Bengaluru 22°C
Ad

ಭಾರೀ ಮಳೆಯಿಂದ ಬೆಸ್ಕಾಂಗೆ ಬಾರಿ ಹೊಡೆತ : ಕೋಟಿ ಕೋಟಿ ನಷ್ಟ!

ಭಾರೀ ಮಳೆಯಿಂದ ಬೆಸ್ಕಾಂಗೆ ಹೊಡೆತ ಬಿದ್ದಿದೆ. ಮಳೆಗಾಲ ಆರಂಭದಲ್ಲಿಯೇ ಬೆಸ್ಕಾಂಗೆ ಕೋಟಿ ಕೋಟಿ ನಷ್ಟವಾಗಿದೆ. ಗಾಳಿ ಮಳೆಯಿಂದಾಗಿ ಬೆಸ್ಕಾಂ ವಿದ್ಯುತ್ ಕಂಬ, ತಂತಿಗಳಿಗೆ ಹಾನಿಯಾಗಿದೆ.

ಭಾರೀ ಮಳೆಯಿಂದ ಬೆಸ್ಕಾಂಗೆ ಹೊಡೆತ ಬಿದ್ದಿದೆ. ಮಳೆಗಾಲ ಆರಂಭದಲ್ಲಿಯೇ ಬೆಸ್ಕಾಂಗೆ ಕೋಟಿ ಕೋಟಿ ನಷ್ಟವಾಗಿದೆ. ಗಾಳಿ ಮಳೆಯಿಂದಾಗಿ ಬೆಸ್ಕಾಂ ವಿದ್ಯುತ್ ಕಂಬ, ತಂತಿಗಳಿಗೆ ಹಾನಿಯಾಗಿದೆ.

ಬೆಂಗಳೂರು ನಗರ ಸೇರಿ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಗಾಳಿ ಮಳೆಯಿಂದ ಹಾನಿಯಾಗಿದೆ. ಬಿರುಗಾಳಿ ಸಹಿತ ಗಾಳಿ ಮಳೆಗೆ ಹಲವೆಡೆ ಕಂಬಗಳ ಮೇಲೆ ಮರಗಳು ಬಿದ್ದಿವೆ.ಇನ್ನೂ ಕೆಲವೆಡೆ ಸಿಡಿಲಿಗೆ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಗೆ ಹಾನಿಯಾಗಿದೆ. ಕೇವಲ 15ದಿನದಲ್ಲಿ ಬರೋಬ್ಬರಿ 6ಕೋಟಿ 78 ಲಕ್ಷ ನಷ್ಟವಾಗಿದೆ.

1 ಕೋಟಿ 64ಲಕ್ಷ ಮೌಲ್ಯದ 1960 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಇದರಿಂದ ಬೆಸ್ಕಾಂ ಕೋಟಿ, ಕೋಟಿ ನಷ್ಟ ಅನುಭವಿಸುವಂತಾಗಿದೆ.353 ಟ್ರಾನ್ಸ್‌ಫಾರ್ಮರ್ ಗಳಿಗೆ ಹಾನಿಯಾಗಿದ್ದು ಅಂದಾಜು ಮೌಲ್ಯ 4 ಕೋಟಿ 94 ಲಕ್ಷ ನಷ್ಟವಾಗಿದೆ. ಮಳೆಯಿಂದ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ಈ ಅವಾಂತರ ಸೃಷ್ಟಿಯಾಗಿದೆ.2.45ಲಕ್ಷ ಮೌಲ್ಯದ ತಂತಿ ಹಾಗೂ 30ಲಕ್ಷ ಮೌಲ್ಯದ ಡಿಪಿ ಸ್ಟ್ರಕ್ಚರ್ ಗೆ ಹಾನಿಯಾಗಿದೆ.

Ad
Ad
Nk Channel Final 21 09 2023
Ad