Bengaluru 25°C
Ad

ವಿಚಾರಣೆಗಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾದ ಶಾಸಕ ಹರೀಶ್ ಪೂಂಜಾ

Harishpoonja

ಬೆಳ್ತಂಗಡಿ: ಎರಡೆರಡು ಎಫ್ಐಆರ್ ದಾಖಲಾದ ಬೆನ್ನಲ್ಲೇ ಶಾಸಕ ಹರೀಶ್ ಪೂಂಜಾ ಅವರನ್ನು ಅರೆಸ್ಟ್ ಮಾಡಲು ಹೋಗಿ ಇಂದು ಇಡೀ ದಿನ ನಡೆದ ಹೈಡ್ರಾಮಾದ ಬಳಿಕ   ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ರಾತ್ರಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಆಗಮಿಸಿದ್ದಾರೆ.

ಹರೀಶ್ ಪೂಂಜಾ ಅವರ ಮೇಲೆ ಎಫ್ಐಆರ್ ದಾಖಲಾದ ಬೆನ್ನಲ್ಲೇ ಪೊಲೀಸರು ಅರೆಸ್ಟ್ ಮಾಡಲು ಇಂದು ಹರೀಶ್ ಪೂಂಜಾ ಅವರ ಮನೆಗೆ ಬಂದಿದ್ದುರು, ಈ ವೇಳೆ ನೂರಾರು ಕಾರ್ಯಕ್ರರ್ತರು ಮನೆ ಮುಂದೆ ಸೇರಿ ದೊಡ್ಡ ಡ್ರಾಮಾವೇ ನಡೆದು ಹೋಗಿತ್ತು.

ಬಳಿಕ ಪೊಲೀಸರು ಹರೀಶ್ ಪೂಂಜಾ ಅವರಿಗೆ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿ ತೆರಳಿದ್ದರು. ಅದರಂತೆ ರಾತ್ರಿ ಹರೀಶ್ ಪೂಂಜಾ ಅವರು ತಮ್ಮ ವಕೀಲರೊಂದಿಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಈ ವೇಳೆ ಶಾಸಕರಾದ ವೇದವ್ಯಾಸ್ ಕಾಮತ್, ಸುನಿಲ್ ಕುಮಾರ್ ಜೊತೆಗಿದ್ದರು.

Ad
Ad
Nk Channel Final 21 09 2023
Ad