Bengaluru 21°C
Ad

ಕರ್ನಾಟಕದಲ್ಲೂ ಒಂದು ತಿಂಗಳು ಚಿತ್ರಮಂದಿರಗಳನ್ನು ಮುಚ್ಚುವ ಚಿಂತನೆ: ನಿರ್ಮಾಪಕರಿಂದ ಆಕ್ರೋಶ

ಐಪಿಎಲ್‌, ಚುನಾವಣೆ ಜತೆಗೆ ಸ್ಟಾರ್‌ ನಟರ ಸಿನಿಮಾಗಳ ಬಿಡುಗಡೆ ಇಲ್ಲದ ಕಾರಣ ಕರ್ನಾಟಕದಲ್ಲೂ ಒಂದು ತಿಂಗಳು ಚಿತ್ರಮಂದಿರಗಳನ್ನು ಮುಚ್ಚಬೇಕು ಎಂಬ ಚಿಂತನೆ ನಡೆದಿದೆ. ಥಿಯೇಟರ್‌ಗಳನ್ನು ಮುಚ್ಚುವ ಚಿಂತನೆಗೆ ಭಾರಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಬೆಂಗಳೂರು: ಐಪಿಎಲ್‌, ಚುನಾವಣೆ ಜತೆಗೆ ಸ್ಟಾರ್‌ ನಟರ ಸಿನಿಮಾಗಳ ಬಿಡುಗಡೆ ಇಲ್ಲದ ಕಾರಣ ಕರ್ನಾಟಕದಲ್ಲೂ ಒಂದು ತಿಂಗಳು ಚಿತ್ರಮಂದಿರಗಳನ್ನು ಮುಚ್ಚಬೇಕು ಎಂಬ ಚಿಂತನೆ ನಡೆದಿದೆ. ಥಿಯೇಟರ್‌ಗಳನ್ನು ಮುಚ್ಚುವ ಚಿಂತನೆಗೆ ಭಾರಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಫಿಲಂ ಚೇಂಬರ್‌ ಅಧ್ಯಕ್ಷ ಎನ್‌.ಎಂ.ಸುರೇಶ್‌ ನೇತೃತ್ವದಲ್ಲಿ ಹೈವೋಲ್ಟೇಜ್ ಸಭೆ ನಡೆದಿದೆ. ಕನ್ನಡ ಚಿತ್ರರಂಗದ ಕುರಿತು ಇಷ್ಟು ದಿನಗಳಲ್ಲಿ ಈಗ ಸಭೆಯಾಗುತ್ತಿರುವುದು ಒಳ್ಳೆಯ ವಿಚಾರ.

ತೆಲಂಗಾಣದ ಪರಿಸ್ಥಿತಿ ನಮ್ಮ ಗಮನಕ್ಕಿದೆ. ಆದರೆ, ಕರ್ನಾಟಕದಲ್ಲಿ ಚಿತ್ರಮಂದಿರಗಳನ್ನು ಬಂದ್‌ ಮಾಡುವುದು ಸರಿಯಲ್ಲ. ತಾತ್ಕಾಲಿಕವಾಗಿ ಸಿಂಗ್‌ ಸ್ಕ್ರೀನ್‌ ಥಿಯೇಟರ್‌ಗಳನ್ನು ಬಂದ್‌ ಮಾಡಿದರೆ ಕನ್ನಡ ಚಿತ್ರರಂಗದ ಮೇಲೆ ಪರಿಣಾಮ ಬೀರುತ್ತದೆ.

ಪ್ರದರ್ಶಕರು, ವಿತರಕರು ಹಾಗೂ ನಿರ್ಮಾಪಕರು ಸದ್ಯಕ್ಕೆ ಯಾವ ನಿರ್ಧಾರವನ್ನೂ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಸುಮಾರು 80ಕ್ಕೂ ಹೆಚ್ಚು ಸಿನಿಮಾಗಳಿಗೆ ರಿಲೀಸ್ ಪ್ಲಾನ್ ಮಾಡಲು ಆಗುತ್ತಿಲ್ಲ.

ಸ್ಟಾರ್ ಚಿತ್ರಗಳು ಹೆಚ್ಚಾಗುವುದು ಮುಂದೆಯೂ ಅಸಾಧ್ಯ ಎಂಬಂತಿದೆ. ಥಿಯೇಟರ್‌ಗಳನ್ನು ಮುಚ್ಚಿದರೆ ಮುಂದಾಗುವ ಪರಿಣಾಮಗಳ ಬಗ್ಗೆಯೂ ಗಮನ ಇರಬೇಕು. ಹಾಗಾಗಿ, ಚಿತ್ರಮಂದಿರಗಳನ್ನು ಮುಚ್ಚಬಾರದು ಎಂದು ನಿರ್ಮಾಪಕರು ಆಗ್ರಹಿಸಿದರು.

ಕರ್ನಾಟಕದಲ್ಲಿ ಸ್ಟಾರ್‌ ನಟರ ಸಿನಿಮಾಗಳ ಬಿಡುಗಡೆಯಾಗದಿರುವ ಕುರಿತು ಕೂಡ ಸಭೆಯಲ್ಲಿ ಚರ್ಚಿಸಲಾಯಿತು. ಇದರಿಂದ ಕನ್ನಡ ಚಿತ್ರರಂಗ ದಯನೀಯ ಸ್ಥಿತಿಗೆ ತಲುಪುವ ಕುರಿತು ಕೂಡ ಅಭಿಪ್ರಾಯ ವ್ಯಕ್ತವಾಯಿತು. ಸ್ಟಾರ್‌ ನಟರು ವರ್ಷಕ್ಕೆ ಎರಡು ಸಿನಿಮಾ ಮಾಡುವಂತೆ ಮನವಿ ಮಾಡಲು ಕೂಡ ನಿರ್ಧರಿಸಲಾಯಿತು. ಚಿತ್ರರಂಗದ ಉಳಿವು, ಮುಂದಿನ ದಿನಗಳಲ್ಲಿ ಮಾಡಬೇಕಾದ ಬದಲಾವಣೆಗಳು ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು.

 

Ad
Ad
Nk Channel Final 21 09 2023
Ad