Bengaluru 24°C
Ad

ಬಾಂಗ್ಲಾ ಸಂಸದನ ಭೀಕರ ಹತ್ಯೆ: ಚರ್ಮ ಸುಲಿದು, ಮಾಂಸ ಕಿತ್ತ ಹಂತಕರು

Mp

ಕೋಲ್ಕತಾ: ವೈದ್ಯಕೀಯ ಚಿಕಿತ್ಸೆ ಸಲುವಾಗಿ ಕೋಲ್ಕತಾಗೆ ಆಗಮಿಸಿದ್ದ ಬಾಂಗ್ಲಾದೇಶ ಸಂಸದ ಅನ್ವರುಲ್ ಅಜೀಂ ಅನರ್ ಅವರ ಹತ್ಯಾ ಪ್ರಕರಣದಲ್ಲಿ ಆಘಾಕರಾರಿ ಅಂಶವೊಂದು ಬೆಳಕಿಗೆ ಬಂದಿದ್ದು, ಅವರನ್ನು ಹತ್ಯೆ ಮಾಡಿದ ಹಂತಕರು ಅವರ ಚರ್ಮ ಸುಲಿದು, ಮಾಂಸ ಕಿತ್ತಿದ್ದಾರೆ ಎಂದು ತಿಳಿದುಬಂದಿದೆ.

ಅನ್ವರುಲ್ ಅವರ ದೇಹವನ್ನು ಅಪಾರ್ಟ್‌ಮೆಂಟ್‌ನಲ್ಲಿ ತುಂಡು ತುಂಡಾಗಿ ಕತ್ತರಿಸಿ, ಚರ್ಮ ಸುಲಿಯಲಾಗಿತ್ತು. ಬಳಿಕ ಅನೇಕ ಪ್ಲಾಸ್ಟಿಕ್ ಕವರ್‌ಗಳಲ್ಲಿ ನಗರದಾದ್ಯಂತ ಎಸೆಯಲಾಗಿತ್ತು ಎಂಬುದನ್ನು ತನಿಖೆ ಬಹಿರಂಗಪಡಿಸಿದೆ. ಇನ್ನೂ ಬಾಂಗ್ಲಾದೇಶದಿಂದ ವಲಸೆ ಬಂದವರೇ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ಮೇ 12ರಂದು ಕೋಲ್ಕತಾದಲ್ಲಿನ ತಮ್ಮ ಸ್ನೇಹಿತ ಗೋಪಾಲ್ ಬಿಸ್ವಾಸ್ ಮನೆಗೆ ಬಂದಿದ್ದ ಬಾಂಗ್ಲಾದೇಶದ ಸಂಸದ ಅನ್ವರುಲ್, ಮೇ 14ರಂದು ನಾಪತ್ತೆಯಾಗಿದ್ದರು. ಬಳಿಕ ಭೀಕರವಾಗಿ ಹತ್ಯೆಯಾಗಿ ಪ್ಲಾಸ್ಟಿಕ್ ಕವರ್‌ಗಳಲ್ಲಿ ಕೋಲ್ಕತಾದಲ್ಲಿ ಅವರ ಶವದ ತುಂಡುಗಳು ಪತ್ತೆಯಾಗಿತ್ತು.

ಅನ್ವರುಲ್ ಅವರ ಹತ್ಯೆ ನಂತರದ ಕೃತ್ಯಗಳು ಎದೆನಡುಗಿಸುವಂತಿದ್ದು, ಈ ಬಗ್ಗೆ ಬಂಧಿತ ಆರೋಪಿ ಜಿಹಾದ್ ಹವಾಲ್ದಾರ್ ಮಾಹಿತಿ ನೀಡಿದ್ದಾನೆ. ಸಂಸದನನ್ನು ಮೊದಲು ಉಸಿರುಗಟ್ಟಿಸಿ ಕೊಂದು, ಬಳಿಕ ದೇಹವನ್ನು ಕತ್ತರಿಸಲಾಗಿದೆ. ತಮ್ಮ ಗುಂಪು ಅವರ ದೇಹದ ಚರ್ಮವನ್ನು ಸುಲಿದು, ಎಲ್ಲ ಮಾಂಸವನ್ನು ಹೊರಗೆ ತೆಗೆದಿತ್ತು. ಅವರ ಗುರುತು ಸಿಗುವ ಯಾವ ಸಾಧ್ಯತೆಯೂ ಇಲ್ಲದಂತೆ ಮಾಡಲು ದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಲಾಗಿತ್ತು. ಅವುಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಲಾಗಿತ್ತು. ಮೂಳೆಗಳನ್ನು ಸಹ ಸಣ್ಣ ತುಂಡುಗಳನ್ನಾಗಿ ಕತ್ತರಿಸಲಾಗಿತ್ತು. ಈ ಪ್ಯಾಕೆಟ್‌ಗಳನ್ನು ಅಲ್ಲಿಂದ ಸಾಗಿಸಿ, ಕೋಲ್ಕತಾ ನಗರದ ತುಂಬಾ ಎಸೆಯಲಾಗಿತ್ತು ಎಂದು ಆರೋಪಿ ಜಿಹಾದ್ ಹವಾಲ್ದಾರ್ ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಈ ಪ್ರಕರಣದ ಕುರಿತು ಮತ್ತಷ್ಟು ತನಿಖೆ ನಡೆಯುತ್ತಿದೆ.

Ad
Ad
Nk Channel Final 21 09 2023
Ad