Bengaluru 23°C
Ad

ಬೆಂಡೆಕಾಯಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳು

ಬೆಂಡೆಕಾಯಿ ತರಕಾರಿ ತಿನ್ನುವುದರಿಂದ ಆರೋಗ್ಯಕ್ಕೆ ಉತ್ತಮ ಲಾಭವಿದೆ. ಹಲವು ರೀತಿಯ ಉತ್ಕರ್ಷಣ ನಿರೋಧಕಗಳು, ಹೇರಳವಾದ ನಾರು, ಪಿಷ್ಟ, ಖನಿಜಗಳು ಮತ್ತು ವಿಟಮಿನ್‌ಗಳು ಬೆಂಡೆಕಾಯಿಯಲ್ಲಿವೆ.

ಬೆಂಡೆಕಾಯಿ ತರಕಾರಿ ತಿನ್ನುವುದರಿಂದ ಆರೋಗ್ಯಕ್ಕೆ ಉತ್ತಮ ಲಾಭವಿದೆ. ಹಲವು ರೀತಿಯ ಉತ್ಕರ್ಷಣ ನಿರೋಧಕಗಳು, ಹೇರಳವಾದ ನಾರು, ಪಿಷ್ಟ, ಖನಿಜಗಳು ಮತ್ತು ವಿಟಮಿನ್‌ಗಳು ಬೆಂಡೆಕಾಯಿಯಲ್ಲಿವೆ.

ಹಾಗಾಗಿಯೇ ಟೈಪ್‌ 2 ಮಧುಮೇಹದಿಂದ ಹಿಡಿದು, ಜೀರ್ಣಾಂಗಗಳ ತೊಂದರೆಯನ್ನು ಸುಧಾರಿಸುವವರೆಗೆ, ಹೃದಯ ರೋಗಗಳಿಂದ ಹಿಡಿದು ಕೆಲವು ಕ್ಯಾನ್ಸರ್‌ಗಳನ್ನು ದೂರ ಮಾಡುವವರೆಗೆ ಬೆಂಡೆಕಾಯಿ ಆರೋಗ್ಯಕ್ಕೆ ಬಹುಪಯೋಗವಿದೆ.

ಬೆಂಡೆಕಾಯಿಯಲ್ಲಿರುವ ಕರಗಬಲ್ಲ ನಾರುಗಳು ಎಲ್‌ಡಿಎಲ್‌ ಅಥವಾ ಕೆಟ್ಟ ಕೊಲೆಸ್ಟ್ರಾಲ್‌ ಅಂಶವನ್ನು ಕರಗಿಸುವಲ್ಲಿ ನೆರವಾಗುತ್ತವೆ. ಹಾಗಾಗಿ ಕೊಲೆಸ್ಟ್ರಾಲ್‌ ತೊಂದರೆಯಿಂದ ಬಳಲುತ್ತಿರುವವರು ಬೆಂಡೆಕಾಯಿಯ ಸೇವನೆಯನ್ನು ಹೆಚ್ಚಿಸಬಹುದು. ಇದರಲ್ಲಿರುವ ಕರಗದಂಥ ನಾರುಗಳು ಜೀರ್ಣಾಂಗದ ಆರೋಗ್ಯ ಏರುಪೇರಾಗದಂತೆ ನೋಡಿಕೊಳ್ಳುತ್ತವೆ. ಮಲಬದ್ಧತೆಯಿಂದ ಮುಕ್ತಿ ನೀಡುತ್ತವೆ.

ಇದರಲ್ಲಿರುವ ನಾರಿನಂಶದಿಂದಾಗಿ ರಕ್ತದಲ್ಲಿರುವ ಸಕ್ಕರೆಯಂಶವನ್ನು ಸ್ಥಿರವಾಗಿ ಇರಿಸಲು ಅನುಕೂಲ. ಪರಂಪರಾಗತವಾಗಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿರಿಸಲು ಇದನ್ನು ಬಳಸಲಾಗುತ್ತದೆ. ಆಹಾರ ಗ್ಲೂಕೋಸ್‌ ಆಗಿ ಪರಿವರ್ತನೆಯಾಗುವುದನ್ನು ನಿಧಾನವಾಗಿಸಿ, ಸಕ್ಕರೆಯಂಶ ಏರಿಳಿತ ಆಗದಂತೆ ತಡೆಯುವ ಸಾಧ್ಯತೆ ಇದಕ್ಕಿದೆ.

ಇದರಲ್ಲಿರುವ ವಿಟಮಿನ್‌ ಎ ಅಂಶವು ಕಣ್ಣಿನ ಆರೋಗ್ಯ ರಕ್ಷಣೆಯಲ್ಲಿ ಒಳ್ಳೆಯ ನೆರವು ನೀಡುತ್ತದೆ. ಕಾರ್ನಿಯ ರಕ್ಷಣೆಗೆ ಬೇಕಾದ ಅಂಶಗಳು ಬೆಂಡೆಕಾಯಿಯಲ್ಲಿವೆ. ಇದಲ್ಲದೆ, ಕಣ್ಣಿನ ಸೋಂಕುಗಳನ್ನು ದೂರ ಮಾಡುವಂಥ ಸಾಧ್ಯತೆಯೂ ಈ ತರಕಾರಿಗಿದೆ.

ಚರ್ಮದ ಕಾಂತಿ ಹೆಚ್ಚಳಕ್ಕೂ ಇದು ಕೊಡುಗೆಯನ್ನು ನೀಡುತ್ತದೆ. ಕೂದಲಿನ ಬೆಳವಣಿಗೆಗೆ ಬೇಕಾದಂಥ ಖನಿಜಗಳು ಮತ್ತು ವಿಟಮಿನ್‌ಗಳು ಇದರಲ್ಲಿ ವಿಫುಲವಾಗಿವೆ. ಜೊತೆಗೆ, ವಿಟಮಿನ್‌ ಸಿ ಅಧಿಕವಾಗಿದ್ದು, ಕೊಲಾಜಿನ್‌ ಹೆಚ್ಚಳಕ್ಕೆ ಅನುಕೂಲವಾಗುತ್ತದೆ. ಇದರಿಂದ ಚರ್ಮದ ಸುಕ್ಕು ನಿವಾರಣೆಯಾಗಿ, ವಯಸ್ಸಾದಂತೆ ಕಾಣುವುದನ್ನು ಮುಂದೂಡಬಹುದು.

ಬೆಂಡೆಕಾಯಿಯಲ್ಲಿ ವಿಟಮಿನ್‌ ಸಿ ವಿಫುಲವಾಗಿದೆ. ಇದು ಬಿಳಿರಕ್ತಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ಈ ಬಿಳಿ ರಕ್ತ ಕಣಗಳು ವಿಫುಲವಾಗಿ ಇದ್ದಷ್ಟೂ ಸೋಂಕುಗಳಿಂದ ದೇಹವನ್ನು ರಕ್ಷಿಸಿಕೊಳ್ಳಲು ಅನುಕೂಲವಾಗುತ್ತದೆ. ಜೊತೆಗೆ, ಬೆಂಡೆಕಾಯಿಯನ್ನು ಪ್ರಿಬಯಾಟಿಕ್‌ ಎಂದೇ ಪರಿಗಣಿಸಲಾಗಿದೆ.

ಕೆಂಪು ರಕ್ತ ಕಣಗಳ ಹೆಚ್ಚಳಕ್ಕೆ ಅಗತ್ಯವಾದ ಅಂಶವೆಂದು ಫೋಲೇಟನ್ನು ಪರಿಗಣಿಸಲಾಗಿದೆ. ಇದರಿಂದ ರಕ್ತಹೀನತೆಯನ್ನು ನಿವಾರಿಸಬಹುದು. ಇದಲ್ಲದೆ, ಹೊಟ್ಟೆಯಲ್ಲಿರುವ ಭ್ರೂಣದ ಬೆಳವಣಿಗೆಗೆ ಫೋಲೇಟ್‌ ಅತಿ ಮುಖ್ಯ. ಈ ಅಂಶ ಬೆಂಡೆಕಾಯಿಯಲ್ಲಿ ದೊರೆಯುತ್ತದೆ.

ಇದರಲ್ಲಿ ವಿಟಮಿನ್‌ ಕೆ ಮತ್ತು ಕ್ಯಾಲ್ಶಿಯಂ ಅಂಶವಿದೆ. ಇದರಿಂದ ಮೂಳೆಗಳ ಬಲವರ್ಧನೆಗೆ ಅನುಕೂಲ ದೊರೆಯುತ್ತದೆ. ಜೊತೆಗೆ ಪೊಟಾಶಿಯಂ, ಮೆಗ್ನೀಶಿಯಂನಂಥ ಖನಿಜಗಳೂ ಇರುವುದರಿಂದ ಮೂಳೆಗಳು ಟೊಳ್ಳಾಗದಂತೆ, ಸಾಂದ್ರತೆ ಕಡಿಮೆಯಾಗದಂತೆ ಕಾಪಾಡುವುದು ಸುಲಭವಾಗುತ್ತದೆ.

 

Ad
Ad
Nk Channel Final 21 09 2023
Ad