Bengaluru 23°C
Ad

ಸಂಕಷ್ಟಕ್ಕೆ ಸಿಲುಕಿದ ಕಲ್ಲಂಗಡಿ ಬೆಳೆಗಾರ: ದರ ಕುಸಿತ, ಕಾಡುಹಂದಿ ಕಾಟದಿಂದ ರೈತ ಕಂಗಾಲು

ಈ ವರ್ಷ ಬೀದರ್ ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ಕಲ್ಲಂಗಡಿ ಯನ್ನ ರೈತರು ಬೆಳೆಸಿದ್ದರು. ಮಾರ್ಚ್, ಎಪ್ರಿಲ್ ಮತ್ತು ಮೇ ಎರಡನೇ ವಾರದ ತನಕ ಕಲ್ಲಂಗಡಿಗೆ ಮಾರುಕಟ್ಟೆಯಲ್ಲಿ ಉತ್ತಮವಾದ ಬೆಲೆಯಿತ್ತು.

ಬೀದರ್​: ಈ ವರ್ಷ ಬೀದರ್ ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ಕಲ್ಲಂಗಡಿ ಯನ್ನ ರೈತರು ಬೆಳೆಸಿದ್ದರು. ಮಾರ್ಚ್, ಎಪ್ರಿಲ್ ಮತ್ತು ಮೇ ಎರಡನೇ ವಾರದ ತನಕ ಕಲ್ಲಂಗಡಿಗೆ ಮಾರುಕಟ್ಟೆಯಲ್ಲಿ ಉತ್ತಮವಾದ ಬೆಲೆಯಿತ್ತು. ಆ ಸಮಯದಲ್ಲಿ ಕಟಾವಿಗೆ ಬಂದಿದ್ದ ಕಲ್ಲಂಗಡಿಯಿಂದ ರೈತರು ಉತ್ತಮವಾದ ಆದಾಯ ಗಳಿಸಿಕೊಂಡಿದ್ದರು. ಆದರೆ, ಈಗ ಕಲ್ಲಂಗಡಿ ಬೆಳೆಸಿದ ರೈತರು, ದರ ಕುಸಿತ ಹಾಗೂ ಕಾಡುಹಂದಿ ಕಾಟದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ದರ ಕುಸಿತಕ್ಕೆ ಕಲ್ಲಂಗಡಿ ಬೆಳೆದ ರೈತ ಕಂಗಾಲು: ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಾಲಹಿಪ್ಪಾರ್ಗಾ ಗ್ರಾಮದ ರೈತ ಮಹಿಳೆ ಶಿಲ್ಪಾ ಚಂದ್ರಶೇಖರ್ ಮಾಲೀ ಪಾಟೀಲ್ ಅವರು ತಮ್ಮ ಒಂದೂವರೆ ಎಕರೆಯಷ್ಟು ಜಮೀನಿನಲ್ಲಿ ಕಲ್ಲಂಗಡಿ ಬೆಳೆಸಿದ್ದಾರೆ. ಮಾರ್ಚ್​ನಲ್ಲಿ ಕಲ್ಲಂಗಡಿ ನಾಟಿ ಮಾಡಿದ್ದ ಇವರು, ಈಗ ಮೇ ಕೊನೆಯ ವಾರದಲ್ಲಿ ಕಲ್ಲಂಗಡಿ ಕಟಾವಿಗೆ ಬಂದಿದೆ. ಇನ್ನು ಕಲ್ಲಂಗಡಿ ಬೆಳೆ ನಾಟಿ ಮಾಡುವ ಮುನ್ನ ಹನಿ ನೀರಾವರಿ ಪದ್ದತಿಯಲ್ಲಿ ಬೆಳೆಸಲಾಗಿದೆ. ಕಳೆ ಬೆಳೆಯಬಾರದೆಂದು ಪ್ಲ್ಯಾಸ್ಟಿಕ್ ಮಲಚಿಂಗ್ ಪದ್ಧತಿಯಲ್ಲಿ ಕಲ್ಲಗಂಡಿ ಬೆಳೆಸಲಾಗಿದೆ. ಇದರಿಂದಾಗಿ ಬೆಳೆ ಉತ್ತಮವಾಗಿ ಬೆಳೆದಿದ್ದು, ಒಂದೊಂದು ಕಲ್ಲಂಗಡಿ ನಾಲ್ಕರಿಂದ ಐದು ಕೆ.ಜಿವರೆಗೆ ತೂಕ ಬರುತ್ತದೆ.

ಕಲ್ಲಂಗಡಿ ಕಟ್ ಮಾಡಿ ನೋಡಿದರೆ ಕೆಂಪು ಕೆಂಪಾಗಿದ್ದು, ತಿನ್ನಲೂ ಕೂಡ ರುಚಿಯಾಗಿದೆ. ಇಷ್ಟಾದರೂ ಕೂಡ ಕಲ್ಲಂಗಡಿಯನ್ನ ತೆಗೆದುಕೊಳ್ಳಲು ಯಾರು ಮುಂದೆ ಬರುತ್ತಿಲ್ಲ. ಬಂದರೂ ಕೂಡ ಕೆ.ಜಿಗೆ ಐದು ರೂಪಾಯಿವರೆಗೆ ಕೇಳುತ್ತಿದ್ದು, ಐದು ರೂಪಾಯಿ ದರಕ್ಕೆ ಕಲ್ಲಂಗಡಿ ಮಾರಾಟ ಮಾಡಿದ್ರೆ, ಜಮೀನು, ಉಳುಮೆ, ಬಿತ್ತನೆ, ಔಷದೋಪಚಾರ ಮಾಡಿದ ಖರ್ಚು ಕೂಡ ಬರುವುದಿಲ್ಲ ಎಂದು ರೈತರು ತಮ್ಮ ಅಳಲನ್ನ ತೋಡಿಕೊಳ್ಳುತ್ತಿದ್ದಾರೆ.

ದರ ಇಳಿತದ ನಡುವೆ ಕಾಡುಹಂದಿ ಕಾಟ: ಮೂರು ತಿಂಗಳುಗಳ ಕಾಲ ಕಷ್ಟಪಟ್ಟು ಕಲ್ಲಂಗಡಿಯನ್ನ ಬೆಳೆಸಿದ್ದೇವೆ. ಆದರೆ, ದರ ಕುಸಿತ ನಮ್ಮನ್ನು ಆರ್ಥಿಕ ನಷ್ಟಕ್ಕೆ ತಳ್ಳಿದೆ ಎಂದು ರೈತ ಮಹಿಳೆ ಹೇಳುತ್ತಿದ್ದಾರೆ. ಇದರ ಜೊತೆಗೆ ಬೆಳೆದ ಕಲ್ಲಂಗಡಿಗೆ ಕಾಡು ಹಂದಿಗಳ ಕಾಟವೂ ಕೂಡ ಇದೆ. ಕಳೆದೊಂದು ತಿಂಗಳಿಂದ ಕಾಡು ಹಂದಿಗಳ ಕಾಟ ಇದ್ದು, ಕಲ್ಲಂಗಡಿ ಬೆಳೆ ಉಳಿಸಿಕೊಳ್ಳಲು ಹಗಲು ರಾತ್ರಿ ಎನ್ನದೆ ಹೊಲದಲ್ಲಿಯೇ ಇದ್ದು ಬೆಳೆ ಉಳಿಕೊಂಡಿದ್ದೇವೆ. ಆದರೆ, ಕಳೆದೊಂದು ವಾರದಿಂದಾಗಿ ಹಂದಿಗಳ ಕಾಟ ವಿಫರಿತವಾಗಿದ್ದು, ಹಿಂಡು ಹಿಂಡಾಗಿ ನುಗ್ಗುವ ಹಂದಿಗಳು ಕಲ್ಲಂಗಡಿಯನ್ನ ತಿಂದು ನಾಶಮಾಡುತ್ತಿವೆಂದು ರೈತರು ಕಂಗಾಲಾಗಿದ್ದಾರೆ.

Ad
Ad
Nk Channel Final 21 09 2023
Ad