Bengaluru 22°C
Ad

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ : ವಿದೇಶಿ ಮಧ್ಯವರ್ತಿ ಬಂಧನ

ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ ಶುಕ್ರವಾರ ಮತ್ತೊಬ್ಬ ಆರೋಪಿಯನ್ನು ಹುಬ್ಬಳ್ಳಿಯಲ್ಲಿ ಬಂಧಿಸಿದೆ.

ನವದೆಹಲಿ : ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ ಶುಕ್ರವಾರ ಮತ್ತೊಬ್ಬ ಆರೋಪಿಯನ್ನು ಹುಬ್ಬಳ್ಳಿಯಲ್ಲಿ ಬಂಧಿಸಿದೆ. ಈ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ ಈಗ ಐದಕ್ಕೇರಿದೆ. ಧಿತರ ಶಂಕಿತ ಉಗ್ರನನ್ನು ಶೋಯೆಬ್‌ ಅಹ್ಮದ್‌ ಮಿರ್ಜಾ ಅಲಿಯಾಸ್‌ ಚೋಟು ಎಂದು ಗುರುತಿಸಲಾಗಿದೆ. ಈತ ಹುಬ್ಬಳ್ಳಿ ನಿವಾಸಿ, ಲಷ್ಕರ್‌-ಎ-ತಯ್ಯಬಾ ಉಗ್ರ ಚಟುವಟಿಕೆ ಸಂಚಿನ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಎಂದು ಎನ್‌ಐಎ ಹೇಳಿದೆ.

ಅಬ್ದುಲ್‌ ಮತೀನ್‌ ತಾಹಾ ಹಾಗೂ ಹ್ಯಾಂಡ್ಲರ್‌ ನಡುವೆ ರಹಸ್ಯ ಸಂವಹನ ನಡೆಸಲು ಬಳಸಲಾಗುತ್ತಿದ್ದ ಇಮೈಲ್‌ ಐಡಿಯನ್ನು ಮಿರ್ಜಾನ ತಂದೆ ನೀಡಿದ್ದಾರೆ. ಸಹ ಆರೋಪಿ ಮುಸಾವೀರ್‌ ಹುಸೇನ್‌ ಶಜೀಬ್‌ ಜತೆಗೆ ಅಬ್ದುಲ್‌ ಮತೀನಾ ತಾಹಾನನ್ನು ಎನ್‌ಐಎಯು ಎ.
12 ಕೋಲ್ಕತಾದಲ್ಲಿ ಬಂಧಿಸಿತ್ತು.

 

Ad
Ad
Nk Channel Final 21 09 2023
Ad