Bengaluru 23°C
Ad

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 4 ಎಡ್ಜ್‌ ಲ್ಯಾಪ್‌ಟಾಪ್ ಲಾಂಚ್‌

Samsung Galaxy

ಸ್ಯಾಮ್‌ಸಂಗ್‌ ಗ್ಯಾಲಕ್ಸಿ  ಸ್ಮಾರ್ಟ್‌ಫೋನ್‌ಗಳಿಗೆ ಎಷ್ಟು ಬೇಡಿಕೆ ಇದೆಯೋ ಅದೇ ರೀತಿ ಇತ್ತೀಚಿನ ದಿನಗಳಲ್ಲಿ ಲ್ಯಾಪ್‌ಟಾಪ್‌ಗಳಿಗೂ ಸಹ ಬೇಡಿಕೆ ಇದೆ. ಅದರಂತೆ ಈಗ ಜಾಗತಿಕವಾಗಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 4 ಎಡ್ಜ್‌ ಲ್ಯಾಪ್‌ಟಾಪ್ ಅನ್ನು ಘೋಷಣೆ ಮಾಡಲಾಗಿದೆ.

ಹೌದು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 4 ಎಡ್ಜ್ (Samsung Galaxy Book 4 Edge) ಲ್ಯಾಪ್‌ಟಾಪ್‌ ಅನ್ನು ಲಾಂಚ್‌ ಮಾಡಲಾಗಿದ್ದು, ಇದು ಸ್ನಾಪ್‌ಡ್ರಾಗನ್ X ಎಲೈಟ್ ಸಿಪಿಯು ಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಅಲ್ಲದೆ 16GB RAM ಆಯ್ಕೆಯ ಮೂಲಕ ಉತ್ತಮವಾಗಿ ಕೆಲಸ ಮಾಡಲಿದೆ. ಹಾಗಿದ್ರೆ, ಇದು ಹೊಂದಿರುವ ಇತರೆ ಪ್ರಮುಖ ಫೀಚರ್ಸ್‌ ಏನು?, ಈ ಲ್ಯಾಪ್‌ಟಾಪ್‌ನ ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 4 ಎಡ್ಜ್‌ ಲ್ಯಾಪ್‌ಟಾಪ್‌ ಡಿಸ್‌ಪ್ಲೇ ಮಾಹಿತಿ: ಈ ಲ್ಯಾಪ್‌ಟಾಪ್‌ 14 ಇಂಚಿನ ಮತ್ತು 16 ಇಂಚಿನ ಎರಡು ವೇರಿಯಂಟ್‌ನಲ್ಲಿ ಲಾಂಚ್‌ ಆಗಿದ್ದು, 120Hz ರಿಫ್ರೆಶ್ ರೇಟ್‌ ಆಯ್ಕೆಯೊಂದಿಗೆ 3K ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಅಲ್ಲದೆ ಇದು ಎಸ್‌ಡಿಆರ್‌ ವಿಷಯಕ್ಕೆ 400 ನಿಟ್ಸ್‌ ಬ್ರೈಟ್‌ನೆಸ್ ಮತ್ತು ಹೆಚ್‌ಡಿಆರ್‌ ವಿಷಯಕ್ಕೆ 500 ನಿಟ್ಸ್‌ ಬ್ರೈಟ್‌ನೆಸ್ ನೀಡುತ್ತದೆ. ಹೊಸ ಸ್ಯಾಮ್‌ಸಂಗ್ ಲ್ಯಾಪ್‌ಟಾಪ್ ವಿಆರ್‌ಆರ್‌ (ವೇರಿಯಬಲ್ ರಿಫ್ರೆಶ್ ರೇಟ್) ತಂತ್ರಜ್ಞಾನವನ್ನು ಸಹ ಬೆಂಬಲಿಸುತ್ತದೆ.

14 ಇಂಚಿನ ಗ್ಯಾಲಕ್ಸಿ ಬುಕ್‌ 4 ಎಡ್ಜ್ 4.0GHz ಡ್ಯುಯಲ್ ಕೋರ್ ಬೂಸ್ಟ್ ಜೊತೆಗೆ 12 ಕೋರ್ 3.4GHz ಸ್ನಾಪ್‌ಡ್ರಾಗನ್ X ಎಲೈಟ್ ಪ್ರೊಸೆಸರ್ ಹೊಂದಿದೆ. ಇದು 512GB ಮತ್ತು 1TB SSD ಆಯ್ಕೆಗಳೊಂದಿಗೆ 16GB RAM ಅನ್ನು ಪ್ಯಾಕ್ ಮಾಡುತ್ತದೆ. 16-ಇಂಚಿನ ಮಾದರಿಯು ಅದೇ ಪ್ರೊಸೆಸರ್ ಮತ್ತು 512GB ಸಂಗ್ರಹದೊಂದಿಗೆ ಬರುತ್ತದೆ. ಟಾಪ್-ಎಂಡ್ 16 ಇಂಚಿನ ಗ್ಯಾಲಕ್ಸಿ ಬುಕ್‌ 4 ಎಡ್ಜ್ 3.8GHz ಸ್ನಾಪ್‌ಡ್ರಾಗನ್ X ಎಲೈಟ್ ಪ್ರೊಸೆಸರ್ ಅನ್ನು 4.2GHz ಬೂಸ್ಟ್‌ನೊಂದಿಗೆ ರನ್ ಮಾಡುತ್ತದೆ.

ಇನ್ನು 14 ಇಂಚಿನ ವೇರಿಯಂಟ್‌ನಲ್ಲಿ ಎರಡು ಯುಎಸ್‌ಬಿ 4 ಟೈಪ್-ಸಿ ಪೋರ್ಟ್‌ಗಳು, ಹೆಚ್‌ಡಿಎಮ್‌ಐ 2.1 ಮತ್ತು ಹೆಡ್‌ಫೋನ್ ಜ್ಯಾಕ್ ಆಯ್ಕೆ ನೀಡಲಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 4 ಎಡ್ಜ್ ಬೆಲೆ ಹಾಗೂ ಲಭ್ಯತೆ: 14 ಇಂಚಿನ ವೇರಿಯಂಟ್‌ $1,349.99 (ಸುಮಾರು 1,12,353 ರೂ.ಗಳು) ನಿಂದ ಪ್ರಾರಂಭವಾಗುತ್ತದೆ ಮತ್ತು 16GB RAM ಮತ್ತು 512GB SSD ಯೊಂದಿಗೆ ಬರುತ್ತದೆ. ಸಾಮಾನ್ಯ ಆವೃತ್ತಿಗೆ $1,449.99 (ಅಂದಾಜು 1,20,682 ರೂ.ಗಳು) ಮತ್ತು ಟಾಪ್-ಎಂಡ್ ಆವೃತ್ತಿಗೆ ಬೆಲೆ $1,749.99 (ಅಂದಾಜು ರೂ. 1,45,668ರೂ.ಗಳು) ರಿಂದ ಪ್ರಾರಂಭವಾಗಲಿದೆ. ಈ ಲ್ಯಾಪ್‌ಟಾಪ್‌ ಜೂನ್ 18 ರಿಂದ ಫ್ರಾನ್ಸ್, ಜರ್ಮನಿ, ಇಟಲಿ, ಕೊರಿಯಾ, ಸ್ಪೇನ್, ಯುಕೆ ಮತ್ತು ಯುಎಸ್‌ನಲ್ಲಿ ಲಭ್ಯ ಇರಲಿದೆ. ಹೊಸ ಲ್ಯಾಪ್‌ಟಾಪ್ ಅನ್ನು ಮುಂಗಡವಾಗಿ ಆರ್ಡರ್ ಮಾಡುವವರಿಗೆ 50 ಇಂಚಿನ ಟಿವಿಯನ್ನು ಸ್ಯಾಮ್‌ಸಂಗ್‌ ಉಚಿತವಾಗಿ ನೀಡಲಿದೆ.

Ad
Ad
Nk Channel Final 21 09 2023
Ad