Bengaluru 21°C
Ad

2047ರವರೆಗೆ ನಾನು ಕೆಲಸ ಮಾಡಬೇಕು ಎಂಬುದು ದೇವರ ಆದೇಶ: ಮೋದಿ

ವಿಕಸಿತ ಭಾರತದ ನಿರ್ಮಾಣವಾಗುವವರೆಗೆ ಅಂದರೆ, 2047ರವರೆಗೆ ನಾನು ಕೆಲಸ ಮಾಡಬೇಕು ಎಂಬುದು ದೇವರ ಆದೇಶವಾಗಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಆ ಮೂಲಕ 2047ರವರೆಗೆ ನಾನೇ ಪ್ರಧಾನಿ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ.

ನವದೆಹಲಿ: ವಿಕಸಿತ ಭಾರತದ ನಿರ್ಮಾಣವಾಗುವವರೆಗೆ ಅಂದರೆ, 2047ರವರೆಗೆ ನಾನು ಕೆಲಸ ಮಾಡಬೇಕು ಎಂಬುದು ದೇವರ ಆದೇಶವಾಗಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಆ ಮೂಲಕ 2047ರವರೆಗೆ ನಾನೇ ಪ್ರಧಾನಿ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ.

Ad

ದೇವರು ನನಗೆ ವಿಶೇಷ ಕಾರಣಕ್ಕಾಗಿ ಇಲ್ಲಿಗೆ ಕಳುಹಿಸಿದ್ದಾನೆ ಎಂಬುದು ನನ್ನ ಭಾವನೆ. ವಿಕಸಿತ ಭಾರತದ ಕಲ್ಪನೆ ಸಾಕಾರ ಮಾಡು ಎಂಬುದು ದೇವರ ಆದೇಶವಾಗಿದೆ. ದೇವರೇ ನನಗೆ ದಾರಿ ತೋರುತ್ತಿದ್ದಾನೆ, ಆತನೇ ನನಗೆ ಶಕ್ತಿ ತುಂಬುತ್ತಿದ್ದಾನೆ. ನನಗೆ ತುಂಬ ವಿಶ್ವಾಸವಿದೆ.

Ad

ನಾನು 2047ರ ವೇಳೆಗೆ ದೇಶವು ವಿಕಸಿತ ಆಗುತ್ತದೆ ಎಂಬ ದೃಢ ನಿಶ್ಚಯವಿದೆ. ಹಾಗಾಗಿ, ನಾನು 2047ರವರೆಗೆ ಹಗಲು-ರಾತ್ರಿ ಕೆಲಸ ಮಾಡುತ್ತೇನೆ. ಅಲ್ಲಿಯ ತನಕ ದೇವರು ನನ್ನನ್ನು ಕರೆದುಕೊಳ್ಳುವುದಿಲ್ಲ ಎಂದರು.

Ad

 

Ad
Ad
Nk Channel Final 21 09 2023