Bengaluru 22°C
Ad

ಬಸವಗಿರಿಯ ಪ್ರಶಾಂತ ವಾತಾವರಣದಲ್ಲಿ ಅಕ್ಕ ಚಿರನಿದ್ರೆಗೆ

ನಗರದ ಪಾಪನಾಶದ ಬಸವಗಿರಿಯ ಪರುಷ ಕಟ್ಟೆ ಸಮೀಪದ ಸಮಾಧಿಯಲ್ಲಿ ಲಿಂಗ ಮತ್ತು ವಿಭೂತಿ ನಡುವೆ ಬಸವತತ್ವದ ಪ್ರಚಾರಕಿ ಅಕ್ಕ ಅನ್ನಪೂರ್ಣಾ ತಾಯಿ (61) ಅಂತ್ಯಕ್ರಿಯೆ ಅಪಾರ ಬಸವಭಕ್ತರ ನಡುವೆ ಜರುಗಿತು..

ಬೀದರ್‌: ನಗರದ ಪಾಪನಾಶದ ಬಸವಗಿರಿಯ ಪರುಷ ಕಟ್ಟೆ ಸಮೀಪದ ಸಮಾಧಿಯಲ್ಲಿ ಲಿಂಗ ಮತ್ತು ವಿಭೂತಿ ನಡುವೆ ಬಸವತತ್ವದ ಪ್ರಚಾರಕಿ ಅಕ್ಕ ಅನ್ನಪೂರ್ಣಾ ತಾಯಿ (61) ಅಂತ್ಯಕ್ರಿಯೆ ಅಪಾರ ಬಸವಭಕ್ತರ ನಡುವೆ ಜರುಗಿತು.
ಅಕ್ಕಾ ಅನ್ನಪೂರ್ಣಾ ಅನಾರೋಗ್ಯದಿಂದ ಹೈದರಾಬಾದನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದ ಅಕ್ಕ ನವರ ಪಾರ್ಥಿವ ಶರೀರವನ್ನು ಬಸವಗಿರಿಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಸುದ್ದಿ ತಿಳಿದು ನಾಡಿನ ವಿವಿಧ ಭಾಗಗಳಿಂದ ಬಸವ ಭಕ್ತರು ಬಸವಗಿರಿಯತ್ತ ದೌಡಾಯಿಸಿದರು ಇಡೀ ದಿನ ಲಿಂಗಾಯತ ಧಾರ್ಮಿಕ ವಿಧಿ ವಿಧಾನಗಳು ಪ್ರಾರಂಭಗೊಂಡವು.

ಅಕ್ಕಾವರಿಗೆ ಲಿಂಗಾಕಾರದ ಪೀಠದ ಮೇಲೆ ಕೂರಿಸಿ. ಕೊರಳಲ್ಲಿ ಲಿಂಗ ಹಾಕಿ ರುದ್ರಾಕ್ಷಿ ಕಿರೀಟ ಧಾರಣೆ ಮಾಡಲಾಯಿತು. ವಚನ ಸಾಹಿತ್ಯದ ಕಟು ತೊಡೆಯ ಮೇಲೆ ಇಡಲಾಯಿತು… ಕರ್ನಾಟಕ ಹಾಗೂ ತೆಲಂಗಾಣ ಮಹಾರಾಷ್ಟ್ರ ಸೇರಿದಂತೆ ವಿವಿಧ ಭಾಗದಿಂದ ಆಗಮಿಸಿದ ಭಕ್ತರು ಪೂಜ್ಯರು ವಚನ ಪಠಣ ಕಾರ್ಯಕ್ರಮ ನಡೆಸಿಕೊಟ್ಟರು. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಅಕ್ಕನವರಿಗೆ ತೊಡಿಸಿದ ರುದ್ರಾಕ್ಷಿ ಕಿರೀಟ ಪ್ರಭು ಸ್ವಾಮೀಜಿ ಅವರ ತಲೆಗೆ ಹಾಕುದ್ರು ರುದ್ರಾಕ್ಷಿ ಮಾಲೆ ಅಕ್ಕ ಗಂಗಾಂಬಿಕೆ ಅವರಿಗೆ ತೊಡಿಸಿದರು. ಆಗ ಭಕ್ತಗಣ ಭಾವುಕರಾಗಿ ಜಯಘೋಷ ಹಾಕಿದರು…
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಸೇರಿದಂತೆ ಇತರೆ ಗಣ್ಯರು, ಮಠಾಧೀಶರು ಅಕ್ಕನವರು ಬಸವತತ್ವದ ಪ್ರಚಾರ, ಪ್ರಸಾರಕ್ಕಾಗಿ ಮಾಡಿದ ಕಾರ್ಯಕ್ರಮಗಳ ಮೆಲುಕು ಹಾಕಿದರು….ಪರುಷ ಕಟೆಯಿಂದ ಸಮಾಧಿ ವರೆಗೆ ಅಕ್ಕನಶರ ಪಾರ್ಥಿವ ಶರಿರ ಅಲಂಕರಿತ ವಾಹನದ ಮೇಲೆ ಇಟ್ಟು ಮೆರವಣಿಗೆ ನಡೆಸಿದ್ರು ಮುಂಭಾಗದಲ್ಲಿ ಮಹಿಳೆಯರು ವಾಚನ ಸಾಹಿತ್ಯ ತಲೆ ಮೇಲೆ ಹೊತ್ತು ಕಣ್ಣಿರು ಹಾಕುತ್ತ ಸಮಾಧಿ ಅತ್ತ ಹೆಜ್ಜೆ ಹಾಕಿದ್ರು.ಲಿಂಗಾಕಾರದ ಸಮಾಧಿಯಲ್ಲಿ ಅಕ್ಕನವರನ್ನು ಕೂರಿಸಿ, ವಿಭೂತಿಗಳನ್ನು ತುಂಬಿ, ವಚನಗಳನ್ನು ಪಠಿಸುವುದರ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಯಿತು

ಬಸವಗಿರಿಯ ಪ್ರಶಾಂತ ವಾತಾವರಣದಲ್ಲಿ ಅಪಾರ ಭಕ್ತರ ಸಮೂಹದಲ್ಲಿ ಅಕ್ಕ ಚಿರನಿದ್ರೆಗೆ ಜಾರಿದರು. ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ, ಕೂಡಲಸಂಗಮ ಬಸವ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ, ಭಾಲ್ಕಿ ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಹುಲಸೂರಿನ ಶಿವಾನಂದ ಸ್ವಾಮೀಜಿ, ಅಕ್ಕ ಗಂಗಾಂಬಿಕೆ, ಪ್ರಭು ಸ್ವಾಮೀಜಿ, ಬಸವಕಲ್ಯಾಣದ ಸಿದ್ದರಾಮೇಶ್ವರ ಸ್ವಾಮೀಜಿ, ಮಲ್ಲಯ್ಯನಗಿರಿಯ ಬಸವಲಿಂಗ ಅವಧೂತರು,ಸೇರಿದಂತೆ ಅಪಾರ ಭಕ್ತರು ರಾಜಕೀಯ ಮುಖಂಡರು ಪಾಲ್ಗೊಂಡಿದ್ದರು.

ಬಸವ ಸೇವಾ ಪ್ರತಿಷ್ಠಾನ ಹಾಗೂ ಲಿಂಗಾಯತ ಮಹಾ ಮಠದ ಮೂಲಕ ಬಸವ ತತ್ವ ಪ್ರಚಾರ ಕರ‍್ಯವನ್ನು ಅಕ್ಕನವರು ಮಾಡಿದ್ದಾರೆ. ಬಸವಗಿರಿ ಅವರ ಕಾಯಕದ ಕೇಂದ್ರವಾಗಿತ್ತು. ಈಗ ಅಲ್ಲೇ ಅವರು ಸಮಾಧಿಯಾಗಿದ್ದಾರೆ ಅವರು ನೀಡಿದ ಮಾರ್ಗದರ್ಶನದಲ್ಲಿ ನಾವು ಸಾಗಬೇಕಾಗಿದ್ದೆ ಸಚಿವ ಈಶ್ವರ ಖಂಡ್ರೆ ನುಡಿದರು.

ಅಕ್ಕ ಅನ್ನಪೂರ್ಣ ತಾಯಿ ಅವರು ಬಸವತತ್ವದ ಪ್ರಚಾರ, ಪ್ರಸಾರಕ್ಕಾಗಿ ಮಾಡಿದ ಕಾರ್ಯಗಳನ್ನು ಮೆಲುಕು ಹಾಕುವಾಗ ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಭಾವುಕರಾಗಿ ಕಣ್ಣೀರು ಹಾಕಿದರು.ಬಸವತತ್ವದ ಪ್ರಸಾರಕ್ಕಾಗಿ ಅಕ್ಕ ಅನ್ನಪೂರ್ಣ ತಾಯಿ ಮಾಡಿದ ಕಾರಯ ಅಷ್ಟಿಷ್ಟಲ್ಲ. ವಚನ ವಿಜಯೋತ್ಸವ ಕಾರ್ಯಕ್ರಮದ ಮೂಲಕ ನಾಡಿನ ಜನತೆಯನ್ನು ಸೂಜಿಗಲ್ಲಿನಂತೆ ನೀರೀಕ್ಷಿಸಿದರು . ಕೆಲ ಭಿನ್ನಾಭಿಪ್ರಾಯಗಳಿಂದ ಆ ಕಾರ್ಯಕ್ರಮ ನಿಂತಿದೆ. ಭಿನ್ನಾಭಿಪ್ರಾಯಗಳನ್ನು ಮರೆತು ಆ ಕಾರ್ಯಕ್ರಮಕ್ಕೆ ಪುನಃ ಚಾಲನೆ ಕೊಡಬೇಕಿದೆ’ ಎಂದು ಪಟ್ಟದ್ದೇವರು ನುಡಿದರು.

ಒಟ್ಟಾರೆಯಾಗಿ ಸಹಸರಾರು ಬಸವ ಭಕ್ತರು ರಾಜಕೀಯ ‌ನಾಯಕರು ಹಾಗೂ ಮಠಾಧಿಶರ ಸಮೂಹದಲ್ಲಿ ಅಕ್ಕ ಬಸವಗಿರಿಯ ಪ್ರಶಾಂತ ವಾತಾವರಣ ದಲ್ಲಿ ಚಿರನಿದ್ರೆಗೆ ಜಾರಿದ್ರು ದುಃಖ ದ ಮಧ್ಯ ಬಸವ ಭಕ್ತರು ಜಯಘೋಷ ಕೂಗಿದ್ರು….

Ad
Ad
Nk Channel Final 21 09 2023
Ad