Bengaluru 24°C
Ad

ವಿಯೆಟ್ನಾಂನ ಅಪಾರ್ಟ್‌ಮೆಂಟ್ ನಲ್ಲಿ ಬೆಂಕಿ ಅವಘಡ: 14 ಮಂದಿ ಸಾವು

ವಿಯೆಟ್ನಾಂನ ರಾಜಧಾನಿಯ ಜನನಿಬಿಡ ಕೌ ಗಿಯಾಯ್ ಜಿಲ್ಲೆಯ ಮಧ್ಯ ಹನೋಯಿಯಲ್ಲಿ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ನಲ್ಲಿ ಬೆಂಕಿ ಅವಘಡದಿಂದಾಗಿ 14 ಜನರು ಮೃತಪಟ್ಟ ಘಟನೆ ನಡೆದಿದೆ.

ವಿಯೆಟ್ನಾಂ: ವಿಯೆಟ್ನಾಂನ ರಾಜಧಾನಿಯ ಜನನಿಬಿಡ ಕೌ ಗಿಯಾಯ್ ಜಿಲ್ಲೆಯ ಮಧ್ಯ ಹನೋಯಿಯಲ್ಲಿ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ನಲ್ಲಿ ಬೆಂಕಿ ಅವಘಡದಿಂದಾಗಿ 14 ಜನರು ಮೃತಪಟ್ಟ ಘಟನೆ ನಡೆದಿದೆ.

ಕಾಂಪ್ಲೆಕ್ಸ್‌ ಒಳಗೆ ಬೆಂಕಿ ಕಾಣಿಸಿಕೊಂಡಾಗ, ಪಟಾಕಿ ಸ್ಫೋಟದಂತೆ ಶಬ್ದ ಕೇಳಿಬಂತು. ಒಳಗಿದ್ದ ಜನರು ಕಿರುಚಾಡಿದ್ದನ್ನು ಕೇಳಿ ನೆರೆಹೊರೆಯವರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಒಳಗೆ ಎಷ್ಟು ಮಂದಿ ಇದ್ದರು ಎಂಬುದು ಸ್ಪಷ್ಟವಾಗಿಲ್ಲ.

ರಕ್ಷಣಾ ಸಿಬ್ಬಂದಿ ಕಾಂಪ್ಲೆಕ್ಸ್‌ನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಸಮುಚ್ಚಯದ ಹೊರಗಡೆ ಗೇಟ್‌ ಬೀಗ ಮುರಿದು, ಕಿಟಕಿ ಒಡೆದು ಒಳಗೆ ಸಿಲುಕಿದ್ದ 7 ಮಂದಿಯನ್ನು ರಕ್ಷಿಸಿದ್ದಾರೆ. ಬೆಂಕಿಯನ್ನು ಸಂಪೂರ್ಣ ನಂದಿಸಿದಾಗ 14 ಮಂದಿ ಮೃತಪಟ್ಟಿರುವುದು ತಿಳಿದುಬಂದಿದೆ.

ಬೆಂಕಿ ತೀವ್ರತೆ ಹೆಚ್ಚಾದ ಪರಿಣಾಮ ಪಾರ್ಕಿಂಗ್‌ ಮಾಡಿದ್ದ ಮೋಟರ್‌ಬೈಕ್‌ಗಳು, ಎಲೆಕ್ಟ್ರಿಕ್ ಬೈಸಿಕಲ್‌ಗಳು ಸುಟ್ಟು ಕರಕಲಾಗಿವೆ. ಅವಘಡದಿಂದ ಬದುಕುಳಿದ ಮೂವರು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಪಡೆಯುತ್ತಿದ್ದಾರೆ.

Ad
Ad
Nk Channel Final 21 09 2023
Ad