Bengaluru 24°C
Ad

ಡಾಜ್​ ಮೇಮ್ ಮೂಲಕ ಜನಪ್ರಿಯತೆ ಗಳಿಸಿದ್ದ ಜಪಾನಿನ ನಾಯಿ ಕಬೋಸು ನಿಧನ

“ಡಾಜ್​” ಮೇಮ್ ಮೂಲಕ ಆನ್‌ಲೈನ್ ಜೋಕ್‌ಗಳನ್ನು ಸೃಷ್ಟಿಸಿ ಜನಪ್ರಿಯತೆ ಗಳಿಸಿದ್ದ,ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದ ಜಪಾನಿನ ಕಬೋಸು ಎಂಬ ನಾಯಿ ಇಂದು ಸಾವನ್ನಪ್ಪಿದೆ ಎಂದು ಅದರ ಮಾಲೀಕರು ಹೇಳಿದ್ದಾರೆ.

“ಡಾಜ್​” ಮೇಮ್ ಮೂಲಕ ಆನ್‌ಲೈನ್ ಜೋಕ್‌ಗಳನ್ನು ಸೃಷ್ಟಿಸಿ ಜನಪ್ರಿಯತೆ ಗಳಿಸಿದ್ದ,ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದ ಜಪಾನಿನ ಕಬೋಸು ಎಂಬ ನಾಯಿ ಇಂದು ಸಾವನ್ನಪ್ಪಿದೆ ಎಂದು ಅದರ ಮಾಲೀಕರು ಹೇಳಿದ್ದಾರೆ.

ಕಬೋಸು ಎಂಬ ನಾಯಿಯ ಫೋಟೋ ಮತ್ತು ವಿಡಿಯೋಗಳು ಒಂದು ಪೀಳಿಗೆಯ ವಿಚಿತ್ರವಾದ ಆನ್‌ಲೈನ್ ಜೋಕ್‌ಗಳನ್ನು ಸೃಷ್ಟಿಸಿತು. ಆ ನಾಯಿಯ ಮುಖವನ್ನೇ ಡಾಜ್​ಕಾಯಿನ್ ಕ್ರಿಪ್ಟೋಕರೆನ್ಸಿಯಲ್ಲಿ ಮುದ್ರಿಸಲಾಗಿತ್ತು.

ಕಬೋಸು ಎಂಬ ಈ ಹೆಣ್ಣು ನಾಯಿಗೆ 19 ವರ್ಷವಾಗಿತ್ತು.

ನಾನು ಕಬೋಸುಳನ್ನು ಮುದ್ದಿಸುತ್ತಿದ್ದೆ. ಅವಳು ನಿದ್ರಿಸುತ್ತಿರುವಂತೆ ನನಗೆ ಅನಿಸಿತ್ತು. ಆದರೆ, ಅವಳು ಸದ್ದಿಲ್ಲದೆ ಸತ್ತುಹೋಗಿದ್ದಳು. ಆಕೆ ವಿಶ್ವದ ಅತ್ಯಂತ ಸಂತೋಷದ ನಾಯಿ ಎಂದು ನಾನು ಭಾವಿಸುತ್ತೇನೆ. ಮತ್ತು ನಾನು ಆ ಸಂತೋಷದ ಮಾಲೀಕಳಾಗಿದ್ದೆ ಎಂಬುದು ಹೆಮ್ಮೆಯ ಸಂಗತಿ ಎಂದು ಅಟ್ಸುಕೊ ಸಾಟೊ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

ಶಿಬಾ ಇನು ಜಾತಿಯ ನಾಯಿಯಾದ ಕಬೋಸು 19 ವರ್ಷ ಬದುಕಿದ್ದಳು. ಇದು ಈ ಜಾತಿಯ ನಾಯಿಯ ಸರಾಸರಿ ಜೀವಿತಾವಧಿಯನ್ನು ಮೀರಿದೆ. ಮೇ 26ರಂದು ಅವಳಿಗೆ “ವಿದಾಯ ಪಾರ್ಟಿ” ನಡೆಯಲಿದೆ ಎಂದು ಆ ನಾಯಿಯ ಮಾಲೀಕರು ತಿಳಿಸಿದ್ದಾರೆ.

Ad
Ad
Nk Channel Final 21 09 2023
Ad