Bengaluru 22°C
Ad

ರೇವ್ ಪಾರ್ಟಿ ಪ್ರಕರಣ: ಆಂಧ್ರ ಸಚಿವ, ಎಂಎಲ್​ಎ ಆಪ್ತರು ಸಿಬಿಐ ವಶಕ್ಕೆ

ಜಿ.ಆರ್.ಫಾರ್ಮ್ ಹೌಸ್ ರೇವ್ ಪಾರ್ಟಿ ಪ್ರಕರಣಕ್ಕೆ ಒಂದರ ಮೇಲೊಂದು ಟ್ವಿಸ್ಟ್‌ಗಳು ಸಿಗುತ್ತಲೆ ಇವೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಸಚಿವ ಕಾಕನಿ ಗೋವರ್ಧನ ರೆಡ್ಡಿ ಹಾಘೂ ಎಂಎಲ್ಎ ಶ್ರೀಕಾಂತ್ ರೆಡ್ಡಿ ಆಪ್ತರನ್ನು ಸಿಸಿಬಿ ವಶಕ್ಕೆ ಪಡೆದಿದೆ.

ಬೆಂಗಳೂರು : ಜಿ.ಆರ್.ಫಾರ್ಮ್ ಹೌಸ್ ರೇವ್ ಪಾರ್ಟಿ ಪ್ರಕರಣಕ್ಕೆ ಒಂದರ ಮೇಲೊಂದು ಟ್ವಿಸ್ಟ್‌ಗಳು ಸಿಗುತ್ತಲೆ ಇವೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಸಚಿವ ಕಾಕನಿ ಗೋವರ್ಧನ ರೆಡ್ಡಿ ಹಾಘೂ ಎಂಎಲ್ಎ ಶ್ರೀಕಾಂತ್ ರೆಡ್ಡಿ ಆಪ್ತರನ್ನು ಸಿಸಿಬಿ ವಶಕ್ಕೆ ಪಡೆದಿದೆ.

ಮೇ 19 ರಂದು ಎಲೆಕ್ಟ್ರಾನಿಕ್ ಸಿಟಿ ಹೊರವಲಯದ ಜಿ.ಆರ್.ಫಾರ್ಮ್ ಹೌಸ್ ನಲ್ಲಿ ರೇವ್ ಪಾರ್ಟಿ ಆಯೋಜನೆಯಾಗಿತ್ತು. ಆ ವೇಳೆ ಕಾರೊಂದರಲ್ಲಿ ಎಂಎಲ್​ಎ ಪಾಸ್ ಪತ್ತೆಯಾಗಿತ್ತು. ಸದ್ಯ ಈಗ ಸಚಿವರಾಗಿರುವ ಆಂಧ್ರದ ಕಾಕಾನಿ ಗೋವರ್ಧನ್ ರೆಡ್ಡಿ ಎಂಬ ಎಂಎಲ್​ಎ ಪಾಸ್ ಪತ್ತೆಯಾದ ಹಿನ್ನೆಲೆ ಜಾಡು ಬೆನ್ನತಿದ ಸಿಸಿಬಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ರೇವ್ ಪಾರ್ಟಿ ಆಯೋಜನೆಯಲ್ಲಿ ಈತ ಪ್ರಮುಖ ಪಾತ್ರವಹಿಸಿದ್ದ. ಜೊತೆಗೆ ಕಾಕಾನಿ ಗೋವರ್ಧನ ರೆಡ್ಡಿಗೆ ಆಪ್ತ ಎಂಬ ಮಾಹಿತಿ ತಿಳಿದುಬಂದಿದೆ. ಸದ್ಯ ಪೂರ್ಣ ರೆಡ್ಡಿಯ ವಿಚಾರಣೆ ನಡೆಸಲಾಗುತ್ತಿದೆ.ಇನ್ನು ಈ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಮತ್ತೋರ್ವ ಆರೋಪಿಗೆ ರಾಜಕೀಯ ನಂಟಿದೆ. ಅರೂಣ್ ಕುಮಾರ್ ‌ಅಲಿಯಾಸ್ ಅರೂಣ್ ಚೌದರಿಗೆ ರಾಜಕೀಯ ನಂಟು ಇದೆ ಎಂಬುವುದು ಪತ್ತೆಯಾಗಿದೆ.

Ad
Ad
Nk Channel Final 21 09 2023
Ad