Bengaluru 24°C
Ad

ಇಂದು ಮಲೇಷ್ಯಾ ಮಾಸ್ಟರ್ಸ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿ ಸೆಮಿಫೈನಲ್‌

ಇಂದು ನಡೆಯುವ ಮಲೇಷ್ಯಾ ಮಾಸ್ಟರ್ಸ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪಂದ್ಯದಲ್ಲಿ ಅವಳಿ ಒಲಿಂಪಿಕ್ಸ್‌ ಪದಕ ವಿಜೇತ, ಭಾರತದ ತಾರಾ ಶಟ್ಲರ್‌ ಪಿ.ವಿ.ಸಿಂಧು  ಎದುರಾಳಿ ಥಾಯ್ಲೆಂಡ್‌ನ ಬುಸಾನನ್‌ ಜೊತೆ ಆಡಳಿದ್ದಾರೆ.

ಕೌಲಾಲಂಪುರ: ಇಂದು ನಡೆಯುವ ಮಲೇಷ್ಯಾ ಮಾಸ್ಟರ್ಸ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪಂದ್ಯದಲ್ಲಿ ಅವಳಿ ಒಲಿಂಪಿಕ್ಸ್‌ ಪದಕ ವಿಜೇತ, ಭಾರತದ ತಾರಾ ಶಟ್ಲರ್‌ ಪಿ.ವಿ.ಸಿಂಧು  ಎದುರಾಳಿ ಥಾಯ್ಲೆಂಡ್‌ನ ಬುಸಾನನ್‌ ಜೊತೆ ಆಡಳಿದ್ದಾರೆ.

ಮಾಜಿ ವಿಶ್ವ ಚಾಂಪಿಯನ್‌ ಸಿಂಧು ಶುಕ್ರವಾರ ನಡೆದಿದ್ದ ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವ ನಂ.6, ಚೀನಾದ ಹ್ಯಾನ್‌ ಯು ವಿರುದ್ಧ ತೀವ್ರ ಹೋರಾಟ ನಡೆಸಿ 21-13, 14-21, 21-12ರಲ್ಲಿ ಗೆಲುವು ಸಾಧಿಸಿದ್ದರು.

ಕಳೆದ 2 ವರ್ಷಗಳಿಂದಲೂ ಪ್ರಶಸ್ತಿ ಬರ ಎದುರಿಸುತ್ತಿರುವ ಸಿಂಧು ಸದ್ಯ ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಪದಕ ಭರವಸೆಯೊಂದನ್ನು ಮೂಡಿಸಿದ್ದಾರೆ.

ಜುಲೈ 26ರಿಂದ ಆರಂಭಗೊಳ್ಳುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೂ ಮುನ್ನ ಸಿಂಧು ಮತ್ತೆ ಕಮ್​ ಬಾಕ್​ ಮಾಡಿದ್ದು ಸಂತಸದ ವಿಚಾರ. 2022ರ ಸಿಂಗಾಪುರ್‌ ಓಪನ್‌ ಪಂದ್ಯಾವಳಿ ಬಳಿಕ ಸಿಂಧು ಯಾವುದೇ ಪ್ರಶಸ್ತಿ ಜಯಿಸಿಲ್ಲ.

ಪ್ಯಾರಿಸ್‌ ಒಲಿಂಪಿಕ್ಸ್‌ ಸವಾಲಿಗೆ ಸಜ್ಜಾಗುವ ಕಾರಣದಿಂದ ಪ್ರತಿಷ್ಠಿತ ಉಬರ್‌ ಕಪ್‌ ಮತ್ತು ಥಾಯ್ಲೆಂಡ್‌ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಪಂದ್ಯಾವಳಿಯಿಂದ ಹಿಂದೆ ಸರಿದ್ದಿದ್ದರು. ಇದೀಗ ಮಲೇಷ್ಯಾದಲ್ಲಿ ಪ್ರಶಸ್ತಿ ಬರಗಾಲ ನೀಗಿಸಿಕೊಳ್ಳುವ ಉತ್ತಮ ಅವಕಾಶವಿದೆ.

ಶುಕ್ರವಾರ ನಡೆದಿದ್ದ ಮತ್ತೊಂದು ಮಹಿಳಾ ಸಿಂಗಲ್ಸ್​ ಸ್ಪರ್ಧೆಯಲ್ಲಿ ಭಾರತದ ಮತ್ತೋರ್ವ ಆಟಗಾರ್ತಿ ಅಶ್ಮಿತಾ ಚಾಲಿಹಾ ಸೋಲು ಕಂಡರು. ಚೀನದ ಝಾಂಗ್‌ ಯಿ ಮಾನ್‌ ವಿರುದ್ಧ ಅಶ್ಮಿತಾ 10-21, 15-21 ಅಂತರದಲ್ಲಿ ಸೋತರು.

Ad
Ad
Nk Channel Final 21 09 2023
Ad