Bengaluru 24°C
Ad

ಕಾಡುಹಂದಿಗೆ ಬೈಕ್ ಡಿಕ್ಕಿ: ಗಾಯಾಳು ಸಹಾಯಕ್ಕೆ ಧಾವಿಸಿ ಬಂದ ಸಚಿವ ಈಶ್ವರ್ ಖಂಡ್ರೆ

ಕಾಡು ಹಂದಿಗೆ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸೇರಿ ಇಬ್ಬರು ಗಾಯಗೊಂಡ ಘಟನೆ ಬೀದರ್ ತಾಲೂಕಿನ ಹೊನ್ನಿಕೇರಿ ಕ್ರಾಸ್ ಬಳಿ ನಡೆದಿದೆ.

ಬೀದರ್: ಕಾಡು ಹಂದಿಗೆ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸೇರಿ ಇಬ್ಬರು ಗಾಯಗೊಂಡ ಘಟನೆ ಬೀದರ್ ತಾಲೂಕಿನ ಹೊನ್ನಿಕೇರಿ ಕ್ರಾಸ್ ಬಳಿ ನಡೆದಿದೆ.

ಬೈಕ್ ಸವಾರ ಜಾಂತಿ ಗ್ರಾಮದಿಂದ ಬೀದರ್ ನಗರಕ್ಕೆ ರಸ್ತೆಯಲ್ಲಿ ವೇಗವಾಗಿ ಹೋಗುತ್ತಿದ್ದಾಗ ಆಗಮಿಸುತ್ತಿದ್ದ  ಏಕಾಏಕಿ ಎದುರಾದ ಕಾಡುಹಂದಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ಗಾಯಗೊಂಡಿದ್ದರು.

ಈ ವೇಳೆ ಅದೇ ರಸ್ತೆಮಾರ್ಗವಾಗಿ ಭಾಲ್ಕಿಯಿಂದ ಬೀದರ್‌ ನಗರಕ್ಕೆ ಆಗಮಿಸುತ್ತಿದ್ದ ಅರಣ್ಯ ಸಚಿವ ಈಶ್ವರ ಖಂಡ್ರೆ, ಯುವಕ ಅಪಘಾತವಾಗಿ ರಸ್ತೆಗೆ ಬಿದ್ದಿದ್ದನ್ನು ಕಂಡು ಕಾರು ನಿಲ್ಲಿಸಿ ಸಹಾಯಕ್ಕೆ ಧಾವಿಸಿ ಬಂದಿದ್ದಾರೆ. ಗಾಯಾಳುಗಳನ್ನು ವಿಚಾರಿಸಿ ತಕ್ಷಣ ಪೊಲೀಸ್ ವಾಹನದಲ್ಲಿ ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ.

Ad
Ad
Nk Channel Final 21 09 2023
Ad