Bengaluru 24°C
Ad

ಅಬುಧಾಬಿಯಲ್ಲಿರುವ ಬಿಎಪಿಎಸ್‌ ಹಿಂದೂ ದೇವಾಲಯಕ್ಕೆ ನಟ ರಜನಿಕಾಂತ್‌ ಭೇಟಿ

ಅಬುಧಾಬಿಯ ಹಿಂದೂ ದೇವಾಲಯಕ್ಕೆ ಭೇಟಿ ನೀಡಿದ ನಟ ರಜನಿಕಾಂತ್‌

ಅಬುಧಾಬಿ: ನಟ ರಜನಿಕಾಂತ್‌ ಅವರು ಅಬುಧಾಬಿಯಲ್ಲಿರುವ ಬಿಎಪಿಎಸ್‌ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಈ ಕುರಿತು ಬಿಎಪಿಎಸ್‌ ಸಂಸ್ಥೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಫೋಟೊ, ವಿಡಿಯೊಗಳನ್ನು ಹಂಚಿಕೊಂಡಿದೆ. ವಿಡಿಯೊದಲ್ಲಿ ಅರ್ಚಕರೊಬ್ಬರು ರಜನಿಕಾಂತ್‌ ಅವರಿಗೆ ದೇವಾಲಯದ ವಿಶೇಷತೆಗಳ ಬಗ್ಗೆ ವಿವರಿಸುವುದನ್ನು ಕಾಣಬಹುದಾಗಿದೆ.

ಕೊನೆಯಲ್ಲಿ ರಜನಿಕಾಂತ್‌ ಅವರ ಕೈಗೆ ದಾರ ಕಟ್ಟಿ, ಪುಸ್ತಕವನ್ನು ಉಡುಗೊರೆಯಾಗಿ ನೀಡಿ ಮಂದಿರದಿಂದ ಬೀಳ್ಕೊಡಲಾಗಿದೆ. ಗುರುವಾರ ರಜನಿಕಾಂತ್‌ ಅವರು ಅಬುಧಾಬಿ ಸರ್ಕಾರದ ಕಾರ್ಯಕಾರಿ ಮಂಡಳಿಯ ಸದಸ್ಯ ಹಾಗೂ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧ್ಯಕ್ಷ ಮೊಹಮ್ಮದ್ ಖಲೀಫಾ ಅಲ್ ಮುಬಾರಕ್ ಅವರಿಂದ ಗೋಲ್ಡನ್ ವೀಸಾ ಪಡೆದುಕೊಂಡಿದ್ದರು.

Ad
Ad
Nk Channel Final 21 09 2023
Ad