಚಲ ಪ್ರದೇಶ

ಪ್ರವಾಸಿಗರ ಸ್ವರ್ಗ ಮನಾಲಿ ಇದೀಗ ನರಕ ಸದೃಶ ಪ್ರದೇಶ

Tourist Paradise Manali is now a hell-like area
Photo Credit : IANS

ಮನಾಲಿ: ರಣಭೀಕರ ಮಳೆ, ಮೇಘಸ್ಫೋಟದಿಂದಾಗಿ ಪ್ರವಾಸಿಗರ ಸ್ವರ್ಗ ಮನಾಲಿ ಇದೀಗ ನರಕ ಸದೃಶ ಪ್ರದೇಶವಾಗಿ ಮಾರ್ಪಾಡಾಗಿದ್ದು, ಅಳಿದುಳಿದ ಅವಶೇಷಗಳು ಯುದ್ಧಭೂಮಿಯಂತೆ ಭಾಸವಾಗುತ್ತಿವೆ.

ಬಿಯಾಸ್ ನದಿ ನೀರು ಉಕ್ಕಿಹರಿದಿದೆ. ಭೂಕುಸಿತ, ಪ್ರವಾಹ ಮತ್ತು ರಸ್ತೆಗಳು, ಸೇತುವೆಗಳು, ಮನೆಗಳು ಮತ್ತು ವಾಹನಗಳಂತಹ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯನ್ನುಂಟು ಮಾಡಿದೆ. ಅಲ್ಲದೆ ಬಿಯಾಸ್‌ ನದಿ ನೀರು ಮನಾಲಿ-ಚಂಡೀಗಢ ಹೆದ್ದಾರಿಯನ್ನು ಮುಳುಗಿಸಿದ್ದು  ದಿನಗಟ್ಟೆಲೇ ವಾಹನ ಸಂಚಾರ ಸ್ಥಗಿತಗೊಂಡಿತ್ತು.

1995ರಲ್ಲಿ ಕೂಡ ಇಂತಹುದೇ ವಿನಾಶಕಾರಿ ರಣಭೀಕರ ಮಳೆಯುಂಟಾಗಿತ್ತು ಎಂದು ಭಾರತೀಯ ಸರ್ವೇಕ್ಷಣಾ ಇಲಾಖೆಯ ಮಾಜಿ ನಿರ್ದೇಶಕ ರಾಮ್ ಕ್ರಿಶನ್ ಠಾಕೂರ್ ತಿಳಿಸಿದರು.

ನದಿ ತಟದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣದಿಂದ ಹೆಚ್ಚಿನ ಹಾನಿ ಸಂಭವಿಸಿದೆ. ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ತನ್ನೊಂದಿಗೆ ಕಟ್ಟಡಗಳನ್ನು ಕೂಡ ಕೊಚ್ಚಿಕೊಂಡು ಹೋಗಿದೆ ಎಂದು ವಿವರಿಸಿದ್ದಾರೆ.

2002 ರಲ್ಲಿ ನಿವೃತ್ತಿಯ ನಂತರ ಮನಾಲಿಯಲ್ಲಿ ನೆಲೆಸಿರುವ ಠಾಕೂರ್, ಮನಾಲಿಯ ಉಪನಗರದಲ್ಲಿರುವ ಬುರ್ವಾ ಎಂಬ ಗ್ರಾಮವು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಬೆಳವಣಿಗೆ ಕಾಣುತ್ತಿದೆ. ಆದರೆ ಪ್ರಕೃತಿ ನಾಶದಿಂದ ಹಿಮಾಚಲ ಪ್ರದೇಶದಲ್ಲಿ ಧಾರಾಕಾರ ಮಳೆ, ಮೇಘಸ್ಫೋಟ ಮತ್ತು ಫ್ಲಾಷ್‌ಫ್ಲಡ್‌ಗಳು ಸಾಮಾನ್ಯವಾಗಿದೆ. ಪ್ರಕೃತಿಯ ಮೇಲೆ ಮಾನವ ಹಸ್ತಕ್ಷೇಪ ಇಂತಹ ಬೆಳವಣಿಗೆಗೆ ಕಾರಣ ಎಂದು ಅವರು ವಿಶ್ಲೇಷಿಸುತ್ತಾರೆ. ಇಂತಹ ಪ್ರಕೃತಿ ವಿರೋಧಿ ಚಟುವಟಿಕೆಗಳಿಂದಾಗಿಯೇ ಹಿಮಾಲಯ ರಾಜ್ಯದಲ್ಲಿನ ಹೆಚ್ಚಿನ ಪ್ರವಾಸಿ ತಾಣಗಳು ಹೆಚ್ಚಿನ ಭೂಕಂಪನ ವಲಯಗಳಲ್ಲಿದೆ. ಆದರೆ ಅಧಿಕಾರಿಗಳು ಇದುವರೆಗೆ ಎಚ್ಚೆತ್ತುಕೊಂಡಿಲ್ಲ ಎಂದು ಖೇದ ವ್ಯಕ್ತಪಡಿಸುತ್ತಾರೆ. ಪ್ರಸ್ತುತ ಪ್ರವಾಹದಿಂದಾಗಿ ಕುಲು-ಮನಾಲಿ ಪ್ರದೇಶದಲ್ಲಿ ರಸ್ತೆಗಳು ಮತ್ತು ನೀರು ಸರಬರಾಜು ಯೋಜನೆಗಳಿಗೆ ವ್ಯಾಪಕ ಹಾನಿಯಾಗಿದೆ. ಹಾನಿ ಮತ್ತು ರಕ್ಷಣಾ ಕಾರ್ಯಾಚರಣೆಗಳ ಕುರಿತು ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಸುಖವಿಂದರ್ ಸುಖು, ರಸ್ತೆ ಹಾನಿಯಿಂದಾಗಿ 10,000 ಕ್ಕೂ ಹೆಚ್ಚು ಪ್ರವಾಸಿಗರು ಕಸೋಲ್ ಮತ್ತು ತೀರ್ಥನ್ ಕಣಿವೆಯಲ್ಲಿ ಸಿಲುಕಿಕೊಂಡಿದ್ದಾರೆ. ರಸ್ತೆ ಹಾಳಾಗಿರುವ ಸ್ಥಳದಿಂದ ಪ್ರವಾಸಿಗರನ್ನು ಕರೆತರಲು ಜೀಪ್‌ಗಳು ಮತ್ತು ಎಚ್‌ಆರ್‌ಟಿಸಿ ಬಸ್‌ಗಳನ್ನು ನಿಯೋಜಿಸಲಾಗಿದೆ ಎಂದರು ತಿಳಿಸಿದ್ದಾರೆ.

ಮನಾಲಿ ಮತ್ತು ಕುಲು ನಡುವಿನ 41 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯ ಸುಮಾರು 40 ಪ್ರತಿಶತದಷ್ಟು ಪ್ರವಾಹದಲ್ಲಿ ಕೊಚ್ಚಿಹೋಗಿದೆ ಎಂದು ಅಧಿಕಾರಿಗಳು ಐಎಎನ್‌ಎಸ್‌ಗೆ ತಿಳಿಸಿದ್ದಾರೆ. ಹೆದ್ದಾರಿ ಉದ್ದಕ್ಕೂ ನದಿ ಹರಡಿದ್ದು, ಪ್ರವಾಹದಿಂದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಟ್ವಿಟ್ಟರ್ ಬಳಕೆದಾರರಿಂದ ಹಂಚಿಕೊಂಡ ಭಯಾನಕ ವೀಡಿಯೊವೊಂದರಲ್ಲಿ, ಮನಾಲಿಯ ಆಲೂ ಮೈದಾನದಲ್ಲಿ ಬಹುಮಹಡಿಗಳ ಹೋಟೆಲ್ ಕುಸಿಯುತ್ತಿರವು ದೃಶ್ಯ ಎದೆ ಝಲ್ಲೆನಿಸುತ್ತದೆ.

ಕಟ್ಟಡದ ಅವಶೇಷ ನದಿಯಲ್ಲಿ ಸೆಕೆಂಡುಗಳಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಬೈಲಿ ಸೇತು ಕಣ್ಣು ಮಿಟುಕಿಸುವಂತೆ ಕುಸಿದು ಹೋಗಿದೆ. ಮತ್ತೊಂದು ವಿಡಿಯೋದಲ್ಲಿ ಪೆಪ್ಸು ರೋಡ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ (PRTC) ನ ಬಸ್ ನದಿಯಲ್ಲಿ ಕೊಚ್ಚಿ ಹೋಗುವುದನ್ನು ತೋರಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು