Bengaluru 22°C
Ad

ಇಂದು 58 ಕ್ಷೇತ್ರಗಳಲ್ಲಿ 6ನೇ ಹಂತದ ಲೋಕಸಭೆ ಚುನಾವಣೆ : 889 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಇಂದು 58 ಕ್ಷೇತ್ರಗಳಲ್ಲಿ 6 ನೇ ಹಂತದ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 889 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ.

ನವದೆಹಲಿ: ಇಂದು 58 ಕ್ಷೇತ್ರಗಳಲ್ಲಿ 6 ನೇ ಹಂತದ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 889 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ. 7 ಸಂಸದೀಯ ಸ್ಥಾನಗಳನ್ನು ಹೊಂದಿರುವ ರಾಷ್ಟ್ರ ರಾಜಧಾನಿ ದೆಹಲಿ ಕೂಡ ಮತದಾನಕ್ಕೆ ಸಜ್ಜಾಗಿದೆ. ಜೂನ್ 4ರಂದು ಎಲ್ಲ ಹಂತಗಳ ಚುನಾವಣೆಯ ಮತ ಎಣಿಕೆ ನಡೆಯಲಿದೆ.

ಇಂದು ಬಿಹಾರ (8 ಸ್ಥಾನಗಳು), ಹರಿಯಾಣ (ಎಲ್ಲಾ 10 ಸ್ಥಾನಗಳು), ಜಮ್ಮು ಮತ್ತು ಕಾಶ್ಮೀರ (1 ಸ್ಥಾನ), ಜಾರ್ಖಂಡ್ (4 ಸ್ಥಾನಗಳು), ದೆಹಲಿ (ಎಲ್ಲಾ 7 ಸ್ಥಾನಗಳು), ಒಡಿಶಾ (6 ಸ್ಥಾನಗಳು), ಉತ್ತರ ಪ್ರದೇಶ (14 ಸ್ಥಾನಗಳು), ಮತ್ತು ಪಶ್ಚಿಮ ಬಂಗಾಳ (8 ಸ್ಥಾನಗಳು)ದಲ್ಲಿ ಮತದಾನ ನಡೆಯಲಿದೆ.

899 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು 1.52 ಕೋಟಿ ಮತದಾರರು ಇಂದು ಮತ ಚಲಾಯಿಸಲಿದ್ದಾರೆ. 82 ಲಕ್ಷ ಪುರುಷ ಮತ್ತು 69 ಲಕ್ಷ ಮಹಿಳಾ ಮತದಾರರು ಹಾಗೂ 1,228 ತೃತೀಯಲಿಂಗಿ ಮತದಾರರು ಸೇರಿದಂತೆ ಒಟ್ಟು 1.52 ಕೋಟಿ ಮತದಾರರು 13,000ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ತಮ್ಮ ಮತ ಚಲಾಯಿಸಲು ಅರ್ಹರಾಗಿದ್ದಾರೆ.

Ad
Ad
Nk Channel Final 21 09 2023
Ad