Bengaluru 24°C
Ad

ಉಡುಪಿಯಲ್ಲಿ ವಾರಸುದಾರರಿಲ್ಲದ ಎರಡು ಶವಗಳ ಅಂತ್ಯಸಂಸ್ಕಾರ

ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶೀಥಲೀಕೃತ ಶವರಕ್ಷಣಾ ಘಟಕದಲ್ಲಿ ಕಳೆದ ಒಂದು ತಿಂಗಳಿನಿಂದ ರಕ್ಷಿಸಿಡಲಾಗಿದ್ದ ವಾರಸುದಾರರಿಲ್ಲದ ಎರಡು ಶವಗಳ ಅಂತ್ಯಸಂಸ್ಕಾರವನ್ನು ನಗರ ಪೊಲೀಸ್ ಠಾಣೆಯು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಹಕಾರದೊಂದಿಗೆ ಬೀಡಿನಗುಡ್ಡೆಯ ರುದ್ರಭೂಮಿಯಲ್ಲಿ ಗೌರಯುತವಾಗಿ ನೆರವೇರಿಸಿತು.

ಉಡುಪಿ: ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶೀಥಲೀಕೃತ ಶವರಕ್ಷಣಾ ಘಟಕದಲ್ಲಿ ಕಳೆದ ಒಂದು ತಿಂಗಳಿನಿಂದ ರಕ್ಷಿಸಿಡಲಾಗಿದ್ದ ವಾರಸುದಾರರಿಲ್ಲದ ಎರಡು ಶವಗಳ ಅಂತ್ಯಸಂಸ್ಕಾರವನ್ನು ನಗರ ಪೊಲೀಸ್ ಠಾಣೆಯು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಹಕಾರದೊಂದಿಗೆ ಬೀಡಿನಗುಡ್ಡೆಯ ರುದ್ರಭೂಮಿಯಲ್ಲಿ ಗೌರಯುತವಾಗಿ ನೆರವೇರಿಸಿತು.

ಗಂಭೀರ ಸ್ಥಿತಿಯಲ್ಲಿದ್ದ ಅಪರಿಚಿತ ಇಬ್ಬರು ರೋಗಿಗಳು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಎ.ಎಸ್.ಐ ಅರುಣ್ ಹಂಗಾರಕಟ್ಟೆ ಮತ್ತು ವಿದ್ಯಾ ತನಿಖಾ ಸಹಾಯಕರಾಗಿ ಕಾನೂನು ಪ್ರಕ್ರಿಯೆ ನಡೆಸಿದರು.

ಸಾವಿರಾರು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಡಾ. ರಮೇಶ್ ಕುಂದರ್ ಮತ್ತು ನಗರ ಠಾಣಾಧಿಕಾರಿ ಪುನೀತ್ ಕುಮಾರ್ ಅನಾಥ ಶವಗಳಿಗೆ ಹೂಹಾರ ಸಮರ್ಪಿಸಿ ಅಂತಿಮ ಗೌರವ ಸಲ್ಲಿಸಿದರು.

ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರ ನೇತ್ರತ್ವದಲ್ಲಿ ಅಂತ್ಯಸಂಸ್ಕಾರ ಪ್ರಕ್ರಿಯೆಗಳು ನಡೆದವು. ಪ್ರದೀಪ್ ಅಜ್ಜರಕಾಡು, ವಿಕಾಸ್ ಶೆಟ್ಟಿ, ಗಣೇಶ್ ಭಾಗಿಯಾಗಿದ್ದರು. ಪ್ಲವರ್ ವಿಷ್ಣು, ನಗರಸಭೆ, ಜಿಲ್ಲಾಸ್ಪತ್ರೆ ಸಹಕರಿಸಿತು.

Ad
Ad
Nk Channel Final 21 09 2023
Ad