Bengaluru 24°C
Ad

ಮಗುವಿನ ಲಿಂಗ ಪತ್ತೆಗೆ ಗರ್ಭಿಣಿ ಹೆಂಡ್ತಿಯ ಹೊಟ್ಟೆ ಸೀಳಿದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ವ್ಯಕ್ತಿಯೊಬ್ಬ ತನ್ನ ಗರ್ಭಿಣಿ ಹೆಂಡತಿಯ ಹೊಟ್ಟೆಯಲ್ಲಿ ಗಂಡು ಅಥವಾ ಹೆಣ್ಣು ಮಗುವಿದೆಯೋ ಎಂದು ಪರೀಕ್ಷಿಸಲು ಕುಡಗೋಲು ಬಳಸಿ ಹೊಟ್ಟೆಯನ್ನು ಸೀಳಿದ ಘಟನೆ ಉತ್ತರ ಪ್ರದೇಶದ ಬದೌನ್‌ನಲ್ಲಿ 2020 ರಲ್ಲಿ ನಡೆದಿತ್ತು.

ಉತ್ತರ ಪ್ರದೇಶ: ವ್ಯಕ್ತಿಯೊಬ್ಬ ತನ್ನ ಗರ್ಭಿಣಿ ಹೆಂಡತಿಯ ಹೊಟ್ಟೆಯಲ್ಲಿ ಗಂಡು ಅಥವಾ ಹೆಣ್ಣು ಮಗುವಿದೆಯೋ ಎಂದು ಪರೀಕ್ಷಿಸಲು ಕುಡಗೋಲು ಬಳಸಿ ಹೊಟ್ಟೆಯನ್ನು ಸೀಳಿದ ಘಟನೆ ಉತ್ತರ ಪ್ರದೇಶದ ಬದೌನ್‌ನಲ್ಲಿ 2020 ರಲ್ಲಿ ನಡೆದಿತ್ತು.

ಬದೌನ್‌ನ ಸಿವಿಲ್ ಲೈನ್ಸ್‌ನ ನಿವಾಸಿ ಪನ್ನಾ ಲಾಲ್ ಎಂಬಾತ ಸೆಪ್ಟೆಂಬರ್ 2020 ರಲ್ಲಿ ತನ್ನ ಪತ್ನಿ ಅನಿತಾಳ ಹೊಟ್ಟೆ ಸೀಳಿದ್ದ.

ಐದು ಹೆಣ್ಣು ಮಕ್ಕಳಿದ್ದಾರೆ. ಆದರೆ, ತನಗೆ ಗಂಡುಮಗು ಬೇಕು ಎಂದು ಪನ್ನಾ ಲಾಲ್ ಹೆಂಡತಿ ಜತೆ ಆಗಾಗ ಜಗಳವಾಡುತ್ತಿದ್ದ. ದಂಪತಿಗಳ ಜಗಳದ ಬಗ್ಗೆ ಅನಿತಾ ಅವರ ಕುಟುಂಬಕ್ಕೆ ತಿಳಿದಿತ್ತು. ತಾನು ಅನಿತಾಗೆ ವಿಚ್ಛೇದನ ನೀಡುವುದಾಗಿ ಮತ್ತು ಇನ್ನೊಬ್ಬ ಮಹಿಳೆಯನ್ನು ಮದುವೆಯಾಗುವುದಾಗಿ ಪನ್ನಾಲಾಲ್ ಬೆದರಿಕೆ ಹಾಕಿದ್ದ. ಜೊತೆಗೆ ಅನಿತಾ ಹೊಟ್ಟೆಯಲ್ಲಿ ಗಂಡು ಅಥವಾ ಹೆಣ್ಣು ಮಗುವಿದೆಯೇ ಎಂದು ಪರೀಕ್ಷಿಸಲು ಹೊಟ್ಟೆ ಸೀಳುವುದಾಗಿ ಹೇಳಿದ್ದ.

ಕುಡುಗೋಲಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ ಬಳಿಕ ಆಕೆ ಅಲ್ಲಿಂದ ಓಡಿಹೋಗಲು ಯತ್ನಿಸಿದ್ದಾಳೆ. ಆದರೆ ಪನ್ನಾಲಾಲ್ ಅವಳನ್ನು ಹಿಡಿದು ಕುಡುಗೋಲಿನಿಂದ ಅವಳ ಹೊಟ್ಟೆಯನ್ನು ಸೀಳಿದ್ದಾನೆ. ಆಕೆ ಎಂಟು ತಿಂಗಳ ಗರ್ಭಿಣಿಯಾಗಿದ್ದಳು.

ನೋವು ತಡೆಯಲಾರದೆ ಅನಿತಾ ಬೀದಿಗೆ ಓಡಿದ್ದರು. ಹತ್ತಿರದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅವಳ ಸಹೋದರ ಅವಳ ಕೂಗು ಕೇಳಿ ಅವಳನ್ನು ರಕ್ಷಿಸಲು ಬಂದಿದ್ದಾನೆ. ಆತನನ್ನು ಕಂಡ ಕೂಡಲೇ ಪನ್ನಾ ಲಾಲ್ ಸ್ಥಳದಿಂದ ಪರಾರಿಯಾಗಿದ್ದಾನೆ.

ಅನಿತಾ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆಕೆ ಈ ದಾಳಿಯಿಂದ ಬದುಕುಳಿದಿದ್ದರೂ, ಆಕೆಯ ಮಗುವನ್ನು ಉಳಿಸಲಾಗಲಿಲ್ಲ. ಹೊಟ್ಟೆಯಲ್ಲಿದ್ದ ಮಗು ಗಂಡು ಆಗಿತ್ತು.

Ad
Ad
Nk Channel Final 21 09 2023
Ad